honey trap : ಮತ್ತೊಬ್ಬ ಸಚಿವರ ಕುಟುಂಬಕ್ಕೆ ಅಶ್ಲೀಲ ವಿಡಿಯೋ ಕಂಟಕ : ಖ್ಯಾತ ಜ್ಯೋತಿಷಿ ಪುತ್ರ ಅರೆಸ್ಟ್

ಬೆಂಗಳೂರು : ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರಕ್ಕೆ ಮತ್ತೊಂದು ಅಶ್ಲೀಲ ವಿಡಿಯೋ ಸಂಕಟ ಹಾಗೂ ಮುಜುಗರ ಎದುರಾಗಿದೆ. ಮಾಜಿ ಸಚಿವರೊಬ್ಬರ ರಾಸಲೀಲೆ ಪ್ರಕರಣವನ್ನು ಜನರು ಮರೆಯುವ ಮುನ್ನವೇ ಹಾಲಿ ಸಚಿವರೊಬ್ಬರ ಪುತ್ರನದ್ದು ಎನ್ನಲಾದ ಅಶ್ಲೀಲವಿಡಿಯೋ ಹೊರಬಿದ್ದಿದೆ. ರಾಜ್ಯದ ಸಹಕಾರ ಸಚಿವ ಹಾಗೂ ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಪುತ್ರನಿಗೆ ಅಶ್ಲೀಲ ವಿಡಿಯೋ ( honey trap ) ಬಿಡುಗಡೆ ಮಾಡುವುದಾಗಿ ಬೆದರಿಕೆ ಒಡ್ಡಲಾಗಿದೆ ಎನ್ನಲಾಗಿದ್ದು ಈ ಬಗ್ಗೆ ಸಚಿವರ ಪುತ್ರ ನಿಶಾಂತ್ ಪೊಲೀಸರಿಗೆ ದೂರು ನೀಡಿದ್ದಾರೆ.

ನಕಲಿ ವಿಡಿಯೋ ಸೃಷ್ಟಿಸಿ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ನಿಶಾಂತ್ ಆರೋಪಿಸಿದ್ದು ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆ ಸಿ.ಎ.ಆರ್, ದಕ್ಷಿಣ ವಿಭಾಗಕ್ಕೆ ದೂರು ನೀಡಿದ್ದಾರೆ. ಆಡುಗೋಡಿಯಲ್ಲಿರುವ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರ ದಾಖಲಾಗಿದೆ. ದೂರಿನಲ್ಲಿ ತನ್ನ. ವಿರುದ್ಧ ಹಣಕ್ಕಾಗಿ ಪಿತೂರಿ ನಡೆದಿದೆ ಎಂದಿರುವ ನಿಶಾಂತ್ ನಾನು ರಾಜಕೀಯವಾಗಿ ಬಿ.ಜೆ.ಪಿ ಪಕ್ಷದಿಂದ ಗುರುತಿಸಿಕೊಂಡಿದ್ದೆನೆ. ಪಕ್ಷ ಸಂಘಟನೆಯಲ್ಲಿ ಕೆಲಸವನ್ನು ಮಾಡುತ್ತಾ ಬಂದಿರುತ್ತೇನೆ ನನ್ನ & ನನ್ನ ತಂದೆ ರಾಜಕೀಯ ಬೆಳವಣಿಗೆ ಸಹಿಸದೆ ಕೃತ್ಯ ನಡೆದಿದ್ದು ಆ ಮೂಲಕ ನಮ್ಮ ಹೆಸರಿಗೆ ಚ್ಯುತಿ ತರಲು ಹುನ್ನಾರ ನಡೆದಿದೆ ಎಂದು ಆರೋಪಿಸಿದ್ದಾರೆ.

ರಾಜಕೀಯವಾಗಿ ನಮ್ಮನ್ನು ಮುಗಿಸಬೇಕೆಂಬ ದುರುದ್ದೇಶದಿಂದ ಕೆಲ ದುಷ್ಕರ್ಮಿಗಳ ಸಂಚು ಹೂಡಿದ್ದಾರೆ. ನನ್ನನ್ನ ನೇರವಾಗಿ ಟಾರ್ಗೆಟ್ ಮಾಡಿ ನಕಲಿ ವಿಡಿಯೋ ಸಿದ್ಧಪಡಿಸ ಲಾಗಿದೆ. ಯಾರೋ ಮಹಿಳೆಯ ಜೊತೆಯಲ್ಲಿರುವಂತೆ ಆಶ್ಲೀಲವಾದ ನಕಲಿ ದೃಶ್ಯಾವಳಿಗಳ ಸೃಷ್ಟಿಸಿ ಹರಿಬಿಟ್ಟಿದ್ದಾರೆ. ಕೆಲ ಫೋಟೋಗಳನ್ನು ಸಹ ಸೃಷ್ಟಿ ಮಾಡಿ ಮೊಬೈಲ್ ನಂ: 7895648639 ರಿಂದ 25/12/2021 ರಂದು ಕಳಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ವಿಡಿಯೋ & ಫೋಟೋಸ್ ನ್ನು ನನ್ನ ತಂದೆಯ ಪಿಎ ಶೀನಿವಾಸಗೌಡ & ಭಾನುಪ್ರಕಾಶ್ ಗೆ ಕಳಿಸಿದ್ದಾರೆ ವಾಟ್ಸಾಪ್ ಮೂಲಕ ಪದೇ ಪದೇ ಮೇಸೆಜ್ ಗಳನ್ನು ಕಳುಹಿಸಿ ಬ್ಲಾಕ್ ಮೇಲ್ ತಾವು ಕೇಳಿದಷ್ಟು ಹಣವನ್ನು ಕೊಡಬೇಕೆಂದು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ ಹಣವನ್ನು ನೀಡದಿದ್ದಲ್ಲಿ ಆಶ್ಲೀಲ ವಿಡಿಯೋ ಫೋಟೋ ಬಹಿರಂಗ ಪಡಿಸುವುದಾಗಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ & ಮಾಧ್ಯಮಗಳಿಗೆ ಹರಿದುಬಿಡುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ನಿಶಾಂತ್ ತನ್ನ ವಿರುದ್ದ ನಡೆದಿರುವ ಈ ಸಂಚಿನಲ್ಲಿ ಪ್ರಭಾವಿಗಳು ಇದ್ದಾರೆ ಎಂದಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಅಚ್ಚರಿಯ ಬೆಳವಣಿಗೆ ಯಲ್ಲಿ ಖ್ಯಾತ ಜ್ಯೋತಿಷಿಯ ಪುತ್ರ ರಾಹುಲ್ ಭಟ್ ಎಂಬಾತನನ್ನು ಬಂಧಿಸಿದ್ದಾರೆ. RT ನಗರದ ಚಂದ್ರಶೇಖರ ಸ್ವಾಮಿಯ ಪುತ್ರ ಬಂಧನಕ್ಕೊಳಪಡಿಸಲಾಗಿದ್ದು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ. 22 ವರ್ಷದ ರಾಹುಲ್ ಭಟ್ ಹಿಂದೇ ರಾಜಕೀಯ ವ್ಯಕ್ತಿಗಳ ಕೈವಾಡ ಇದೆ ಎನ್ನಲಾಗಿದ್ದು, ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎಸ್.ಟಿ.ಸೋಮಶೇಖರ್ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ ಇದಾಗಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬಂದಿದೆ. ಆರೋಪಿ ರಾಹುಲ್ ಭಟ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿರುವ ಪೊಲೀಸರು ಹೆಚ್ಚಿನ‌ ವಿಚಾರಣೆಗಾಗಿ ಐದು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ.

ಇದನ್ನೂ ಓದಿ : ಏನಿದು ಅಂಬರ್‌ಗ್ರೀಸ್ ಎಂಬ ತಿಮಿಂಗಿಲ ವಾಂತಿ? ಇದನ್ನು ಕಳ್ಳಸಾಗಣೆ ಮಾಡುವುದೇಕೆ?

ಇದನ್ನೂ ಓದಿ : 5-year-old boy dies : ಮೊಬೈಲ್​ ಬಳಕೆ ಮಾಡಿದ್ದಕ್ಕೆ ಪುತ್ರನನ್ನೇ ಕೊಂದ ತಂದೆ

(honey trap for ministers son, famous astrologer son arrest)

Comments are closed.