Nusrat Jahan: ನುಸ್ರತ್ ಜಹಾನ್ ಥೈಲ್ಯಾಂಡ್ ಟ್ರೀಪ್‌ ನಲ್ಲಿ ಹುಲಿ ಜೊತೆ‌ ನೀಡಿದ ಪೋಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಬಂಗಾಳಿ ನಟಿ ಹಾಗೂ ಸಂಸದೇ ನುಸ್ರತ್ ಜಹಾನ್(Nusrat Jahan) ತಮ್ಮ ಸೌಂದರ್ಯದಿಂದಲೇ ಮೋಡಿ ಮಾಡಿದ್ದರು. ಕೊನೆಗೆ ಇದ್ದಕ್ಕಿಂದ್ದಂತೆ ರಾಜಕೀಯಕ್ಕೆ ಧುಮುಕಿದ ನುಸ್ರತ್ ಜಹಾನ್ (Nusrat Jahan)ಸಂಸದೆಯಾಗಿ ಲೋಕಸಭೆಯ ಮೆಟ್ಟಿಲೇರಿದ್ರು. ಇದೆಲ್ಲದರ ಜೊತೆಗೆ ವೈಯಕ್ತಿಕ ಬದುಕಿನ ಕಾರಣಕ್ಕೂ ಸುದ್ದಿಯಾದ (Nusrat Jahan)ನುಸ್ರತ್ ಜಹಾನ್, ಈಗ ಹುಲಿ ಜೊತೆ ಪೋಟೋ ತೆಗೆಸಿಕೊಳ್ಳೋ ಮೂಲಕ ಸುದ್ದಿಯಾಗಿದ್ದಾರೆ. ಬೆಂಗಾಲಿ ಚೆಲುವೆ ನುಸ್ರತ್ ಜಹಾನ್ ಸದ್ಯ ತಮ್ಮ ಬಾಯ್ ಪ್ರೆಂಡ್ ಯಶ್ ಗುಪ್ತಾ (Yash Gupta)ಜೊತೆ ಥೈಲ್ಯಾಂಡ್ ಗೆ ಹಾರಿದ್ದಾರೆ. ಅಲ್ಲಿನ ಪ್ರೇಕ್ಷಣಿಯ ಸ್ಥಳಗಳಿಗೆ ಭೇಟಿ ಕೊಡ್ತಿರೋ(Nusrat Jahan) ನುಸ್ರತ್ ಜಹಾನ್ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಥೈಲ್ಯಾಂಡ್ ನ ಸ್ವಿಮ್ಮಿಂಗ್ ಫೂಲ್ ನಲ್ಲಿ ನುಸ್ರತ್ ಜಹಾನ್ ಸಖತ್ ಸಖತ್ ಹಾಟ್ ಹಾಟ್ ಪೋಸ್ ನೀಡಿದ್ದಾರೆ. ಮಾತ್ರವಲ್ಲ ಬ್ಲೂ ವಾಟರ್, ಹಾಲಿಡೇ ಮೂಡ ಎಂದೆಲ್ಲ ನುಸ್ರತ್ ತಮ್ಮ ಪೋಸ್ಟ್ ಗೇ ಟ್ಯಾಗ್ ಲೈನ್ ಕೂಡ ನೀಡಿದ್ದಾರೆ. ಥ್ಯೈಲ್ಯಾಂಡ್ ನ ಝೂಗೆ ಭೇಟಿ ನೀಡಿರೋ ನುಸ್ರತ್ ಹಾಗೂ ಯಶ್ ಅಲ್ಲಿನ ಹುಲಿ,ಚಿರತೆ ಹಾಗೂ ಆನೆಯೊಂದಿಗೆ ಪೋಸ್ ನೀಡಿ ಗಮನ ಸೆಳೆದಿದ್ದಾರೆ. ಯಶ್ ಗುಪ್ತಾ (Yash Gupta) ಜೊತೆ ವೈರೈಟಿ ವೈರೈಟಿ ಪೋಸ್ ನೀಡಿರೋ ನುಸ್ರತ್ ಇದಕ್ಕೆ ಸ್ನೇಹಪರ ಮುಖಾಮುಖಿ ಎಂದು ಹೆಡ್ಡಿಂಗ್ ಕೂಡ ನೀಡಿದ್ದಾರೆ.

ಕೆಲ ತಿಂಗಳ ಹಿಂದೆಯಷ್ಟೇ ನುಸ್ರತ್ ಜಹಾನ್ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ನುಸ್ರುತ್ ಟ್ರಿಪ್ ವೇಳೆ ಎಲ್ಲೂ ಮಗುವಿನ ಪೋಟೋವನ್ನು ತೋರಿಸಿಲ್ಲ. ಹೀಗಾಗಿ ಬಹುಷಃ ಮಗುವನ್ನು ಬಿಟ್ಟು ನುಸ್ರುತ್ ಹಾಗೂ ಯಶ್ ಟ್ರಿಪ್ ಗೆ ತೆರಳಿದ್ದಾರೆ ಎನ್ನಲಾಗಿದೆ. ನುಸ್ರುತ್ ಜಹಾನ್ಮು ಸ್ಲಿಂ ಸಮುದಾಯಕ್ಕೆ ಸೇರಿದ್ದು, ಹಿಂದೂ ಧರ್ಮಕ್ಕೆ ಸೇರಿದ ಉದ್ಯಮಿ ಜೊತೆ ಪ್ರೇಮ ವಿವಾಹವಾಗಿದ್ದರು. ಆದರೇ ಒಂದೇ ವರ್ಷಕ್ಕೆ ಈ ಮದುವೆ ಮುರಿದುಬಿದ್ದಿತ್ತು.

ನುಸ್ರತ್ ಜೊತೆ ವೈವಾಹಿಕ ಸಂಬಂಧ ಮುರಿದುಕೊಂಡ ಪತಿ ನುಸ್ರುತ್ ಗರ್ಭಿಣಿಯಾಗಿರೋ ಸಂಗತಿಯನ್ನು ತಿಳಿಸಿದ್ದಲ್ಲದೇ ನುಸ್ರುತ್ ಹೊಟ್ಟೆಯಲ್ಲಿರೋ ಮಗುಗೆ ತಾನು ತಂದೆಯಲ್ಲ ಎಂದು ಹೇಳಿದ್ದರು. ಇದಾದ ಬಳಿಕ ಈ ಎಲ್ಲ ವಿವಾದಗಳಿಗೆ ತೆರೆ ಎಳೆದಿದ್ದ ಸಂಸದೆ ಹಾಗೂ ನಟಿ ನುಸ್ರತ್ ತನ್ನ ಮಗುವಿಗೆ ಗೆಳೆಯ ಯಶ್ ಗುಪ್ತ (Yash Gupta)ತಂದೆ ಎಂದು ಸ್ಪಷ್ಟಪಡಿಸಿದ್ದರು. ಈ ಎಲ್ಲ ಘಟನೆಗಳ ಬಳಿಕ ಸೋಷಿಯಲ್ ಮೀಡಿಯಾದಿಂದ ಅಂತರ ಕಾಯ್ದುಕೊಂಡಿದ್ದ. ನುಸ್ರತ್ ಈಗ ಮತ್ತೆ ಹಾಟ್ ಹಾಟ್ ಪೋಟೋಸ್ ಜೊತೆ ಪ್ರತ್ಯಕ್ಷರಾಗಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗರ ಸಂಕಷ್ಟಕ್ಕೆ‌ಮಿಡಿದ ಬಾದ್ ಶಾ: ಸಹಾಯ ನೀಡಲು ಕಿಚ್ಚ ಸುದೀಪ್ ಟ್ರಸ್ಟ್ ಸಿದ್ಧ

ಇದನ್ನೂ ಓದಿ: ಅಫ್ಘಾನಿಸ್ತಾನ ಆಟಗಾರನಿಗೆ ಬ್ಯಾಟ್‌ನಿಂದ ಹೊಡೆಯಲು ಮುಂದಾದ ಪಾಕಿಸ್ತಾನದ ಆಸಿಫ್ ಅಲಿ

Nusrat Jahan Yash Dasgupta with Thailand trip

Comments are closed.