ಮಂಗಳೂರು : ಲಕ್ಷಾಂತರ ರೂಪಾಯಿ ಹಣ ಪಡೆದು ಮಂಗಳೂರು ವಿವಿ ಪ್ರಾಧ್ಯಾಪಕರೋರ್ವರಿಗೆ ಕುಲಪತಿ ಹುದ್ದೆ ಕೊಡಿಸುವುದಾಗಿ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆಯ ಪ್ರಸಾದ್ ಅತ್ತಾವರ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ವಿವೇಕ್ ಆಚಾರ್ಯ ಎನ್ನುವವರ ಮೂಲಕ ವಿವಿ ಪ್ರಾಧ್ಯಾಪಕರ ಪರಿಚಯ ಮಾಡಿಕೊಂಡ, ಪ್ರಸಾದ್ ಅತ್ತಾವರ, ತನಗೆ ದೇಶದ ಹಲವು ಗಣ್ಯರ ಪರಿಚಯವಿದ್ದು, ನಿಮಗೆ ರಾಯಚೂರು ವಿವಿ ಕುಲಪತಿಯನ್ನಾಗಿ ಮಾಡುತ್ತೇನೆ ಎಂದು ನಂಬಿಸಿದ್ದಾನೆ. ಅಲ್ಲದೇ ಪ್ರಾಧ್ಯಾಪಕರಿಗೆ ತಾನು ಗಣ್ಯರ ಜೊತೆಗೆ ತೆಗೆಸಿಕೊಂಡ ಪೋಟೋವನ್ನು ತೋರಿಸಿ ಬರೋಬ್ಬರಿ 30 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆಯಿಟ್ಟಿದ್ದ.
ನಂತರದಲ್ಲಿ ಪ್ರಾಧ್ಯಾಪಕರು 17.50 ಲಕ್ಷ ರೂಪಾಯಿ ಪಡೆದು, ಉಳಿದ ಹಣಕ್ಕೆ 3 ಚೆಕ್ ಪಡೆದುಕೊಂಡಿದ್ದ. ನಂತರ ಪ್ರಾಧ್ಯಾಪಕರಿಗೆ ವಂಚಿಸಿದ್ದಾನೆ. ಈ ಕುರಿತು ಹಣವನ್ನು ಮರಳಿ ಕೇಳಿದಾಗ ಜೀವಬೆದರಿಕೆಯೊಡ್ಡಿರುವ ಕುರಿತು ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.