Sanjay Raut : ಗುವಾಹಟಿಗೆ ಬರುವಂತೆ ನನಗೂ ಆಫರ್​ ಬಂದಿತ್ತು : ಸಂಜಯ್​ ರಾವತ್​ ಶಾಕಿಂಗ್​ ಹೇಳಿಕೆ

ಮಹಾರಾಷ್ಟ್ರ : Sanjay Raut : ಮಹಾರಾಷ್ಟ್ರದಲ್ಲಿ ರಾಜಕೀಯ ತಿರುವುಗಳ ನಡುವೆಯೇ ಶಿವಸೇನೆಯ ನಾಯಕ ಸಂಜಯ್​ ರಾವತ್​​ ಇಂದು ಹೊಸದೊಂದು ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ. ಗುವಾಹಟಿಯ ಬಂಡಾಯ ಶಾಸಕರ ಗುಂಪನ್ನು ಸೇರುವಂತೆ ನನಗೂ ಆಫರ್​ ನೀಡಿದ್ದರು ಎಂದು ಸಂಜಯ್​ ರಾವತ್​ ಹೇಳಿದ್ದಾರೆ. ಆದರೆ ನಾನು ಬಾಳಾ ಸಾಹೇಬ್​ ಠಾಕ್ರೆಯ ಹಾದಿಯನ್ನು ಅನುಸರಿಸಿದ್ದರಿಂದ ನಾನು ಈ ಆಫರ್​​ ನಿರಾಕರಿಸಿದೆ ಎಂದು ಹೇಳಿದ್ದಾರೆ.


ನಾನು ಜಾರಿ ನಿರ್ದೇಶನಾಲಯದ ವಿಚಾರಣೆಗೂ ಅತ್ಯಂತ ಆತ್ಮವಿಶ್ವಾಸದಿಂದ ಹಾಜರಾಗಿದ್ದೆ. ನಾನು ಯಾವುದೇ ತಪ್ಪು ಮಾಡಿಲ್ಲ. 10 ಗಂಟೆಗಳ ವಿಚಾರಣೆಯನ್ನು ಎದುರಿಸಿ ನಾನು ಹಿಂತಿರುಗಿದೆ. ಗುವಾಹಟಿಗೂ ನಾನು ಹೋಗಬಹುದಿತ್ತು. ಆದರೆ ನಾನು ಬಾಳಾ ಸಾಹೇಬರಿಂದ ರಾಜಕೀಯ ಕಲಿತವನು. ಸತ್ಯ ನಮ್ಮ ಕಡೆ ಇರುವಾಗ ನಾವೇಕೆ ಭಯ ಪಡಬೇಕು ಎಂದು ಸಂಜಯ್​ ರಾವತ್​ ಹೇಳಿದ್ದಾರೆ.

ಏಕನಾಥ್​ ಶಿಂಧೆ ಶಿವಸೇನೆಯ ಸಿಎಂ ಅಲ್ಲ. ಇದನ್ನು ಈಗಾಗಲೇ ಉದ್ಧವ್​ ಠಾಕ್ರೆ ಸ್ಪಷ್ಟಪಡಿಸಿದ್ದಾರೆ. ಮುಂಬೈನಲ್ಲಿ ಶಿವಸೇನೆ ಬಲವನ್ನು ಕಡಿಮೆ ಮಾಡಲು ಬಿಜೆಪಿಯು ಮಾಡಿದ ಪ್ಲಾನ್​ ಇದಾಗಿದೆ. ಇದಕ್ಕಾಗಿಯೇ ಅವರು ಏಕನಾಥ್​ ಶಿಂಧೆಯನ್ನು ಸಿಎಂ ಆಗಿ ಆಯ್ಕೆ ಮಾಡಿದ್ದಾರೆ. ನಿಜವಾದ ಶಿವ ಸೈನಿಕರು ಯಾವುದೇ ಆಮಿಷಕ್ಕೆ ಮಣಿಯುವುದಿಲ್ಲ. ನಿಜವಾದ ಶಿವಸೇನೆ ನಾಯಕರು ಉದ್ಧವ್​ ಠಾಕ್ರೆ ಜೊತೆ ನಿಂತಿದ್ದಾರೆ ಎಂದು ಸಂಜಯ್​ ರಾವತ್​ ಗುಡುಗಿದರು.


ಶಿವಸೇನೆಯನ್ನು ಒಡೆದು ಹಾಕಲು ಬಿಜೆಪಿ ತಂತ್ರವನ್ನು ರೂಪಿಸಿದೆ ಹಾಗೂ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಬಂಡಾಯ ಪಾಳಯವನ್ನು ನಿಜವಾದ ಶಿವಸೇನೆ ಎಂದು ಕರೆದುಕೊಳ್ಳುವುದು ಈ ತಂತ್ರದ ಒಂದು ಭಾಗವಾಗಿದೆ ಎಂದು ಶಿವಸೇನೆ ವಕ್ತಾರ ಸಂಜಯ್​ ರಾವತ್​ ಹೇಳಿದ್ದಾರೆ.ಮುಂಬೈನ ‘ಚಾಲ್’ (ವಠಾರ) ಮರು-ಅಭಿವೃದ್ಧಿ ಮತ್ತು ಅವರ ಪತ್ನಿ ಮತ್ತು ಸ್ನೇಹಿತರನ್ನು ಒಳಗೊಂಡಿರುವ ಸಂಬಂಧಿತ ಹಣಕಾಸಿನ ವಹಿವಾಟಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಯಲ್ಲಿ ಇಡಿ ರಾಜ್ಯಸಭಾ ಸದಸ್ಯನನ್ನು ವಿಚಾರಣೆಗೆ ಕರೆದಿತ್ತು.

ಇದನ್ನು ಓದಿ : Rahul Dravid celebrate : ರಾಹುಲ್ ದ್ರಾವಿಡ್ ಯಾವತ್ತಾದ್ರೂ ಈ ರೀತಿ ಸಂಭ್ರಮಿಸಿದ್ದನ್ನು ನೋಡಿದ್ದೀರಾ ?

ಇದನ್ನೂ ಓದಿ : Pregnant minor dies : ಗರ್ಭಪಾತ ಮಾತ್ರೆ ಸೇವಿಸಿ ಅಪ್ರಾಪ್ತೆ ಸಾವು : ಬಾಯ್​ಫ್ರೆಂಡ್​ ಬಂಧನ

Got an offer to join rebel MLAs in Guwahati but denied it: Shiv Sena MLA Sanjay Raut

Comments are closed.