ಮಂಗಳವಾರ, ಏಪ್ರಿಲ್ 29, 2025
HomeNationalElectric Vehicles : ಬರಲಿದೆ ವಿದ್ಯುತ್ ವಾಹನಗಳು ನಿಂತಿರುವಾಗಲೇ ಅಥವಾ ಚಲಿಸುತ್ತಿರುವಾಗಲೇ ಚಾರ್ಜ್ ಆಗುವಂತಹ ತಂತ್ರಜ್ಞಾನ

Electric Vehicles : ಬರಲಿದೆ ವಿದ್ಯುತ್ ವಾಹನಗಳು ನಿಂತಿರುವಾಗಲೇ ಅಥವಾ ಚಲಿಸುತ್ತಿರುವಾಗಲೇ ಚಾರ್ಜ್ ಆಗುವಂತಹ ತಂತ್ರಜ್ಞಾನ

- Advertisement -

ವಿದ್ಯುತ್‌ ವಾಹನಗಳ (Electric Vehicles)ಹೆಚ್ಚಿನ ಉಪಯೋಗಕ್ಕೆ ಇರುವ ದೊಡ್ಡ ಸಮಸ್ಯೆಗಳೆಂದರೆ ಅವುಗಳ ಹೆಚ್ಚಿನ ಬೆಲೆ ಹಾಗೂ ಒಮ್ಮೆ ಚಾರ್ಜ್‌ ಮಾಡಿದ ನಂತರ ಸ್ವಲ್ಪವೇ ದೂರ ಕ್ರಮಿಸಲು ಸಾಧ್ಯವಿದ್ದು ಹೆಚ್ಚಿನ ದೂರ ಕ್ರಮಿಸಲು ಪದೇ-ಪದೇ ಚಾರ್ಜ್‌ ಮಾಡಿಸಬೇಕಾದ ಅನಿವಾರ್ಯತೆ. ವಿದ್ಯುತ್‌ ವಾಹನಗಳ ಬಳಕೆ ಹೆಚ್ಚಾದರೆ ದರದಲ್ಲಿ ಇಳಿಕೆಯಾಗುತ್ತದೆ. ಆದರೆ ಚಾರ್ಜಿಂಗ್ ಸಮಸ್ಯೆಯೊಂದು ಬಗೆಹರಿದರೆ ಬಳಕೆ ಹೆಚ್ಚಾಗುತ್ತದೆ. ಚಾರ್ಜಿಂಗ್ ಸಮಸ್ಯೆಯನ್ನು ನಿವಾರಿಸಲು ವಿವಿಧ ದೇಶಗಳಲ್ಲಿ ಅನೇಕ ಪ್ರಯೋಗಗಳು ನಡೆಯುತ್ತಿವೆ.

ವಿಶ್ವದ ಅನೇಕ ದೇಶಗಳು ಪ್ರಬಲ ಚಾರ್ಜಿಂಗ್ ಮೂಲಸೌಕರ್ಯಗಳನ್ನು ನಿರ್ಮಿಸುವತ್ತ ಗಮನಹರಿಸಿದ್ದರೆ ಇಟಲಿ ದೇಶ ಮಾತ್ರ ವಿದ್ಯುತ್ ವಾಹನಗಳು ಪಾರ್ಕಿಂಗ್‌ನಲ್ಲಿ ನಿಂತಿರುವಾಗ ಅಥವಾ ಚಲನೆಯಲ್ಲಿರುವಾಗಲೇ ಚಾರ್ಜ್‌ ಆಗುವ ತಂತ್ರಜ್ಞಾನವನ್ನು ರೂಪಿಸುವ ಪ್ರಯತ್ನದಲ್ಲಿದೆ. ಮೋಟಾರು ವಾಹನ ಉದ್ಯಮದ ದಿಗ್ಗಜ ಸಂಸ್ಥೆಯಾದ ಸ್ಟೆಲ್ಲಾಂಟಿಸ್‌ ಇಂಡಕ್ಟಿವ್‌ ಚಾರ್ಜಿಂಗ್‌ ತಂತ್ರಜ್ಞಾನದ ಮೂಲಕ ವಾಹನಗಳು ಪಾರ್ಕಿಂಗ್‌ನಲ್ಲಿ ನಿಂತಿರುವಾಗ ಅಥವಾ ಚಲಿಸುತ್ತಿರುವಾಗಲೇ ಚಾರ್ಜಿಂಗ್ ಆಗುವ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ಈಗಾಗಲೇ ವರದಿಯಾಗಿತ್ತು. ಈಗ ಈ ಯೋಜನೆಯು ಪರೀಕ್ಷೆಯ ಹಂತವನ್ನು ತಲುಪಿದೆ. ಕ್ರಿಯಾತ್ಮಕ ನಿಸ್ತಂತು ಶಕ್ತಿ ವರ್ಗಾವಣೆ (DWPT-Dynamic Wireless Power Transfer)ಯ ತಂತ್ರಜ್ಞಾನವನ್ನು ಇಟಲಿಯ ಎ35 ಆಟೋಸ್ಟ್ರಾಡಾದ ಸಮೀಪ ಕ್ಲೋಸ್ಡ್‌-ಸರ್ಕ್ಯೂಟ್‌ನಲ್ಲಿ  ಅಳವಡಿಸಿ ಇದರ ಪರೀಕ್ಷೆ ಮಾಡಲಿದೆಯೆಂದು ವರದಿಯಾಗಿದೆ. ಈ ರಸ್ತೆಯ ಪಟ್ಟಿಗೆ ಭವಿಷ್ಯದ ರಂಗ (Arena of the Future) ಎಂದು ಹೆಸರಿಡಲಾಗಿದ್ದು ಇದು 1050 ಮೀಟರ್ ದೂರದ ಪಟ್ಟಿಯಾಗಿದೆ ಹಾಗೂ 1 ಮೆಗಾವ್ಯಾಟ್‌ ಡಿಡಬ್ಲ್ಯೂಪಿಟಿ ತಂತ್ರಜ್ಞಾನದಿಂದ ಫಿಯಟ್‌ 500 ಎಲೆಕ್ಟ್ರಿಕ್ ಕಾರು ಹಾಗೂ ಒಂಎಉ ಐವಿಕೋ ಇ-ವೇ ಬಸ್‌ಗಳನ್ನು ಚಾರ್ಜ್‌ ಮಾಡುವ ಪರೀಕ್ಷೆ ನಡೆಸಲಿದೆ.

ಸ್ಟೆಲ್ಲಾಂಟಿಸ್‌ ವಿದ್ಯುತ್‌ ವಾಹನ ವಿಭಾಗದ ಮುಖ್ಯಸ್ಥರಾದ ಆನ್ನಿ-ಲೈಸ್ ರಿಚರ್ಡ್‌ ಅವರು “ಈ ವಿಧಾನವು ವಿದ್ಯುತ್‌ ವಾಹನಗಳ ಮಾಲೀಕರ ಹೆಚ್ಚಿನ ದೂರದ ಪ್ರಯಾಣಕ್ಕೆ ಇರುವ ಚಾರ್ಜಿಂಗ್‌ ಸಮಸ್ಯೆಗೆ ಒಂದು ನವೀನ ಹಾಗೂ ಸಮರ್ಥ ಪರಿಹಾರವನ್ನು ಒದಗಿಸಲಿದೆ” ಎಂದು ತಿಳಿಸಿರುವುದಾಗಿ ವರದಿಯಾಗಿದೆ. ಈ ತಂತ್ರಜ್ಞಾನವು ನಮ್ಮ ಗ್ರಾಹಕರ ಅವಶ್ಯಕತೆಗಳಿಗೆ ಸೂಕ್ತ ಪರಿಹಾರ ಒದಗಿಸುವ ನಮ್ಮ ಆಸೆಯನ್ನು ಪೂರೈಸಬಲ್ಲ ತಂತ್ರಜ್ಞಾನವಾಗಿದೆ ಎಂದು ಅವರು ಹೇಳಿದ್ದಾರೆ. ವಾಹನಗಳು ಚಲಿಸುತ್ತಿರುವಾಗ ಚಾರ್ಜ್ ಮಾಡುವ ತಂತ್ರಜ್ಞಾನವು ಅನೇಕ ಪ್ರಯೋಜನಗಳನ್ನು ಹೊಂದಿದ್ದು ಚಾರ್ಜಿಂಗ್‌ ಸಮಯವನ್ನು ಕಡಿಮೆ ಮಾಡಲು ಹಾಗೂ ಬ್ಯಾಟರಿಯ ಗಾತ್ರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದಿದ್ದಾರೆ.

ಈ ಪಟ್ಟಿಯು 5G ಅಂತರ್ಜಾಲ ಸಂಪರ್ಕ ಸೌಲಭ್ಯವನ್ನೂ ಹೊಂದಿದ್ದು ಐಓಟಿ (IoT-Internet of Things) ತಂತ್ರಜ್ಞಾನವನ್ನೂ ಹೊಂದಿದ್ದು ವಾಹನ ಚಾಲಕರಿಗೆ ಸಂಪರ್ಕ ವ್ಯವಸ್ಥೆಯನ್ನೂ ಒದಗಿಸಲಿದೆ ಎಂದು ವರದಿಯಾಗಿದೆ. ಸ್ಟೆಲ್ಲಾಂಟಿಸ್‌ ಸಂಸ್ಥೆಯು ವಿದ್ಯುದೀಕರಣ ಪ್ರಕ್ರಿಯೆಗಾಗಿ ಹಾಗೂ ಹೆಚ್ಚು ಅಭಿವೃದ್ಧಿಪಡಿಸಲಾದ ಸಾಫ್ಟ್‌ವೇರ್‌ ತಂತ್ರಜ್ಞಾನವನ್ನು ಹೊಂದಲು ಸುಮಾರು 30 ಬಿಲಿಯನ್‌ ಪೌಂಡ್‌ಗಳನ್ನು ಹೂಡಿಕೆ ಮಾಡಲು ಯೋಜಿಸಲಾಗುತ್ತಿದೆ ಎಂದೂ ವರದಿ ಹೇಳಿದೆ.

ಇದನ್ನೂ ಓದಿ: Japan Bus-Rail : ಇದನ್ನು ಬಸ್ ಎನ್ನುವಿರೋ? ರೈಲು ಎನ್ನುವಿರೋ? ಜಪಾನ್‌ನಲ್ಲಿ ಹೊಸ ವಾಹನದ ಬಳಕೆ ಆರಂಭ

ಇದನ್ನೂ ಓದಿ: Indian Economy: ಭಾರತದ ಆರ್ಥಿಕತೆ 2030ರಲ್ಲಿ ಜಪಾನ್‌ ಆರ್ಥಿಕತೆಯನ್ನು ಮೀರಲಿದೆ: ಐಎಚ್‌ಎಸ್‌ ಮಾರ್ಕಿಟ್‌ ವರದಿ

Stellantis developing infrastructure to charge EVs on the move

RELATED ARTICLES

Most Popular