ಮಂಗಳವಾರ, ಜೂನ್ 17, 2025
HomeNationalSecurity Forces : ಗಡಿಯಲ್ಲಿ ಅಳುತ್ತಿದ್ದ ಮಗುವನ್ನು ಪಾಕಿಸ್ತಾನಿ ಪೋಷಕರಿಗೆ ಹಸ್ತಾಂತರಿಸಿದ ಬಿಎಸ್​ಎಫ್​ ಪಡೆ

Security Forces : ಗಡಿಯಲ್ಲಿ ಅಳುತ್ತಿದ್ದ ಮಗುವನ್ನು ಪಾಕಿಸ್ತಾನಿ ಪೋಷಕರಿಗೆ ಹಸ್ತಾಂತರಿಸಿದ ಬಿಎಸ್​ಎಫ್​ ಪಡೆ

- Advertisement -

ಪಂಜಾಬ್​ : Security Forces : ಗಡಿ ಸಂಘರ್ಷ ಎಂತಾದ್ದೇ ಇರಲಿ. ಮಾನವೀಯತೆ ಎಂಬ ಪ್ರಶ್ನೆ ಹುಟ್ಟಿದಾಗ ಭಾರತೀಯ ಸೇನೆಯು ಚೀನಾವೇ ಆಗಿರಲಿ ಅಥವಾ ಪಾಕಿಸ್ತಾನವೇ ಆಗಿರಲಿ ಎಲ್ಲಾ ಗಡಿ ದ್ವೇಷಗಳನ್ನು ಮರೆತು ವರ್ತಿಸುತ್ತೆ ಎಂಬುದು ಅನೇಕ ಬಾರಿ ಸಾಬೀತಾಗಿದೆ. ಭಾರತವು ಎಂದಿಗೂ ತಾನಾಗಿಯೇ ಯಾವ ದೇಶದ ಮೇಲೂ ಗಡಿ ವಿಸ್ತರಿಸಬೇಕೆಂದು ಆಕ್ರಮಣ ಮಾಡಿಲ್ಲ. ಆದರೆ ತನ್ನ ನೆಲದ ಸುದ್ದಿಗೆ ಬಂದಾಗ ಮಾತ್ರ ಶತ್ರು ರಾಷ್ಟ್ರಗಳಿಗೆ ತಕ್ಕ ಶಾಸ್ತಿಯನ್ನು ಮಾಡಿದೆ. ಅದರಂತೆ ಈ ಬಾರಿ ಭಾರತೀಯ ಭದ್ರತಾ ಪಡೆಯ ಸಿಬ್ಬಂದಿ ಮಾಡಿರುವ ಒಂದು ಕೆಲಸವು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.


ಅಜಾಗರೂಕತೆಯಿಂದಾಗಿ ಪಾಕಿಸ್ತಾನದ ಗಡಿ ದಾಟಿ ಪಂಜಾಬ್​​ಗೆ ಬಂದಿದ್ದ ಮೂರು ವರ್ಷದ ಗಂಡು ಮಗುವನ್ನು ರಕ್ಷಿಸಿದ್ದ ಭಾರತೀಯ ಭದ್ರತಾ ಪಡೆಯ ಸಿಬ್ಬಂದಿ ಮಗುವನ್ನು ಅತ್ಯಂತ ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಭಾರತೀಯ ಭದ್ರತಾ ಪಡೆಯ ಈ ಮಾನವೀಯ ಕಾರ್ಯಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ನೆಟ್ಟಿಗರು ಹ್ಯಾಟ್ಸ್​ಆಫ್​ ಎನ್ನುತ್ತಿದ್ದಾರೆ.


ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ಪಂಜಾಬ್​ ರಾಜ್ಯದ ಫಿರೋಜ್​ಪುರ ಸೆಕ್ಟರ್​ನಲ್ಲಿ ಈ ಘಟನೆ ಸಂಭವಿಸಿದೆ. ಭದ್ರತಾ ಪಡೆಯ ಸಿಬ್ಬಂದಿ ಫಿರೋಜ್​ಪುರ ಸೆಕ್ಟರ್​ನಲ್ಲಿ ಗಡಿ ಕಾಯುತ್ತಿದ್ದ ಸಂದರ್ಭದಲ್ಲಿ ಐಬಿ ಬೇಲಿಯ ಬಳಿಯಲ್ಲಿ ಗಂಡು ಮಗುವೊಂದು ಅಳುತ್ತಿರುವುದನ್ನು ಗಮನಿಸಿದ್ದಾರೆ.


ಬಿಕ್ಕಿ ಬಿಕ್ಕಿ ಅಳುತ್ತಿದ್ದ ಪುಟ್ಟ ಕಂದಮ್ಮ ತನ್ನ ತಂದೆಯನ್ನು ಕರೆಯುತ್ತಿತ್ತು. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ತಕ್ಷಣವೇ ಬಿಎಸ್​ಎಫ್​ ಫೀಲ್ಡ್​ ಕಮಾಂಡರ್​ ಪಾಕಿಸ್ತಾನಿ ರೇಂಜರ್​ಗಳ ಜೊತೆ ಫ್ಲ್ಯಾಗ್​ ಮೀಟಿಂಗ್​​ಗೆ ಮನವಿ ಮಾಡಿದರು. ಸಭೆ ನಡೆಸುವ ಮೂಲಕ ನಾವು ಮಗುವನ್ನು ಪೋಷಕರಿಗೆ ಹಿಂತಿರುಗಿಸಬಹುದು ಎಂದು ಮನವರಿಕೆ ಮಾಡಿದರು. ಕೂಡಲೇ ಕಾರ್ಯಪ್ರವೃತ್ತರಾದ ಬಿಎಸ್​ಎಫ್​ ಪಡೆ ಪಾಕಿಸ್ತಾನ ರೇಂಜರ್​​​ ಸಮ್ಮುಖದಲ್ಲಿ ಮಗುವಿನ ಪೋಷಕರಿಗೆ ಮಗುವನ್ನು ಹಸ್ತಾಂತರಿಸಿದ್ದಾರೆ.

ಇದನ್ನು ಓದಿ : MLA Basana Gowda Patil Yatnal : ಮಂತ್ರಿ ಸ್ಥಾನಕ್ಕೆ ಕ್ಷೇತ್ರ ಬಿಟ್ಟು ವರಿಷ್ಠರ ಮನೆ ಅಲೆಯಬೇಕು : ಬಸನಗೌಡ ಪಾಟೀಲ್​ ಯತ್ನಾಳ್​

ಇದನ್ನೂ ಓದಿ : Rahul Dravid celebrate : ರಾಹುಲ್ ದ್ರಾವಿಡ್ ಯಾವತ್ತಾದ್ರೂ ಈ ರೀತಿ ಸಂಭ್ರಮಿಸಿದ್ದನ್ನು ನೋಡಿದ್ದೀರಾ ?

Security Forces Reunite 3-Year-Old Pakistan Boy Found At Border With Family

RELATED ARTICLES

Most Popular