ಫೇಸ್ಬುಕ್ ಮಾಲೀಕತ್ವದ ವಾಟ್ಸಾಪ್ನ ಮೂಲಕ ಕಳುಹಿಸಲಾಗುವ ಸಂದೇಶಗಳು ಗೌಪ್ಯವಾಗಿ ಇರೋದಿಲ್ಲ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಅತ್ಯಂತ ಪ್ರಸಿದ್ಧ ಚಾಟ್ ಅಪ್ಲಿಕೇಶನ್ಗಳಲ್ಲಿ ಒಂದಾದ ವಾಟ್ಸಾಪ್ ಯಾವುದೇ ಕಾರಣಕ್ಕೂ ಗ್ರಾಹಕರ ಖಾಸಗಿ ಸಂದೇಶಗಳನ್ನು ಫೇಸ್ಬುಕ್ ಓದಲು ಸಾಧ್ಯವಿಲ್ಲ ಎಂದು ಹೇಳಿತ್ತು. ಆದರೆ ಪ್ರೋ ಪಬ್ಲಿಕಾ ನೀಡಿರುವ ವರದಿಯಲ್ಲಿ ಎಂಡ್ ಟು ಎಂಡ್ ಎನ್ಕ್ರಿಪ್ಟೆಡ್ ಎಂದು ವಾಟ್ಸಾಪ್ ಹೇಳಿದ್ದರೂ ಸಹ ಫೇಸ್ ಬುಕ್ ಕಂಪನಿಯೂ 1000ಕ್ಕೂ ಅಧಿಕ ಗುತ್ತಿಗೆ ಕೆಲಸಗಾರರಿಗೆ ವಾಟ್ಸಾಪ್ನಲ್ಲಿ ಬಳಕೆದಾರರು ಮಾಡುವ ಖಾಸಗಿ ಸಂದೇಶಗಳನ್ನು ಓದಲೆಂದೇ ನೇಮಿಸಿದೆ ಎನ್ನಲಾಗಿದೆ.
ಇದು ಮಾತ್ರವಲ್ಲದೇ ಈ ಕಂಪನಿಯು ಬಳಕೆದಾರರ ಕೆಲ ಖಾಸಗಿ ಮಾಹಿತಿಗಳನ್ನು ಅಮೆರಿಕದ ಡಿಪಾರ್ಟ್ಮೆಂಟ್ ಆಫ್ ಜಸ್ಟೀಸ್ನಂತಹ ಸಾಕಷ್ಟು ಕಾನೂನು ಜಾರಿ ಸಂಸ್ಥೆಯೊಂದಿಗೆ ಹಂಚಿಕೊಂಡಿದೆ ಎನ್ನಲಾಗಿದೆ. ವಾಟ್ಸಾಪ್ನಲ್ಲಿ ಬಳಕೆದಾರರ ಖಾಸಗಿ ಸಂಭಾಷಣೆಯ ಮೇಲೆ ಕಣ್ಣಿಡಲು ಸಾಧ್ಯವಿಲ್ಲ ಎಂದು ಫೇಸ್ಬುಕ್ ಸ್ಥಾಪಕ ಜುಕರ್ ಬರ್ಗ್ ಹೇಳಿಕೆ ನೀಡಿದ್ದರು. ಆದರೆ ಇದೀಗ ಪ್ರೋ ಪಬ್ಲಿಕಾ ಈ ಸ್ಪೋಟಕ ಮಾಹಿತಿ ಲಭ್ಯವಾಗಿದೆ. ವಾಟ್ಸಾಪ್ನಲ್ಲಿ ಬಳಕೆದಾರರ ಯಾವುದೇ ಖಾಸಗಿ ವಿಚಾರಗಳನ್ನು ನಾವು ನೋಡುವುದಿಲ್ಲ ಎಂದು ಜುಕರ್ ಬರ್ಗ್ ಹೇಳಿದ್ದರು.
ಇದನ್ನೂ ಓದಿ: LPG GAS : ಈ ನಂಬರ್‌ಗೆ ಮಿಸ್‌ಕಾಲ್ ಕೊಟ್ರೆ ಮನೆ ಬಾಗಿಲಿಗೆ ಬರುತ್ತೆ ಗ್ಯಾಸ್
ಹೊಸ ಬಳಕೆದಾರರು ವಾಟ್ಸಾಪ್ಗೆ ಸೈನಪ್ ಆಗುತ್ತಿದ್ದಂತೆಯೇ, ನಿಮ್ಮ ಸಂದೇಶಗಳು ಹಾಗೂ ಕರೆಗಳು ಸುರಕ್ಷಿತವಾಗಿದೆ. ನೀವು ಸಂಭಾಷಣೆ ನಡೆಸುವ ವ್ಯಕ್ತಿಯ ಹಾಗೂ ನಿಮ್ಮ ನಡುವೆ ವಿಲೇವಾರಿ ಆಗುವ ವಿಚಾರಗಳನ್ನು ಯಾರೂ ಓದುವುದಿಲ್ಲ, ಕೇಳುವುದೂ ಇಲ್ಲ , ನಿಮ್ಮ ಮಧ್ಯೆ ಇಲ್ಲಿ ಇನ್ಯಾರೂ ಇರುವುದಿಲ್ಲ. ವಾಟ್ಸಾಪ್ ಕೂಡ..! ಎಂದು ಗೌಪ್ಯತೆಯ ಬಗ್ಗೆ ದೃಢೀಕರಣ ನೀಡಲಾಗುತ್ತದೆ. ಆದರೆ ಈ ಎಲ್ಲಾ ದೃಢೀಕರಣವು ಸುಳ್ಳು ಎಂದು ಸಾಬೀತಾಗಿದೆ. ಆಸ್ಟಿನ್, ಟೆಕ್ಸಾಸ್, ಡುಬ್ಲಿನ್ ಹಾಗೂ ಸಿಂಗಾಪುರದಲ್ಲಿ ಈ ಮೆಸೇಜ್ಗಳನ್ನು ಓದುವವರಿಗಾಗಿಯೇ ಕಚೇರಿ ಸ್ಥಾಪನೆ ಮಾಡಲಾಗಿದೆ.
ಇದನ್ನೂ ಓದಿ: ವಾಟ್ಸಾಪ್ ಪೇಗೆ ಯುಪಿಐ ಲೈಸೆನ್ಸ್ : ಎನ್ ಪಿಐಎ ಸುಪ್ರೀಂ ನೋಟಿಸ್
ಇಲ್ಲಿ ಸಾವಿರಕ್ಕೂ ಅಧಿಕ ಗುತ್ತಿಗೆ ಕೆಲಸಗಾರರು ವಾಟ್ಸಾಪ್ ಸಂಭಾಷಣೆಯನ್ನು ಕೇಳುವ ಹಾಗೂ ಓದುವ ಮೂಲಕ ಗ್ರಾಹಕರ ವೈಯಕ್ತಿಕ ಮಾಹಿತಿ ಗಳನ್ನು ಕಲೆ ಹಾಕುತ್ತಿದ್ದಾರೆ ಎಂದು ಪ್ರೋ ಪಬ್ಲಿಕಾ ಹೇಳಿದೆ. ಪ್ರೋ ಪಬ್ಲಿಕಾದ ಈ ವರದಿಯ ಬಳಿಕ ಸಿಗ್ನಲ್ ಹಾಗೂ ಟೆಲಿಗ್ರಾಂನಂತಹ ಅಪ್ಲಿಕೇಶನ್ಗಳತ್ತ ಜನರು ಇನ್ನಷ್ಟು ಮನಸ್ಸು ಮಾಡುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
(Are you using WhatsApp? Your personal information will be exposed)