ಜೈಪುರ : ಕಳೆದ 6 ತಿಂಗಳ ಹಿಂದೆಯಷ್ಟೇ ಮನೆ ಮಗ ಹೃದಯಾಘಾತದಿಂದ ಸಾವನ್ನಪ್ಪಿದ್ದ. ಆದ್ರೀಗ ಇಡೀ ಕುಟುಂಬವೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ತಾನದ ಸಿಕಾರ್ ಜಿಲ್ಲೆಯ ಉದ್ಯೋಗ್ ನಗರದಲ್ಲಿ.

ಉದ್ಯೋಗ್ ನಗರ ನಿವಾಸಿಗಳಾದ ಹನುಮಾನ್ ಪ್ರಸಾದ್(45), ಪತ್ನಿ ತಾರಾ(40), ಇಬ್ಬರು ಮಕ್ಕಳಾದ ಪೂಜಾ(22) ಹಾಗೂ ಅನು(22) ಆತ್ಮಹತ್ಯೆಗೆ ಮಾಡಿಕೊಂಡ ದುರ್ದೈವಿಗಳು. ಹನುಮಾನ್ ಪ್ರಸಾದ್ ಅವರ ಪುತ್ರ ಕಳೆದ 5 ತಿಂಗಳ ಹಿಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಮಗನ ಸಾವಿನ ಬೆನ್ನಲ್ಲೇ ಕುಟುಂಬಸ್ಥರು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು.

ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತಮ್ಮ ಸಾವಿನ ಕುರಿತು ಡೆತ್ ನೊಟ್ ಬರೆದಿದ್ದಿಟ್ಟು, ಡೆತ್ ನೋಟ್ ನಲ್ಲಿ ಮಗನ ಸಾವಿನ ಕುರಿತು ಉಲ್ಲೇಖ ಮಾಡಲಾಗಿದೆ. ಈ ಕುರಿತು ಉದ್ಯೋಗ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.