ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕರ್ನಾಟಕದಲ್ಲಿ ಪ್ರತೀ ಭಾನುವಾರ ಕರ್ಪ್ಯೂ ಮಾದರಿಯಲ್ಲಿ ಲಾಕ್ ಡೌನ್ ಜಾರಿಗೊಳಿಸಿದೆ. ಹೀಗಾಗಿ ಇಂದು ಸಂಜೆಯಿಂದಲೇ ಕರ್ನಾಟಕ ಸಂಪೂರ್ಣವಾಗಿ ಬಂದ್ ಆಗಲಿದ್ದು, ಮನೆಯಿಂದ ಹೊರ ಬಂದವರ ಮೇಲೆ ಕ್ರಮಕೈಗೊಳ್ಳುವುದಾಗಿ ಪೊಲೀಸ್ ಇಲಾಖೆ ಎಚ್ಚರಿಸಿದೆ.

ರಾಜ್ಯದಾದ್ಯಂತ ಲಾಕ್ ಡೌನ್ 4.0 ಜಾರಿಯಲ್ಲಿದ್ದರೂ ಕೂಡ ಜನಜೀವನ ಸಹಜ ಸ್ಥಿತಿಯಲ್ಲಿದೆ. ಆದರೆ ಸಂಜೆ 7 ಗಂಟೆಯಿಂದ ಮುಂಜಾನೆ ಮುಂಜಾನೆ 7 ಗಂಟೆಯ ವರೆಗೆ ಕರ್ಪ್ಯೂ ಮಾದರಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುತ್ತಿದೆ. ಆದ್ರೀಗ ಭಾನುವಾರ ಕರ್ಪ್ಯೂ ಆಚರಿಸಲಾಗುತ್ತಿದ್ದು, ಕರ್ನಾಟಕ ರಾಜ್ಯದಲ್ಲಿ 24 ಗಂಟೆಗಳ ಬದಲು 36 ಗಂಟೆಗಳ ಕರ್ಪ್ಯೂ ಆಚರಿಸಲು ರಾಜ್ಯ ಸರಕಾರ ಮುಂದಾಗಿದೆ.

ಕರ್ಪ್ಯೂ ಹಿನ್ನೆಲೆಯಲ್ಲಿ ಜನರ ಓಡಾಟಕ್ಕೆ ಸಂಪೂರ್ಣವಾಗಿ ನಿಷೇಧ ಹೇರಲಾಗಿದೆ. ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಜನರು ಸರ್ಕಾರದ ಸೂಚನೆ ಪಾಲನೆ ಮಾಡಬೇಕು. ಲಾಕ್‌ಡೌನ್ ನಿಯಮಾವಳಿಗಳನ್ನು ಉಲ್ಲಂಘಿಸಿದ್ರೆ ಕಠಿಣ ಕಾನೂನು ಕ್ರಮ ಜರಗಿಸಲಾಗುವುದು ಎಂದು ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ ) ಅಮರ್ ಕುಮಾರ್ ಪಾಂಡೆ ತಿಳಿಸಿದ್ದಾರೆ.

ಸಂಪೂರ್ಣ ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಸಾರಿಗೆ ಸಂಚಾರ ಸಂಪೂರ್ಣವಾಗಿ ಬಂದ್ ಆಗಲಿದೆ. ರಾಜ್ಯದ ಗಡಿಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುತ್ತಿರುವುದರಿಂದ ಅಂತರ್ ರಾಜ್ಯ ವಾಹನ ಓಡಾಟಕ್ಕೂ ನಿಷೇಧ ಹೇರಲಾಗಿದೆ. ಇನ್ನು ರಾಜ್ಯದೊಳಗೂ ಯಾವುದೇ ವಾಹನ ಸಂಚಾರಕ್ಕೂ ಅವಕಾಶವಿಲ್ಲ. ಆದರೆ ಪೂರ್ವ ನಿಗದಿಯಾಗಿರುವ ಮದುವೆ ಸಮಾರಂಭಗಳನ್ನು ನಡೆಸಲು ರಾಜ್ಯ ಸರಕಾರ ಅನುಮತಿಯನ್ನು ನೀಡಿದೆ. ಮಾತ್ರವಲ್ಲ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ನಿಷೇಧವನ್ನು ಹೇರಲಾಗಿದ್ದರೂ ಕೂಡ ಮೀನು, ಮಾಂಸ ಮಾರಾಟಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ.
ಹಾಗಾದ್ರೆ ನಾಳೆ ಏನಿರುತ್ತೆ ?

ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿದ್ದರು ಕೂಡ ಅಗತ್ಯ ವಸ್ತುಗಳ ಮಾರಾಟಕ್ಕೆ ಅನುಮತಿಯನ್ನು ನೀಡಲಾಗಿದೆ. ಮೆಡಿಕಲ್, ಹಾಸ್ಪಿಟಲ್ ತೆರೆಲು ಅವಕಾಶವನ್ನು ನೀಡಲಾಗಿದೆ. ಇನ್ನು ಹಣ್ಣು, ತರಕಾರಿ, ಮೀನು ಮತ್ತು ಮಾಂಸ ಮಾರಾಟ ಮಾಡಬಹುದಾಗಿದೆ. ಅಲ್ಲದೇ ದಿನಪತ್ರಿಕೆಗಳ ಮಾರಾಟ ಮಾಡುವುದಕ್ಕೆ ಹಾಗೂ ವಿತರಿಸಬಹುದಾಗಿದೆ.
ಹಾಗಾದ್ರೆ ನಾಳೆ ಏನಿರಲ್ಲ ?

ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಮದ್ಯ ಮಾರಾಟಕ್ಕೆ ಸಂಪೂರ್ಣವಾಗಿ ನಿಷೇಧ ಹೇರಲಾಗಿದೆ. ಅಲ್ಲದೇ ಕೆಎಸ್ಆರ್ ಟಿಸಿ, ಬಿಎಂಟಿಸಿ ಬಸ್ ಸಂಚಾರವಿರುವುದಿಲ್ಲ. ಅಲ್ಲದೇ ಕ್ಯಾಬ್, ಆಟೋಗಳು ಕೂಡ ರಸ್ತೆಗೆ ಇರುವುದಿಲ್ಲ. ಕರ್ಪ್ಯೂ ಮಾದರಿಯ ಲಾಕ್ ಡೌನ್ ಜಾರಿಯಲ್ಲಿರುವುದರಿಂದಾಗಿ ರಾಜ್ಯದ ಪ್ರಮುಖ ರಸ್ತೆಗಳು ಕೂಡ ಬಂದ್ ಆಗಲಿವೆ.