ಮುಂಬೈ: ಸಮುದ್ರದ ನಡುವಲ್ಲಿ ನಡೆದ ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿರುವ ಬಾಲಿವುಡ್ ಖ್ಯಾತ ನಟ ಶಾರೂಖ್ ಖಾನ್ ಪುತ್ರನಿಗೆ ಸದ್ಯಕ್ಕೆ ಬಿಡುಗಡೆ ಭಾಗ್ಯ ಗೋಚರಿಸುತ್ತಿಲ್ಲ. ಇನ್ನೊಂದೆಡೆ ಎನ್‌ಸಿಬಿ ಆರ್ಯನ್ ಖಾನ್ ಮೂರು ವರ್ಷಗಳಿಂದಲೂ ಡ್ರಗ್ಸ್ ದಾಸನಾಗಿದ್ದ ಅನ್ನೋದನ್ನು ನ್ಯಾಯಲಯ ಮುಂದೆ ಹೇಳಿದ್ದಾರೆ.
ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿದ್ದಾನೆ. ಆರ್ಯನ್ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಮುಂಬೈನ ಸೆಷನ್ಸ್ ಕೋರ್ಟ್‌ನಲ್ಲಿ ವಿಚಾರಣೆ ನಡೆಯಿತು. ಈ ವೇಳೆಯಲ್ಲಿ ಎನ್‌ಸಿಬಿ ಪರ ವಕೀಲರು ವಿಚಾರಣೆಯನ್ನು ನಡೆಸಿದ್ದಾರೆ. ಈ ವೇಳೆಯಲ್ಲಿ ಆರ್ಯನ್ ಖಾನ್‌ಗೆ ಕಳೆದ ಮೂರು ವರ್ಷ ಗಳಿಂದಲೂ ಡ್ರಗ್ಸ್ ಸೇವನೆ ಮಾಡುತ್ತಿದ್ದ ಅನ್ನೋ ವಿಚಾರವನ್ನು ನ್ಯಾಯಾಲಯದ ಎನ್‌ಸಿಬಿ ಪರ ವಕೀಲರಾದ ಅನಿಲ್ ಸಿಂಗ್ ಮಹತ್ವದ ಅಂಶದೊಂದಿಗೆ ವಾದ ಮಂಡಿಸಿದ್ದಾರೆ,

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಯನ್ ಖಾನ್ ಸ್ನೇಹಿತನಾಗಿರುವ ಅರ್ಬಾಜ್ ಮರ್ಚೆಂಟ್ ಬಳಿಯಲ್ಲಿ ಮಾಧಕ ವಸ್ತು ಪತ್ತೆಯಾಗಿತ್ತು. ಆರ್ಯನ್ ಖಾನ್ ಕೂಡಲ ಮಾದಕ ದ್ರವ್ಯ ವ್ಯಸನಿಯಾಗಿದ್ದ. ಆರ್ಯನ್ ಖಾನ್ ಬಳಿಯಲ್ಲಿ ಮಾಧಕ ವಸ್ತು ಪತ್ತೆಯಾಗಿಲ್ಲವಾದರೂ ಆತನ ಸ್ನೇಹಿತನ ಬಳಿಯಲ್ಲಿ ಮಾದಕ ವಸ್ತು ಇರುವುದನ್ನು ಒಪ್ಪಿಕೊಂಡಿದ್ದಾನೆ. ಈ ಕುರಿತು ಪೊಲೀಸರ ಪಂಚನಾಮೆಯಲ್ಲಿಯೂ ಸಹಿ ಮಾಡಿದ್ದಾರೆ. ಎನ್‍ಡಿಪಿಎಸ್ ಕಾಯ್ದೆಯಡಿ ಎಷ್ಟು ಪ್ರಮಾಣದ ಡ್ರಗ್ಸ್ ಪತ್ತೆಯಾಗಿದೆ ಅನ್ನೋ ಬದಲು ಆರೋಪಿಗೆ ಪ್ರಕರಣಕ್ಕಿರುವ ಸಂಬಂಧವನ್ನು ಪತ್ತೆ ಮಾಡಬೇಕಾಗಿದೆ . ಹೀಗಾಗಿ ಪ್ರಕರಣ ತನಿಖೆಯ ಹಂತದಲ್ಲಿ ಇರುವ ಹಿನ್ನೆಲೆಯಲ್ಲಿ ಆರೋಪಿಗೆ ಜಾಮೀನು ನೀಡಬಾರದು ಎಂದು ವಾದ ಮಂಡಿಸಿದ್ದಾರೆ.

ಆರ್ಯನ್ ಹಾಗೂ ಇತರ ಆರೋಪಿಗಳು ಸಲ್ಲಿಕೆ ಮಾಡಿರುವ ಜಾಮೀನು ಮೇಲ್ಮನವಿ ಅರ್ಜಿಯ ಕುರಿತು ವಿಚಾರಣೆಯನ್ನು ನಡೆಸಿರುವ ನ್ಯಾಯಾಲಯದ ನ್ಯಾ.ವಿವಿ ಪಾಟೀಲ್ ಅವರು ಸುದೀರ್ಘವಾಗಿ ವಾದ ವಿವಾದಗಳನ್ನು ಆಲಿಸಿ ಜಾಮೀನು ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 20ಕ್ಕೆ ಮುಂದೂಡಿಕೆ ಮಾಡಿದ್ದಾರೆ.

ಎನ್‌ಸಿಬಿ ಡ್ರಗ್ಸ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಯನ್ನು ಚುರುಕುಗೊಳಿಸಿದೆ. ಇನ್ನೊಂಡೆಯಲ್ಲಿ ಸಮುದ್ರದಲ್ಲಿ ನಡೆದಿರುವ ಡ್ರಗ್ಸ್ ಪಾರ್ಟಿಯಲ್ಲಿ ಭಾಗಿ ಆಗಿರುವ ವರ ಕುರಿತು ಮಾಹಿತಿಯನ್ನು ಕಲೆ ಹಾಕುವ ಕಾರ್ಯವನ್ನು ಅಧಿಕಾರಿಗಳು ನಡೆಸುತ್ತಿದ್ದಾರೆ. ಇನ್ನೊಂದೆಡೆಯಲ್ಲಿ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ ಯಾಗಿದೆ. ಈ ಹಿನ್ನೆಲೆಯಲ್ಲಿ ಬಾಲಿವುಡ್ ಬಾದ್‌ಶಾ ಪುತ್ರ ಆರ್ಯನ್‌ಗೆ ಇನ್ನಷ್ಟು ದಿನ ಜಾಗರಣೆ ಫಿಕ್ಸ್.
ಇದನ್ನೂ ಓದಿ : ಬಾಲಿವುಡ್ ನಟ ಶಾರೂಕ್ ಖಾನ್ ಗೆ ಬಿಗ್ ಶಾಕ್ : ಪುತ್ರ ಆರ್ಯನ್ ಖಾನ್ ಚರಸ್ ಸೇವನೆ ಮಾಡಿರುವುದು ದೃಢ
ಇದನ್ನೂ ಓದಿ : ಆರ್ಯನ್ ಖಾನ್ ನಿಂದ ತಂದೆಯ ಜಾಹೀರಾತಿಗೆ ಕತ್ತರಿ : ಶಾರುಖ್ ಖಾನ್ ನಟಿಸಿರುವ ಜಾಹೀರಾತು ನಿಲ್ಲಿಸಿದ BYJU’s
( Shah Rukh Khan’s son not released : Aryan Khan, a drug addict for 3 years )