ಸೋಮವಾರ, ಏಪ್ರಿಲ್ 28, 2025
HomeNationalಸುಪ್ರೀಂಕೋರ್ಟ್ ಗೆ 9 ನ್ಯಾಯಮೂರ್ತಿಗಳ ನೇಮಕ : ಕರ್ನಾಟಕ ನ್ಯಾ. ನಾಗರತ್ನಾ ಮೊದಲ ಮಹಿಳಾ ಸಿಜೆಐ...

ಸುಪ್ರೀಂಕೋರ್ಟ್ ಗೆ 9 ನ್ಯಾಯಮೂರ್ತಿಗಳ ನೇಮಕ : ಕರ್ನಾಟಕ ನ್ಯಾ. ನಾಗರತ್ನಾ ಮೊದಲ ಮಹಿಳಾ ಸಿಜೆಐ ?

- Advertisement -

ನವದೆಹಲಿ : ಸುಪ್ರೀಂ ಕೋರ್ಟ್‌ಗೆ ಹೊಸದಾಗಿ ಒಂಬತ್ತು ಮಂದಿ ನ್ಯಾಯಾಧೀಶರನ್ನು ನೇಮಕ ಮಾಡಲಾಗಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ನ್ಯಾಯಾಧೀಶರ ನೇಮಕಕ್ಕೆ ಅಂಕಿತ ಹಾಕಿದ್ದು, ಕರ್ನಾಟಕದ ನ್ಯಾಯಮೂರ್ತಿ ಬಿ.ವಿ. ನಾಗರತ್ನಾ ಅವರು ಭಾರತದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ನೇಮಕಾತಿ 2021 : ವೇತನ 81,100 ರೂ., ಪದವಿಧರರಿಗೆ ಸುವರ್ಣಾವಕಾಶ

ಸುಪ್ರೀಂ ಕೋರ್ಟ್‌ನಲ್ಲಿ ತೆರವಾಗಿರುವ ನ್ಯಾಯಧೀಶರ ಹುದ್ದೆಗೆ ಕೇಂದ್ರ ಸರಕಾರ ನೇಮಕಾತಿಗೆ ಮುಂದಾಗಿದೆ. ಈಗಾಗಲೇ ರಾಜ್ಯ ಹೈಕೋರ್ಟ್‌ ಮುಖ್ಯನಾಯಮೂರ್ತಿ ಓಕಾ ಅವರು ಸೇರಿದಂತೆ ಒಂಬತ್ತು ಮಂದಿಯ ಹೆಸರು ಕೇಳಿಬಂದಿದೆ. ಇದೀಗ ನ್ಯಾಯಾಧೀಶರ ನೇಮಕಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ ಎನ್ನಲಾಗುತ್ತಿದೆ.

ಉನ್ನತ ನ್ಯಾಯಾಲಯದ ಹೊಸ ನ್ಯಾಯಾಧೀಶರಾಗಿ ನ್ಯಾಯಮೂರ್ತಿ ಬಿ.ವಿ. ನಾಗರತ್ನಾ ಅವರು ಭಾರತದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಆಗಲಿದ್ದಾರೆ, ನ್ಯಾಯಮೂರ್ತಿ ಬೆಲಾ ಎಂ ತ್ರಿವೇದಿ, ನ್ಯಾಯಮೂರ್ತಿ ಹಿಮಾ ಕೊಹ್ಲಿ, ನ್ಯಾಯಮೂರ್ತಿ ಸಿ.ಟಿ.ರವಿಕುಮಾರ್, ನ್ಯಾಯಮೂರ್ತಿ ಎಂ.ಎಂ. ಸುಂದ್ರೇಶ್, ಹಿರಿಯ ವಕೀಲ ಮತ್ತು ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ.ಎಸ್. ನರಸಿಂಹ ಸೇರಿದ್ದಾರೆ. ನ್ಯಾಯಮೂರ್ತಿಗಳಾದ ಅಭಯ್ ಶ್ರೀನಿವಾಸ್ ಓಕಾ, ವಿಕ್ರಮ್ ನಾಥ್ ಮತ್ತು ಜಿತೇಂದ್ರ ಕುಮಾರ್ ಮಹೇಶ್ವರಿ ಕೂಡ ಸುಪ್ರೀಂ ಕೋರ್ಟ್ ಗೆ ನೇಮಕಗೊಂಡವರಲ್ಲಿ ಸೇರಿದ್ದಾರೆ.

ಇದನ್ನೂ ಓದಿ: ಸೆಪ್ಟೆಂಬರ್‌ 13 ರಿಂದ ವಿಧಾನಸಭಾ ಅಧಿವೇಶನ : ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ

RELATED ARTICLES

Most Popular