ದೆಹಲಿ : Arvind Kejriwal : ದೆಹಲಿಯಲ್ಲಿ ಅಧಿಕಾರದಲ್ಲಿರುವ ಆಪ್ ಸರ್ಕಾರವನ್ನು ಉರುಳಿಸಲು ಬಿಜೆಪಿಯು 800 ಕೋಟಿ ರೂಪಾಯಿ ಮೀಸಲಿಟ್ಟಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪ ಮಾಡಿದ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ರಾಜಕೀಯ ಹೈಡ್ರಾಮಾ ಜೋರಾಗಿದೆ. ದೆಹಲಿ ಸರ್ಕಾರವನ್ನು ಪತನಗೊಳಿಸಲು ಬಿಜೆಪಿಯು 800 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಒಬ್ಬ ಶಾಸಕನಿಗೆ ಬಿಜೆಪಿಯು 20 ಕೋಟಿ ರೂಪಾಯಿ ಆಫರ್ ನೀಡಿ ಕುದುರೆ ವ್ಯಾಪಾರ ಮಾಡುತ್ತಿದೆ. ಆದರೆ ಈ 800 ಕೋಟಿ ರೂಪಾಯಿಗಳನ್ನು ಅವರು ಎಲ್ಲಿಂದ ತಂದಿದ್ದಾರೆ ಎಂದು ಸಿಎಂ ಕೇಜ್ರಿವಾಲ್ ಪ್ರಶ್ನೆ ಮಾಡಿದ್ದಾರೆ.
ನಮ್ಮ ಸರ್ಕಾರ ಸ್ಥಿರವಾಗಿದೆ. ದೆಹಲಿಯಲ್ಲಿ ನಡೆಯುತ್ತಿರುವ ಎಲ್ಲಾ ಒಳ್ಳೆಯ ಕಾರ್ಯಗಳು ಮುಂದುವರಿಯುತ್ತದೆ ಎಂದು ಸಿಎಂ ಅರವಿಂದ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. ಬಿಜೆಪಿಯು ನಮ್ಮ ಡಿಸಿಎಂ ಮನೀಶ್ ಸಿಸೋಡಿಯಾರಿಗೆ ಪಕ್ಷವನ್ನು ತೊರೆಯುವಂತೆ ಸಂದೇಶ ನೀಡಿದೆ ಎಂದು ಕೇಜ್ರಿವಾಲ್ ಪುನರುಚ್ಛರಿಸಿದ್ದಾರೆ.
ದೆಹಲಿಯಲ್ಲಿ ಪ್ರಸ್ತುತ ನಡೆಯುತ್ತಿರುವ ಸನ್ನಿವೇಶ ಹಾಗೂ ಆಪ್ ನಾಯಕರ ಮೇಲೆ ನಡೆಯುತ್ತಿರುವ ಸಿಬಿಐ ಹಾಗೂ ಇಡಿ ದಾಳಿಗಳ ಕುರಿತು ಚರ್ಚೆಯನ್ನು ನಡೆಸಲು ಇಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ನಿವಾಸದಲ್ಲಿ ಆಮ್ ಆದ್ಮಿ ಪಕ್ಷದ ನಾಯಕರು ಚರ್ಚೆಯನ್ನು ನಡೆಸಿದ್ದಾರೆ. ಆಪ್ನ ಕೆಲವು ಶಾಸಕರು ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ.
ಮನೀಶ್ ಸಿಸೋಡಿಯಾರಿಗೆ ಬಿಜೆಪಿ ಸಂದೇಶ ರವಾನಿಸಿದ್ದು ಆಪ್ ಹಾಗೂ ಅರವಿಂದ್ ಕೇಜ್ರಿವಾಲ್ರನ್ನು ತೊರೆಯುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ಆಪ್ನ ಕೆಲವು ಶಾಸಕರನ್ನು ಸೇರಿಸಿಕೊಂಡು ಬಿಜೆಪಿ ಸೇರಬೇಕೆಂದು ಸೂಚನೆ ನೀಡಿದ್ದಾರೆ. ಬಿಜೆಪಿಗೆ ಬಂದಲ್ಲಿ ನಿಮಗೆ ದೆಹಲಿ ಸಿಎಂ ಸ್ಥಾನವನ್ನು ನೀಡುತ್ತೇವೆ. ಅಲ್ಲದೇ ನಿಮ್ಮ ಮೇಲೆ ಸದ್ಯ ಇರುವ ಎಲ್ಲಾ ಪ್ರಕರಣಗಳನ್ನೂ ಹಿಂಪಡೆಯುತ್ತೇವೆ ಎಂದು ಆಫರ್ ನೀಡಿದ್ದರು ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ.
ನನ್ನ ಹಿಂದಿನ ಜನ್ಮದಲ್ಲಿ ನಾನು ಯಾವ ಒಳ್ಳೆಯ ಕೆಲಸ ಮಾಡಿದ್ದೇನೋ ಗೊತ್ತಿಲ್ಲ. ಈ ಜನ್ಮದಲ್ಲಿ ನನಗೆ ಮನೀಷ್ ಸಿಸೋಡಿಯಾರಂತಹ ವ್ಯಕ್ತಿ ಸಿಕ್ಕಿದ್ದಾರೆ. ಅವರು ಬಿಜೆಪಿಯ ಎಲ್ಲಾ ಆಮಿಷಗಳನ್ನು ತಿರಸ್ಕರಿಸಿ ನನ್ನೊಂದಿಗೆ ನಿಂತಿದ್ದಾರೆ. ಬಿಜೆಪಿಗೆ ಸೇರಲು ನಮ್ಮ ಶಾಸಕರು ಹಣದ ಆಮಿಷ ಒಡ್ಡುತ್ತಿದ್ದಾರೆ. ಆಪ್ ತೊರೆದು ಬಿಜೆಪಿ ಸೇರಲು ಬಿಜೆಪಿಯು ಶಾಸಕರಿಗೆ ತಲಾ 20 ಕೋಟಿ ರೂಪಾಯಿಗಳನ್ನು ನೀಡುತ್ತಿದೆ ಎಂಬ ಸುದ್ದಿ ಸಿಕ್ಕಿದೆ. ಆದರೆ ಆಪ್ನ ಒಬ್ಬನೇ ಒಬ್ಬ ಶಾಸಕ ಕೂಡ ಬಿಜೆಪಿ ಆಫರ್ ಮುಟ್ಟಿಲ್ಲ ಎನ್ನುವುದು ನನಗೆ ಸಂತಸದ ವಿಷಯವಾಗಿದೆ ಎಂದು ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಇದನ್ನು ಓದಿ : Music Therapy : ಸಂಗೀತದಿಂದ ಸ್ವಾಸ್ಥ್ಯ : ಸಾಮಾನ್ಯ ಮಾನಸಿಕ ಆರೋಗ್ಯ ಸುಧಾರಣೆಗೆ ಇದು ಬಹಳ ಮುಖ್ಯ
ಇದನ್ನೂ ಓದಿ : Minister R. Ashok : ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಬಗ್ಗೆ ಯೋಚಿಸಿಲ್ಲ : ಸಚಿವ ಆರ್.ಅಶೋಕ್
Rs 800 Crore to ‘Buy’ 40 MLAs: Arvind Kejriwal Fires Fresh Salvo at BJP | KEY POINTS