Severe Heatwave Warning : ದೆಹಲಿ , ಪಂಜಾಬ್ ಹರಿಯಾಣ ಹಾಗೂ ಉತ್ತರ ಪ್ರದೇಶಗಳಲ್ಲಿ ತೀವ್ರವಾದ ಉಷ್ಣದ ಅಲೆಗಳಿಂದಾಗಿ ಭಾರತೀಯ ಹವಾಮಾನ ಇಲಾಖೆಯು ಸೋಮವಾರ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಭಾರತೀಯ ಹವಾಮಾನ ಇಲಾಖೆ ಈಗಾಗಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿತ್ತು .
ದೆಹಲಿಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹರಿಯಾಣ, ಪಂಜಾಬ್, ದೆಹಲಿ , ಉತ್ತರ ಪ್ರದೇಶ , ಮಧ್ಯ ಪ್ರದೇಶ ಹಾಗೂ ರಾಜಸ್ಥಾನದ ಕೆಲವು ಭಾಗಗಳಲ್ಲಿ ಜೂನ್ 4ರಿಂದ ತೀವ್ರ ಶಾಖದ ಅಲೆ 44°-47°C ನಡುವಿನ ತಾಪಮಾನ ಇನ್ನೂ ನಾಲ್ಕು ದಿನಗಳವರೆಗೆ ಇರಲಿದೆ. ಈ ಸಮಯದಲ್ಲಿ ಶಾಖವು ಅತಿಯಾಗಿ ಇರುವದರಿಂದ ಜನರು ಮನೆಯಿಂದ ಹೊರಬರುವಾಗ ಎಚ್ಚರಿಕೆಯಿಂದ ಇರುವಂತೆ ನಾವು ಸಲಹೆ ನೀಡುತ್ತೇವೆ ಎಂದು ಐಎಂಡಿಯ ಹಿರಿಯ ವಿಜ್ಞಾನಿ ಆರ್.ಕೆ ಜೆನಮಣಿ ಹೇಳಿದರು.
ಇದನ್ನು ಓದಿ : Nigeria church : ಚರ್ಚ್‌ನಲ್ಲಿ ಗುಂಡಿನ ಚಕಮಕಿ : 50 ಮಂದಿ ಸಾವು, ಹಲವರಿಗೆ
ಉತ್ತರ ಭಾರತದಲ್ಲಿ ಎಲ್ಲಿಯೂ ಮುಂಗಾರು ಆರಂಭವಾಗಿಲ್ಲ ಎಂದು ಆರ್.ಕೆ ಜೆನಮಣಿ ಹೇಳಿದ್ದಾರೆ. ನಾವು ಈ ಸಂಬಂಧ ಮೇಲ್ವಿಚಾರಣೆ ನಡೆಸುತ್ತಿದ್ದೇವೆ. ದೆಹಲಿಯಲ್ಲಿ ಮಾನ್ಸೂನ್ ಆರಂಭಕ್ಕೆ ಇನ್ನೂ ಸಮಯವಿದೆ ಎಂದು ಹೇಳಿದ್ದಾರೆ. ಕಳೆದೆರಡು ದಿನಗಳಿಂದ ದೆಹಲಿಯು ತೀವ್ರವಾದ ಬಿಸಿಲಿನ್ ಝಳಕ್ಕೆ ತತ್ತರಿಸಿ ಹೋಗಿದೆ. ಭಾನುವಾರ ದೆಹಲಿಯಲ್ಲಿ ಗರಿಷ್ಟ 44.8 ಡಿಗ್ರಿ ತಾಪಮಾನ ದಾಖಲಾಗಿದೆ. ಮುಂಗೇಶ್ಪುರದಲ್ಲಿ ಭಾನುವಾರ 47.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಅಕ್ಷರ ಧಾಮದಲ್ಲಿ 46.6 ಡಿಗ್ರಿ ಸೆಲ್ಸಿಯಸ್, ನಜಫ್ಗಡ್ 46.3 ಡಿಗ್ರಿ ಸೆಲ್ಸಿಯಸ್, ಪಿತಾಂಪುರದಲ್ಲಿ 46.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಐಎಂಡಿ ತಿಳಿಸಿದೆ.
ಇದನ್ನೂ ಓದಿ : kerala girl commits suicide : ಅತಿಯಾದ ಮೊಬೈಲ್ ಚಟದಿಂದ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ
ಇದನ್ನೂ ಓದಿ : Kuwait Supermarket : ಪ್ರವಾದಿ ಮೊಹಮ್ಮದ್ ವಿರುದ್ಧ ಹೇಳಿಕೆಗೆ ಹೆಚ್ಚಿದ ಆಕ್ರೋಶ : ಕುವೈತ್ನಲ್ಲಿ ಭಾರತೀಯ ಉತ್ಪನ್ನಗಳಿಗೆ ಗೇಟ್ಪಾಸ್
ಇದನ್ನೂ ಓದಿ : British Tourist Raped : ಮಸಾಜ್ ನೆಪದಲ್ಲಿ ವಿದೇಶಿ ಮಹಿಳೆ ಮೇಲೆ ಗೋವಾದಲ್ಲಿ ಅತ್ಯಾಚಾರ : ಆರೋಪಿ ಬಂಧನ
ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Severe Heatwave Warning For Delhi And Neighboring Areas, IMD Issues Orange Alert