Sex work legal : ವೇಶ್ಯಾವಾಟಿಕೆ ಕಾನೂನು ಬದ್ಧ:ವೇಶ್ಯೆಯರಿಗೆ ಸಮಾಜದಲ್ಲಿ ಗೌರವ ಸಿಗಬೇಕು : ಸುಪ್ರೀಂ ಕೋರ್ಟ್​

ದೆಹಲಿ :Sex work legal : ಸಮಾಜದಲ್ಲಿರುವ ಎಲ್ಲಾ ವೃತ್ತಿಗಳಂತೆಯೇ ವೇಶ್ಯಾವಾಟಿಕೆ ವೃತ್ತಿಗೂ ಗೌರವ ನೀಡಬೇಕೆಂದು ಕಳೆದ ಅನೇಕ ವರ್ಷಗಳಿಂದ ಲೈಂಗಿಕ ಕಾರ್ಯಕರ್ತೆಯರು ಹೋರಾಟ ನಡೆಸುತ್ತಲೇ ಇದ್ದಾರೆ. ಈ ಸಂಬಂಧ ಇಂದು ಮಹತ್ವದ ತೀರ್ಪನ್ನು ನೀಡಿರುವ ಸುಪ್ರೀಂ ಕೋರ್ಟ್​ ತಮ್ಮ ಸ್ವಂತ ಇಚ್ಛೆಯಿಂದ ಲೈಂಗಿಕ ಕಾರ್ಯಕರ್ತೆಯರಾಗಿರುವ ವಿರುದ್ಧ ಕ್ರಮ ಕೈಗೊಳ್ಳುವ ಅಥವಾ ವೇಶ್ಯಾವಾಟಿಕೆ ವಿಚಾರದಲ್ಲಿ ಮಧ್ಯ ಪ್ರವೇಶಿಸುವ ಅಧಿಕಾರ ಪೊಲೀಸರಿಗೆ ಇರುವುದಿಲ್ಲ. ವೇಶ್ಯಾವಾಟಿಕೆ ಎನ್ನುವುದು ಕಾನೂನುಬದ್ಧವಾಗಿದೆ ಎಂದು ಹೇಳಿದೆ.


ಇತರರಂತೆ ಲೈಂಗಿಕ ಕಾರ್ಯಕರ್ತೆಯರು ಸಮಾಜದಲ್ಲಿ ಸಮಾನ ರಕ್ಷಣೆಗೆ ಅರ್ಹರಾಗಿದ್ದಾರೆ ಎಂದು ಹೇಳಿದ ನ್ಯಾಯಮೂರ್ತಿ ಎಲ್​. ನಾಗೇಶ್ವರ ರಾವ್​ ನೇತೃತ್ವದ ತ್ರಿಸದಸ್ಯ ಪೀಠವು ಲೈಂಗಿಕ ಕಾರ್ಯಕರ್ತೆಯರ ಹಕ್ಕುಗಳ ರಕ್ಷಣೆಗಾಗಿ ಆರು ಪ್ರಮುಖ ನಿರ್ದೇಶನಗಳನ್ನು ನೀಡಿದೆ. ಲೈಂಗಿಕ ಕಾರ್ಯಕರ್ತೆಯರಿಗೆ ಸಮಾಜದಲ್ಲಿ ಸಮಾನ ರಕ್ಷಣೆ ಹಾಗೂ ಘನತೆ ಸಿಗಬೇಕು. ದೇಶದ ಪ್ರತಿಯೊಬ್ಬರಿಗೂ ಸಂವಿಧಾನದ 21ನೇ ಪರಿಚ್ಛೇದದ ಅಡಿಯಲ್ಲಿ ಸಮಾಜದಲ್ಲಿ ಗೌರವಯುತವಾದ ಜೀವನವನ್ನು ಹೊಂದುವ ಅಧಿಕಾರವಿದೆ. ಸ್ವ ಇಚ್ಛೆಯಿಂದ ವೇಶ್ಯಾವಾಟಿಕೆ ವೃತ್ತಿಯನ್ನು ಆಯ್ಕೆ ಮಾಡಿಕೊಂಡ ವಯಸ್ಕ ಮಹಿಳೆಯರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವ ಅಧಿಕಾರ ಪೊಲೀಸರಿಗೆ ಇರುವುದಿಲ್ಲ ಎಂದು ಹೇಳಿದೆ.


ವೇಶ್ಯಾವಾಟಿಕೆ ಕಾನೂನು ಬದ್ಧವಾಗಿದೆ. ಆದರೆ ವೇಶ್ಯಾವಾಟಿಕೆ ಗೃಹಗಳನ್ನು ನಡೆಸುವುದು ಇಂದಿಗೂ ಕಾನೂನು ಬಾಹಿರವಾಗಿದೆ. ವೇಶ್ಯಾವಾಟಿಕೆ ಗೃಹಗಳ ಮೇಲೆ ದಾಳಿ ನಡೆಸುವ ಪೊಲೀಸರು ಲೈಂಗಿಕ ಕಾರ್ಯಕರ್ತೆಯರನ್ನು ಬಂಧಿಸುವಂತಿಲ್ಲ. ಅವರಿಗೆ ದಂಡ ವಿಧಿಸುವುದು ಅಥವಾ ಇನ್ಯಾವುದೇ ಕಾನೂನು ಕ್ರಮ ಕೈಗೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.


ಮಹಿಳೆಯರು ಸೆಕ್ಸ್​ನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎಂಬ ಮಾತ್ರಕ್ಕೆ ಅವರ ಮಕ್ಕಳನ್ನು ಅವರಿಂದ ದೂರ ಮಾಡುವ ಅಧಿಕಾರ ಕೂಡ ಯಾರಿಗೂ ಇರುವುದಿಲ್ಲ. ಲೈಂಗಿಕ ಕಾರ್ಯಕರ್ತೆಗೆ ಸಮಾಜದಲ್ಲಿ ಹೇಗೆ ಗೌರವ ನೀಡಬೇಕೋ ಇದೇ ಗೌರವ ಅವರ ಮಕ್ಕಳಿಗೂ ನೀಡಬೇಕು. ಸಮಾಜದಲ್ಲಿ ಎಲ್ಲರಿಗೂ ಹೇಗೆ ಕಾನೂನು ಇರುತ್ತದೆಯೋ ವೇಶ್ಯಾವಾಟಿಕೆ ವೃತ್ತಿಯಲ್ಲಿ ಇರುವವರಿಗೂ ಅದೇ ಕಾನೂನು ಇರುತ್ತದೆ. ಪೊಲೀಸರು ಪೂರ್ವಾಗ್ರಹ ಪೀಡಿತರಾಗಿ ಲೈಂಗಿಕ ಕಾರ್ಯಕರ್ತೆಯರಿಗೆ ಕಿರುಕುಳ ನೀಡುವಂತಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಇದನ್ನು ಓದಿ : marriage : ಮದುವೆಯಾಗುವುದಿಲ್ಲ ಎಂದ ಯುವತಿ: ಕೋಪಗೊಂಡ ಮಾವನ ಮಕ್ಕಳಿಂದ ಅಪಹರಣ ಯತ್ನ

ಇದನ್ನೂ ಓದಿ : ಕುಂದಾಪುರ ಶಿಲ್ಪಾ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ : ಸಾವಿನ ಹಿಂದೆ ಲವ್‌ ಜಿಹಾದ್‌ ಆರೋಪ

Sex work legal. Police can’t interfere, take criminal action, says SC

Comments are closed.