ಕರ್ನಾಟಕ ಸೇರಿದಂತೆ 8 ರಾಜ್ಯಗಳಲ್ಲಿ ದುಬಾರಿಯಾಗಲಿದೆ ಏರ್‌ಟೆಲ್ ಮಾಸಿಕ ಕನಿಷ್ಠ ರೀಚಾರ್ಜ್ ಬೆಲೆ

ನವದೆಹಲಿ: ಭಾರ್ತಿ ಏರ್‌ಟೆಲ್ ಕರ್ನಾಟಕ ಸೇರಿದಂತೆ 8 ಸ್ಥಳಗಳಲ್ಲಿ (Airtel recharge plan) ಮಾಸಿಕ ಕನಿಷ್ಠ ರೀಚಾರ್ಜ್ ದರವನ್ನು ಶೇ. 57ರಷ್ಟು ಹೆಚ್ಚಿಸಲಾಗಿದೆ. ಇನ್ನು ಉಳಿದಂತೆ ಆಂಧ್ರಪ್ರದೇಶ, ಬಿಹಾರ, ಉತ್ತರ ಪ್ರದೇಶ ಪಶ್ಚಿಮ, ಈಶಾನ್ಯ, ಜಮ್ಮು-ಕಾಶ್ಮೀರ, ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶಗಳು ಕನಿಷ್ಠ ರೀಚಾರ್ಜ್ ದರವನ್ನು ಹೆಚ್ಚಿಸಿದ ಇತರ ಸ್ಥಳಗಳಾಗಿವೆ.

ಇದೀಗ ಕಂಪನಿಯು ಕನಿಷ್ಠ ರೀಚಾರ್ಜ್ 99 ರೂ. ಯೋಜನೆಯ ಪ್ಯಾಕ್‌ನ್ನು ಸ್ಥಗಿತಗೊಳಿಸಿದೆ. ಈ ಯೋಜನೆಯಲ್ಲಿ 200 MB ಡೇಟಾ, ಕರೆ ಸೌಲಭ್ಯವು ಪ್ರತಿ ಸೆಕೆಂಡಿಗೆ 2.5 ರೂ.ಗೆ ಲಭ್ಯವಿತ್ತು. ಆದರೆ ಈಗ ರೂ 155 ಯೋಜನೆಯನ್ನು ಜಾರಿಗೊಳಿಸಲಾಗಿದೆ. ಆರಂಭದಲ್ಲಿ ಹರಿಯಾಣ ಮತ್ತು ಒಡಿಶಾದಲ್ಲಿ ರೂ 155 ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ನವೆಂಬರ್‌ನಲ್ಲಿಯೇ ಈ ಯೋಜನೆ ಜಾರಿಗೆ ಬಂದಿದೆ. ಈ ಏರ್‌ಟೆಲ್‌ ಪ್ಯಾಕ್‌ನಲ್ಲಿ ಅನಿಯಮಿತ ಕರೆ, 1 GB ಡೇಟಾ ಮತ್ತು 300 SMS ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ಇದೀಗ ರೂ.155 ಪ್ಲಾನ್ ಅನ್ನು ಇತರ ಸ್ಥಳಗಳಿಗೆ ವಿಸ್ತರಿಸಲಾಗಿದೆ ಎಂದು ಏರ್‌ಟೆಲ್ ಹೇಳಿದೆ. ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ಮೀಟರ್ ದರವನ್ನು ಸ್ಥಗಿತಗೊಳಿಸಲಾಗಿದೆ. ನಾವು ಹೊಸ ಯೋಜನೆಯನ್ನು ಪರಿಚಯಿಸಿದ್ದೇವೆ. ಇದು ಅನಿಯಮಿತ ಕರೆ, 1 GB ಡೇಟಾ ಮತ್ತು 300 SMS ಅನ್ನು ಒದಗಿಸುತ್ತದೆ. ಗ್ರಾಹಕರು ಯಾವುದೇ ನಿರ್ಬಂಧಗಳಿಲ್ಲದೆ ಈ ಯೋಜನೆಯನ್ನು ಪಡೆಯಬಹುದು. ಈ ಯೋಜನೆಯು ಗ್ರಾಹಕರಿಗೆ ಹೆಚ್ಚಿನ ಪ್ರಯೋಜನಗಳನ್ನು ತರುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಏರ್‌ಟೆಲ್ ವಕ್ತಾರರು ಹೇಳಿದ್ದಾರೆ. ಮುಂದಿನ ಕೆಲವೇ ದಿನಗಳಲ್ಲಿ ಏರ್‌ಟೆಲ್ 155 ರೂ.ಗಳ ಯೋಜನೆಯನ್ನು ದೇಶಾದ್ಯಂತ ಜಾರಿಗೆ ತರಲಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ : HP Envy x360 15 Laptops : ನೀವು ಕಂಟೆಂಟ್‌ ಕ್ರಿಯೇಟರ್‍ರಾ? ಹಾಗಾದರೆ HP, ಈ ಲ್ಯಾಪ್‌ಟಾಪ್‌ ಅನ್ನು ನಿಮಗಾಗಿ ಪರಿಚಯಿಸಿದೆ

ಇದನ್ನೂ ಓದಿ : WhatsApp Latest Update : ಐಫೋನ್‌ನ ವಾಟ್ಸ್‌ಅಪ್‌ ಗ್ರೂಪ್‌ ಅಡ್ಮಿನ್‌ಗಳಿಗೆ ಗುಡ್‌ ನ್ಯೂಸ್‌! ಈ ಶಾರ್ಟ್‌ಕಟ್‌ ವೈಶಿಷ್ಟ್ಯಗಳು ನಿಮಗಾಗಿ

ಇದನ್ನೂ ಓದಿ : Nokia T21 Tablet ಖರೀದಿಸಲು ಸುಸಮಯ; ಪ್ರೀಬುಕ್ಕಿಂಗ್‌ ಮೇಲೆ ಇದೆ 1,000 ರೂ. ಡಿಸ್ಕೌಂಟ್‌

ಇದೀಗ ಭಾರ್ತಿ ಏರ್‌ಟೆಲ್‌ 155 ರೂ.ಗಿಂತ ಕಡಿಮೆ ಇರುವ ಎಲ್ಲಾ ಕರೆ ಮತ್ತು SMS ಯೋಜನೆಗಳನ್ನು ರದ್ದುಗೊಳಿಸಲು ಕಂಪನಿಯು ಪರಿಗಣಿಸುತ್ತಿದೆ ಎಂದು ಹೇಳಲಾಗಿದೆ. ಭಾರ್ತಿ ಏರ್‌ಟೆಲ್ ನವೆಂಬರ್ 21 ರಂದು ಹರಿಯಾಣ ಮತ್ತು ಒಡಿಶಾ ವಲಯಗಳಲ್ಲಿ ಕನಿಷ್ಠ ರೀಚಾರ್ಜ್ ದರವನ್ನು ಪ್ರಾಯೋಗಿಕ ಆಧಾರದ ಮೇಲೆ 155 ರೂ. 28 ದಿನಗಳವರೆಗೆ ಇನ್ನು ಕೆಲವೇ ದಿನಗಳಲ್ಲಿ ದೇಶಾದ್ಯಂತ ವಿಸ್ತರಣೆಯಾಗುವ ಸಾಧ್ಯತೆ ಇದೆ ಎಂದು ಕಂಪನಿಯ ಉನ್ನತ ಮೂಲಗಳು ತಿಳಿಸಿವೆ. ಈ ಹಿಂದೆ ಏರ್‌ಟೆಲ್ ಕೂಡ ಇದೇ ಮಾದರಿಯನ್ನು ಅನುಸರಿಸಿತ್ತು. ಆಯ್ದ ವಲಯಗಳಲ್ಲಿ ಕನಿಷ್ಠ ರೀಚಾರ್ಜ್ ದರವನ್ನು 79 ರಿಂದ 99 ಕ್ಕೆ ಹೆಚ್ಚಿಸಲಾಗಿದೆ. ನಂತರ ಇದನ್ನು ದೇಶಾದ್ಯಂತ ಜಾರಿಗೆ ತರಲಾಯಿತು.

Airtel recharge plan: Airtel monthly minimum recharge price will be expensive in 8 states including Karnataka

Comments are closed.