ನವದೆಹಲಿ : ವರ್ಷದ ಮೊದಲ ಸೂರ್ಯಗ್ರಹಣ ನಾಳೆ ಸಂಭವಿಸಲಿದೆ. ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 11.42 ನಿಮಿಷದಿಂದ ಆರಂಭವಾದ ಸೂರ್ಯಗ್ರಹಣ ಸಂಜೆ 6.41ಕ್ಕೆ ಸಮಾಪ್ತಿಯಾಗಲಿದೆ
ಗುರುವಾರ ಸಂಭವಿಸಲಿರುವ ಸೂರ್ಯಗ್ರಹಣ ಅತ್ಯಂತ ಸುದೀರ್ಘ ಅವಧಿಯ ಸೂರ್ಯಗ್ರಹಣವಾಗಿದೆ. ಗ್ರಹಣ ಉತ್ತರ ಅಮೇರಿಕಾ, ಯುರೋಪ್ ಹಾಗೂ ಏಷ್ಯಾದ ಹಲವು ಭಾಗಗಳಲ್ಲಿ ಗೋಚರವಾಗಲಿದೆ. ಅದ್ರಲ್ಲೂ ಭಾರತದ ಅರುಣಾಚಲ ಪ್ರದೇಶ ಹಾಗೂ ಲಡಾಖ್ ಹೊರತು ಪಡಿಸಿದ್ರೆ ಉಳಿದೆಡೆಗಳಲ್ಲಿ ಗೋಚರವಾಗುವುದಿಲ್ಲ.
ಬೆಳಗ್ಗೆ 11.42ಕ್ಕೆ ಆರಂಭಗೊಳ್ಳುವ ಸೂರ್ಯಗ್ರಹಣ ಮಧ್ಯಾಹ್ನ 3.30ರ ಸುಮಾರಿಗೆ ಬೆಳಕಿನ ಉಂಗುರದಂತೆ ಗೋಚರವಾಗಲಿದೆ. ಸುಮಾರು ಒಂದೂವರೆ ಗಂಟೆಗಳ ಕಾಲ ಸೂರ್ಯನ ಸುತ್ತಲೂ ಬೆಂಕಿನ ಉಂಗುರ ವೀಕ್ಷಣೆ ಮಾಡಬಹುದಾಗಿದೆ ಎಂದು ಖಗೋಳ ಭೌತಶಾಸ್ತ್ರಜ್ಞರು ತಿಳಿಸಿದ್ದಾರೆ.