Shashi Tharoor:‘ ಕಾಂಗ್ರೆಸ್​ ಅಧ್ಯಕ್ಷಗಾದಿಯ ಮೇಲೆ ತರೂರ್​ ಕಣ್ಣು ’‘:ವದಂತಿಗಳಿಗೆ ಹೀಗಿತ್ತು ಶಶಿ ತರೂರ್​ ಉತ್ತರ

ದೆಹಲಿ : Shashi Tharoor : ಕಾಂಗ್ರೆಸ್​ ಹಿರಿಯ ನಾಯಕ ಹಾಗೂ ಸಂಸದ ಶಶಿ ತರೂರ್​​ ಎಐಸಿಸಿ ಅಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ವರದಿಯು ಎಲ್ಲೆಡೆ ಪ್ರಕಟವಾದ ಬೆನ್ನಲ್ಲೇ ಈ ವಿಚಾರವಾಗಿ ಮೊದಲ ಬಾರಿಗೆ ಮೌನ ಮುರಿದ ಶಶಿ ತರೂರ್​ ಈ ವರದಿಗಳಿಗೆ ನಾನು ಯಾವುದೇ ಪ್ರತಿಕ್ರಿಯೆಗಳನ್ನು ನೀಡುವುದಿಲ್ಲ. ಹಾಗೂ ಮಲಯಾಳಂ ದಿನಪತ್ರಿಕೆ ಮಾತೃಭೂಮಿಯಲ್ಲಿ ಪ್ರಕಟವಾಗಿರುವ ನನ್ನ ಲೇಖನಕ್ಕೆ ನಾನು ಬದ್ಧನಾಗಿದ್ದೇನೆ. ಚುನಾವಣೆ ಬಂದರೆ ಕಾಂಗ್ರೆಸ್​​ಗೆ ಒಳ್ಳೆಯದಾಗುತ್ತದೆ ಎಂದು ನಾನು ಬರೆದಿದ್ದೇನೆ ಎಂದು ಹೇಳಿದ್ದಾರೆ.

ನನಗೆ ಈ ಬಗ್ಗೆ ಯಾವುದೇ ಹೇಳಿಕೆ ನೀಡಲು ಇಷ್ಟವಿಲ್ಲ. ನಾನು ನನ್ನ ಲೇಖನದಲ್ಲಿ ಚುನಾವಣೆ ಬಂದರೆ ಕಾಂಗ್ರೆಸ್​ ಪಕ್ಷಕ್ಕೆ ಒಳ್ಳೆಯದಾಗುತ್ತದೆ ಎಂದು ಬರೆದಿದ್ದೇನೆ ಎಂದು ಹೇಳಿದ್ದಾರೆ. ಮೂಲಗಳ ಪ್ರಕಾರ ತರೂರ್​, ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಹೆಚ್ಚು ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಶಶಿ ತರೂರ್​ ಇಲ್ಲಿಯವರೆಗೆ ಯಾವುದೇ ಪೂರಕವಾದ ಹೇಳಿಕೆಗಳನ್ನು ನೀಡಿಲ್ಲ. ನಾನು ಇಲ್ಲಿಯವರೆಗೆ ಈ ಬಗ್ಗೆ ಯೋಚಿಸಿಲ್ಲ ಆದರೆ ಮುಂದಿನ ನನ್ನ ನಿರ್ಧಾರ ಬದಲಾಗಬಹುದು ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಆದರೆ ಕಾಂಗ್ರೆಸ್​ ಅಧ್ಯಕ್ಷಗಾದಿಗೆ ಏರಲು ಉತ್ಸುಕರಾಗಿದ್ದೀರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಶಶಿ ತರೂರ್​, ಮಲಯಾಳಂ ಪತ್ರಿಕೆ ಮಾತೃಭೂಮಿಯಲ್ಲಿ ತಾವು ಮುಕ್ತ ಮತ್ತು ನ್ಯಾಯಯುತ ಚುನಾವಣೆಗೆ ಕರೆ ನೀಡಬೇಕು ಎಂಬುದಾಗಿ ಬರೆದಿದ್ದೇನೆ ಎಂದು ಹೇಳಿದ್ದಾರೆ. ಹಿರಿಯ ರಾಜಕಾರಣಿ ಗುಲಾಂ ನಬಿ ಆಜಾದ್​​ ಕಾಂಗ್ರೆಸ್​ನ ಪ್ರಾಥಮಿಕ ಸದಸ್ಯತ್ವ ಹಾಗೂ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್​ಗೆ ನಡುಕ ಶುರುವಾಗಿದೆ. ಗುಲಾಂ ನಬಿ ಆಜಾದ್​ಗೆ ಬೆಂಬಲವನ್ನು ಸೂಚಿಸಿ ಜಮ್ಮು & ಕಾಶ್ಮೀರದಲ್ಲಿ ರಾಜೀನಾಮೆಯ ಸುರಿಮಳೆಯೇ ಆರಂಭಗೊಂಡಿದೆ.

ದ್ಆಂತರಿಕ ಕೋಲಾಹಲವನ್ನು ಎದುರಿಸುತ್ತಿರುವ ಕಾಂಗ್ರೆಸ್ ಭಾನುವಾರ ತನ್ನ ಅಧ್ಯಕ್ಷರ ಚುನಾವಣೆಯನ್ನು ಅಕ್ಟೋಬರ್ 17 ರಂದು ನಡೆಸಲಾಗುವುದು ಎಂದು ಘೋಷಿಸಿತು, ಇಂತಹ ಪ್ರಜಾಪ್ರಭುತ್ವದ ನಿಯಮಗಳನ್ನು ಅನುಸರಿಸುತ್ತಿರುವ ದೇಶದ ಏಕೈಕ ಪಕ್ಷವಾಗಿದೆ ಎಂದು ಪ್ರತಿಪಾದಿಸಿದೆ. ಅಕ್ಟೋಬರ್ 19 ರಂದು ಫಲಿತಾಂಶ ಪ್ರಕಟವಾಗಲಿದೆ.ಸೆಪ್ಟೆಂಬರ್ 22 ರಂದು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಾಗುವುದು, ಆದರೆ ನಾಮಪತ್ರ ಸಲ್ಲಿಕೆ ಸೆಪ್ಟೆಂಬರ್ 24 ರಂದು ಪ್ರಾರಂಭವಾಗಿ ಸೆಪ್ಟೆಂಬರ್ 30 ರವರೆಗೆ ಮುಂದುವರಿಯುತ್ತದೆ.

ಇದನ್ನು ಓದಿ : teacher burns a boy’s genitals:ಚಡ್ಡಿಯಲ್ಲಿ ಮೂತ್ರ ಮಾಡಿದ್ದಕ್ಕೆ ಬಾಲಕನ ಗುಪ್ತಾಂಗವನ್ನೇ ಸುಟ್ಟ ಶಿಕ್ಷಕಿ

ಇದನ್ನೂ ಓದಿ : Shashi Tharoor : ಕಾಂಗ್ರೆಸ್ ಅಧ್ಯಕ್ಷ ಗದ್ದುಗೆ ಮೇಲೆ ಶಶಿ ಕಣ್ಣು..?

‘I’ve no comment to make’: Shashi Tharoor on reports of him running for Congress president post

Comments are closed.