ತಮಿಳುನಾಡು : Cuts Umbilical Cord Using Pen : ತಮಿಳುನಾಡಿನ ಕಡಲೂರು ಜಿಲ್ಲೆಯ ಚಿದಂಬರಂ ಪಟ್ಟಣದ ಸರ್ಕಾರಿ ಶಾಲೆಯ ಶೌಚಾಲಯದ ಬಳಿಯಲ್ಲಿ ಶಿಶುವಿನ ಶವ ಪತ್ತೆಯಾದ ಘಟನೆಯೊಂದು ಎಲ್ಲೆಡೆ ಸುದ್ದಿಯಾಗಿತ್ತು. ಈ ಘಟನೆ ನಡೆದ ನಾಲ್ಕು ದಿನಗಳ ಬಳಿಕ ಇದೇ ಶಾಲೆಯಲ್ಲಿ 11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಈ ಮಗುವಿಗೆ ಜನ್ಮ ನೀಡಿ ಬಳಿಕ ಪೊದೆಗೆ ಎಸೆದಿದ್ದಳು ಎಂಬ ವಿಚಾರ ಪೊಲೀಸರ ತನಿಖೆಯಲ್ಲಿ ಬಯಲಾಗಿತ್ತು. ಬಾಲಕಿಯನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸಿದ ಸಂದರ್ಭದಲ್ಲಿ 16ನೇ ವಯಸ್ಸಿನ ಬಾಲಕಿ ತರಗತಿಯಲ್ಲಿದ್ದ ಸಂದರ್ಭದಲ್ಲಿ ತನಗೆ ಹೆರಿಗೆ ನೋವು ಆರಂಭವಾಗಿತ್ತು ಎಂದು ಬಾಯ್ಬಿಟ್ಟಿದ್ದಳು.
ಕೂಡಲೇ ಶೌಚಾಲಯಕ್ಕೆ ತೆರಳಿದ ಬಾಲಕಿಯು ಮಗುವಿಗೆ ಜನ್ಮ ನೀಡಿದ್ದಳು. ಈ ಪ್ರಕರಣವು ಇಡೀ ತಮಿಳುನಾಡನ್ನೇ ಬೆಚ್ಚಿ ಬೀಳಿಸಿದೆ. ಅಪ್ರಾಪ್ತೆ ಗರ್ಭಿಣಿಯಾಗಲು ಕಾರಣನಾದವನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ವಿಚಾರಣೆಯ ಸಂದರ್ಭದಲ್ಲಿ ಬಾಲಕಿಯು ಕೆಲವು ಬೆಚ್ಚಿ ಬೀಳಿಸುವ ಅಂಶಗಳನ್ನು ಬಾಯ್ಬಿಟ್ಟಿದ್ದಾಳೆ. ಶಾಲೆಯ ಶೌಚಾಲಯದಲ್ಲಿಯೇ ಮಗುವಿಗೆ ಜನ್ಮ ನೀಡಿದ ಈಕೆಯು ಬಳಿಕ ಪೆನ್ನ್ನು ಬಳಸಿ ಮಗುವಿನ ಹೊಕ್ಕಳು ಬಳ್ಳಿಯನ್ನು ಕತ್ತರಿಸಿದ್ದಳಂತೆ..! ಹೆರಿಗೆಯ ಸಂದರ್ಭದಲ್ಲಿ ಅಪ್ರಾಪ್ತೆಗೆ ಸಹಾಯ ಮಾಡಲು ಯಾರೂ ಇಲ್ಲದ ಕಾರಣ ಸರಿಯಾದ ಸಮಯಕ್ಕೆ ಸೂಕ್ತ ವೈದ್ಯಕೀಯ ನೆರವು ಸಿಗದೇ ಮಗು ಸಾವನ್ನಪ್ಪಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ಪೆನ್ನಿಂದ ಮಗುವಿನ ಹೊಕ್ಕಳು ಬಳಿಯನ್ನು ಕತ್ತರಿಸಿದ ಈಕೆ ಬಳಿಕ ಮಗುವನ್ನು ಶೌಚಾಲಯದ ಸಮೀಪದಲ್ಲೇ ಇದ್ದ ಪೊದೆಯಲ್ಲಿ ಎಸೆದು ಪುನಃ ತರಗತಿಗೆ ಹಾಜರಾಗಿದ್ದಳಂತೆ.
ತಾನು ಗರ್ಭ ಧರಿಸಿದ್ದ ಬಗ್ಗೆ ಶಾಲೆಯಲ್ಲಾಗಲಿ ಅಥವಾ ಮನೆಯಲ್ಲಾಗಲಿ ಯಾರಿಗೂ ತಿಳಿದರಲಿಲ್ಲ ಎಂದು ಬಾಲಕಿ ಹೇಳಿದ್ದಾಳೆ. ಈ ಸಂಬಂಧ ಗ್ರಾಮಸ್ಥರು, ಆಕೆಯ ಸಂಬಂಧಿಗಳು ಸೇರಿದಂತೆ ಅನೇಕರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ.
ಇದನ್ನು ಓದಿ : BBMP’s work in rain damage : ರಾಜ್ಯ ರಾಜಧಾನಿಯಲ್ಲಿ ವರುಣನ ಅವಾಂತರ : ನೆರೆ ಸಂತ್ರಸ್ತರ ಕರೆಗಿಲ್ಲ ಬಿಬಿಎಂಪಿ ಸ್ಪಂದನೆ
Tamil Nadu: 16-year-old Girl Gives Birth in School Toilet, Cuts Umbilical Cord Using Pen