Rahul Dravid Coach : ರಾಹುಲ್‌ ದ್ರಾವಿಡ್‌ ಟೀಂ ಇಂಡಿಯಾ ಕೋಚ್‌ ?

ಮುಂಬೈ : ಟಿ20 ವಿಶ್ವಕಪ್‌ ಬೆನ್ನಲ್ಲೇ ಟೀಂ ಇಂಡಿಯಾ ಕೋಚ್‌ ರವಿಶಾಸ್ತ್ರೀ ಅವರ ಒಪ್ಪಂದ ಮುಕ್ತಾಯವಾಗಲಿದೆ. ನವೆಂಬರ್‌ ತಿಂಗಳಿನಿಂದಲೇ ನ್ಯೂಜಿಲ್ಯಾಂಡ್‌ ಸರಣಿ ಆರಂಭ ಗೊಳ್ಳಲಿದೆ. ಇದೇ ಕಾರಣಕ್ಕೆ ಕಿವಿಸ್‌ ವಿರುದ್ದದ ಸರಣಿಗೆ ರಾಹುಲ್‌ ದ್ರಾವಿಡ್‌ ಅವರನ್ನು ಟೀಂ ಇಂಡಿಯಾ ಕೋಚ್‌ ಆಗಿ ಬಿಸಿಸಿಐ ನೇಮಕ ಮಾಡುವ ಸಾಧ್ಯತೆಯಿದೆ.

ಇದೇ ತಿಂಗಳಿನಿಂದ ಆರಂಭವಾಗಲಿರುವ ಟಿ20 ವಿಶ್ವಕಪ್‌ ಸರಣಿಯ ನಂತರ ಭಾರತ ಕ್ರಿಕೆಟ್‌ ತಂಡಕ್ಕೆ ಹೊಸ ಕೋಚ್‌ ನೇಮಕ ಮಾಡಲು ಬಿಸಿಸಿಐ ಮುಂದಾಗಿದೆ. ನಾಯಕ ವಿರಾಟ್‌ ಕೊಯ್ಲಿ ಚುಟುಕು ಕ್ರಿಕೆಟ್‌ ನಾಯಕನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇನ್ನೊಂದೆಡೆಯಲ್ಲಿ ಕೋಚ್‌ ರವಿಶಾಸ್ತ್ರಿ ಅವರನ್ನು ಕೋಚ್‌ ಹುದ್ದೆಯಲ್ಲಿ ಮುಂದುವರಿಸಲು ಬಿಸಿಸಿಐ ಸಿದ್ದವಿಲ್ಲ. ಇದೇ ಕಾರಣಕ್ಕೆ ಈಗಾಗಲೇ ಹೊಸ ಕೋಚ್‌ಗಾಗಿ ಹುಡುಕಾಟವನ್ನು ನಡೆಸುತ್ತಿದೆ.

ಟೀಂ ಇಂಡಿಯಾದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಅವರನ್ನು ಟೀಂ ಇಂಡಿಯಾ ಕೋಚ್‌ ಆಗಿ ನೇಮಕ ಮಾಡಲಾಗುತ್ತದೆ ಎಂಬ ಮಾತು ಕೇಳಿಬಂದಿತ್ತು. ಇದೀಗ ನ್ಯೂಜಿಲ್ಯಾಂಡ್‌ ಸರಣಿಗೆ ಮಧ್ಯಂತರ ಕೋಚ್‌ ಆಗಿ ರಾಹುಲ್‌ ದ್ರಾವಿಡ್‌ ಆಯ್ಕೆಯಾಗೋದು ಬಹುತೇಕ ಖಚಿತ. ಈಗಾಗಲೇ ಬಿಸಿಸಿಐ ರಾಹುಲ್‌ ದ್ರಾವಿಡ್‌ ಅವರ ಜೊತೆಲ್ಲಿಯೂ ಮಾತುಕತೆ ನಡೆಸಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ ಎನ್ನಲಾಗುತ್ತಿದೆ.

ಈ ಹಿಂದೆ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಹಾಗೂ ಇಂಗ್ಲೆಂಡ್‌ ಪ್ರವಾಸದ ವೇಳೆಯಲ್ಲಿಯೇ ನಡೆದ ಶ್ರೀಲಂಕಾ ವಿರುದ್ದ ಸರಣಿಗೆ ರಾಹುಲ್‌ ಅವರನ್ನು ಕೋಚ್‌ ಆಗಿ ನೇಮಕ ಮಾಡಲಾಗಿತ್ತು. ಯುವ ತಂಡ ಶ್ರೀಲಂಕಾ ಸರಣಿಯಲ್ಲಿ ಅದ್ಬುತ ಪ್ರದರ್ಶನವನ್ನು ನೀಡಿತ್ತು. ರವಿಶಾಸ್ತ್ರಿ ಇದೇ ತಿಂಗಳು ಕೋಚ್‌ ಹುದ್ದೆಗೆ ರಾಜೀನಾಮೆಯನ್ನು ನೀಡುವ ಹಿನ್ನೆಲೆಯಲ್ಲಿ ಅಷ್ಟು ಸುಲಭದಲ್ಲಿ ಪೂರ್ಣಪ್ರಮಾಣದ ಕೋಚ್‌ ನೇಮಕ ಮಾಡೋದು ಕಷ್ಟಸಾಧ್ಯ. ನವೆಂಬರ್‌ 17ರಿಂದ ನ್ಯೂಜಿಲ್ಯಾಂಡ್‌ ವಿರುದ್ದ ಸರಣಿ ಆರಂಭಗೊಳ್ಳಲಿದೆ ಇದೇ ಕಾರಣದಿಂದಲೇ ರಾಹುಲ್‌ ದ್ರಾವಿಡ್‌ ಅವರನ್ನು ಮಧ್ಯಂತರ ಕೋಚ್‌ ಆಗಿ ನೇಮಕ ಮಾಡಲಾಗುತ್ತದೆ.

( Rahul Dravid Likely To Be Interim Coach Of Team India For Home Series Vs New Zealand Tour )

Comments are closed.