ಜಮ್ಮು: (Rocks fell on highway) ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಬಂಡೆಕಲ್ಲುಗಳು ಉರುಳಿಬಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ ಹಾಗೂ ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ. ರಾಂಬನ್ ಜಿಲ್ಲೆಯ ಜಮ್ಮು-ಶ್ರೀನಗರ ಹೆದ್ದಾರಿಯ ರಾಮ್‌ಸೂ ಪ್ರದೇಶದಲ್ಲಿ ಎರಡು ಟ್ರಕ್‌ಗಳಿಗೆ ಬಂಡೆಕಲ್ಲುಗಳು ತಾಗಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಬಂಡೆಕಲ್ಲುಗಳು ಉರುಳಿ ಬಿದ್ದಿವೆ. ಪರಿಣಾಮ ಹೆದ್ದಾರಿಯಲ್ಲಿದ್ದ ಎರಡು ಟ್ರಕ್ ಗಳಿಗೆ ಬಂಡೆಕಲ್ಲುಗಳು ತಾಗಿವೆ. ಈ ಅವಘಡದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. “ಘಟನೆಯಲ್ಲಿ ಒಬ್ಬ ವ್ಯಕ್ತಿ ಪ್ರಾಣ ಕಳೆದುಕೊಂಡರೆ, ಇನ್ನಿಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ” ಎಂದು ಮೂಲಗಳು ತಿಳಿಸಿವೆ.
ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆಹರ್ ಮತ್ತು ಪಂಥಿಯಾಲ್ ಪ್ರದೇಶದಲ್ಲಿ ಬಂಡೆಕಲ್ಲುಗಳು ಉರುಳಿ ಬಿದ್ದ ಪರಿಣಾಮ ರಸ್ತೆ ಸಂಚಾರವನ್ನು ಸ್ಥಗಿತಗೊಳಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹೆದ್ದಾರಿಯು ಕಾಶ್ಮೀರ ಕಣಿವೆಯ ಜೀವನಾಡಿ ಮತ್ತು ಕಾಶ್ಮೀರವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಮುಖ್ಯ ರಸ್ತೆಯಾಗಿದ್ದು, ರಂಬನ್ ಜಿಲ್ಲೆಯಲ್ಲಿ ಮಳೆಯಿಂದಾಗಿ ಬಂಡೆಕಲ್ಲುಗಳು ಉರುಳಿಬಿದ್ದು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ದೊಡ್ಡ ಅಪಾಯ ಉಂಟಾಗಿದೆ.
ಅಗತ್ಯ ಸಾಮಗ್ರಿಗಳನ್ನು ಹೊತ್ತು ಕಾಶ್ಮೀರಕ್ಕೆ ಹೋಗುವ ಟ್ರಕ್‌ಗಳು ಮತ್ತು ಇತರ ವಾಹನಗಳು ಹೆದ್ದಾರಿಯ ಮೂಲಕ ಹಾದು ಹೋಗುತ್ತವೆ ಮತ್ತು ಕಾಶ್ಮೀರದಿಂದ ದೇಶದ ಉಳಿದ ಭಾಗಗಳಿಗೆ ಹಣ್ಣು ಸಾಗಿಸುವ ಟ್ರಕ್‌ಗಳು ಈ ರಸ್ತೆಯ ಮೂಲಕ ಹೋಗುತ್ತವೆ. ಇದೊಂದು ರಾಷ್ಟ್ರೀಯ ಹೆದ್ದಾರಿಯಾಗಿದ್ದು, ಅನೇಕ ಪ್ರದೇಶಗಳಿಗೆ ಇದೇ ಮಾರ್ಗವಾಗಿ ತೆರಳಬೇಕಾಗುತ್ತದೆ. ಕಲ್ಲು ಬಂಡೆ ಕುಸಿತವಾದ ಪರಿಣಾಮ ರಸ್ತೆ ಸಂಚಾರ ವ್ಯತ್ಯಯಗೊಂಡಿದ್ದು, ಸಂಚಾರ ಸ್ಥಗಿತಗೊಂಡಿದೆ.
ಇದನ್ನೂ ಓದಿ : Strange incident-man died: ವಿಚಿತ್ರ ಘಟನೆ: ಮಾಲೀಕನನ್ನೆ ಗುಂಡು ಹಾರಿಸಿ ಕೊಂದ ನಾಯಿ
ಇದನ್ನೂ ಓದಿ : Warrior heart attack death: ತಾಯಿಯ ವರ್ಷದ ಕಾರ್ಯಕ್ಕೆ ಹುಟ್ಟೂರಿಗೆ ಬರುತ್ತಿದ್ದ ಯೋಧ ಹೃದಯಾಘಾತದಿಂದ ಸಾವು
ಇದನ್ನೂ ಓದಿ : Building collapse-3 dead: 4 ಅಂತಸ್ತಿನ ಕಟ್ಟಡ ಕುಸಿತ: 3 ಸಾವು, 12 ಮಂದಿಯ ರಕ್ಷಣೆ
Rocks fell on highway: Rocks fell on the national highway: 1 dead, 2 injured