ಸಾಲಗಾರರಿಗೆ ಗುಡ್‌ ನ್ಯೂಸ್‌ ಕೊಟ್ಟ ಕೇಂದ್ರ ಸರಕಾರ : ಪ್ರತೀ ಜಿಲ್ಲೆಯಲ್ಲಿ ನಡೆಯುತ್ತೆ ಸಾಲ ಮೇಳ

ನವದೆಹಲಿ : ಕೊರೊನಾದಿಂದ ತತ್ತರಿಸಿದ ಜನರಿಗೆ ಕೇಂದ್ರ ಸರಕಾರ ಗುಡ್‌ನ್ಯೂಸ್‌ ಕೊಡಲು ಮುಂದಾಗಿದೆ. ದೇಶದ ಪ್ರತೀ ಜಿಲ್ಲೆಯಲ್ಲಿಯೂ ಸಾಲ ಮೇಳಗಳನ್ನು ಆಯೋಜಿಸಲು ಮುಂದಾಗಿದೆ. ಈ ಮೂಲಕ ಜನರ ಸಂಕಷ್ಟಕ್ಕೆ ನೆರವಾಗುವ ಉದ್ದೇಶ ಹೊಂದಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಕೊರೊನಾ ಸಂಕಷ್ಟದಿಂದಾಗಿ ಬ್ಯಾಂಕುಗಳ ಕ್ರೆಡಿಟ್ ಬೆಳವಣಿಗೆ ಸಹಾಯ ಮಾಡಲು ಕೇಂದ್ರ ಸರಕಾರ ಅಕ್ಟೋಬರ್ ನಿಂದ ದೇಶದ ಪ್ರತಿಯೊಂದು ಜಿಲ್ಲೆಯಲ್ಲಿ ವಿಶೇಷ ಸಾಲ ಮೇಳೆ ಅಭಿಯಾನವನ್ನ ನಡೆಸುತ್ತದೆ. ಸರಕಾರ ಘೋಷಿಸಿದ ಉತ್ತೇಜನ ಪ್ಯಾಕೇಜ್ ಇಂತಹ ಸಕ್ರಿಯ ಪ್ರಯತ್ನಗಳ ಮೂಲಕ ಭಾರತೀಯ ಆರ್ಥಿಕತೆ ಯು ವೇಗವನ್ನ ಪಡೆಯಲು ಸಹಾಯ ಮಾಡುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಸುಪ್ರೀಂಕೋರ್ಟ್ ಗೆ 9 ನ್ಯಾಯಮೂರ್ತಿಗಳ ನೇಮಕ : ಕರ್ನಾಟಕ ನ್ಯಾ. ನಾಗರತ್ನಾ ಮೊದಲ ಮಹಿಳಾ ಸಿಜೆಐ

ಸಾಲದ ಬೆಳವಣಿಗೆಗಾಗಿ ಬ್ಯಾಂಕುಗಳು 2019ರ ವರ್ಷದ ಕೊನೆಯಲ್ಲಿ ದೇಶದ 400 ಜಿಲ್ಲೆಗಳಲ್ಲಿ ಸಾಲ ಮೇಳಗಳನ್ನು ಆಯೋಜಿಸಿದ್ದವು. ಪ್ರಸ್ತುತ, ಸಾಲದ ಬೆಳವಣಿಗೆ ದರವು ಶೇಕಡಾ 6 ರಷ್ಟಿದೆ. ಅದನ್ನು ವೃದ್ದಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ.

ಅಕ್ಟೋಬರ್ 2019 ಮತ್ತು ಮಾರ್ಚ್ 2021 ರ ನಡುವೆ, 4.94 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಸಾಲವನ್ನ ಬ್ಯಾಂಕುಗಳ ಪೂರ್ವಭಾವಿ ಉಪಕ್ರಮಗಳ ಮೂಲಕ ವಿತರಿಸಲಾಗಿದೆ . ಇದೀಗ ಅಕ್ಟೋಬರ್ 2021 ರಲ್ಲಿ, ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಸಾಲ ನೀಡಲು ವಿಶೇಷ ಅಭಿಯಾನವನ್ನು ಆರಂಭಿಸಲಾಗುವುದು. ಎನ್‌ಬಿಎಫ್‌ಸಿ-ಎಮ್‌ಎಫ್‌ಐ ಮೂಲಕ 1.5 ಲಕ್ಷದವರೆಗಿನ ಸಾಲವನ್ನ ಅಗತ್ಯವಿರುವವರಿಗೆ ನೀಡಲಾಗುವುದು ಎಂದು ಸರ್ಕಾರ ಘೋಷಿಸಿದೆ.

ಇದನ್ನೂ ಓದಿ: Court News : ತರಬೇತಿ ಅವಧಿಯ ಸಿಬ್ಬಂದಿ ಖಾಯಂ ನೌಕರನಲ್ಲ : ಹೈಕೋರ್ಟ್‌ ಮಹತ್ವದ ಆದೇಶ

Comments are closed.