Condom : ರಾಷ್ಟ್ರೀಯ ಹೆದ್ದಾರಿಯಲ್ಲಿ ಪತ್ತೆಯಾಯ್ತು ರಾಶಿ ರಾಶಿ ಕಾಂಡೂಮ್‌ ! ಬೆಚ್ಚಿ ಬಿದ್ದ ವಾಹನ ಸವಾರರು

ತುಮಕೂರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಇಂದು ಶಾಕ್‌ ಎದುರಾಗಿತ್ತು. ಕಿಲೋ ಮೀಟರ್‌ ದೂರದ ವರೆಗೂ ರಾಶಿರಾಶಿ ಕಾಂಡೋಮ್‌ಗಳು ಹೆದ್ದಾರಿಯುದ್ದಕ್ಕೂ ಬಿದ್ದಿತ್ತು. ಅಷ್ಟಕ್ಕೂ ಈ ಘಟನೆ ನಡೆದಿರೋದು ತುಮಕೂರಿನಲ್ಲಿ.

ಹೌದು, ಇಂದು ತುಮಕೂರಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 48ರ ಕ್ಯಾತ್ಸಂದ್ರ ಮತ್ತು ಬಟವಾಡಿ ಮಾರ್ಗದ ರಸ್ತೆಯ ಬದಿಯಲ್ಲಿ ರಾಶಿ ರಾಶಿ ಕಾಂಡೋಮ್‌ ಪತ್ತೆಯಾಗಿದೆ. ಎಲ್ಲಾ ಕಾಂಡೋಮ್‌ಗಳನ್ನು ಬಳಸಿದ ರೀತಿಯಲ್ಲಿ ಕಂಡು ಬಂದಿದೆ. ಇದನ್ನು ನೋಡಿದ ಪ್ರಯಾಣಿಕರು ಅರೆ ಕ್ಷಣ ಶಾಕ್‌ ಆಗಿದ್ದಾರೆ.

ಕಂಪೆನಿಯಿಂದ ಕಾಂಡೋಮ್‌ ಸಾಗಾಣಿಕೆ ಮಾಡುವ ವೇಳೆಯಲ್ಲಿ ಉದುರಿ ಬಿದ್ದಿರಬಹುದು. ಇಲ್ಲಾ ಯಾರಾದ್ರೂ ತಂದು ಇಲ್ಲಿ ಎಸೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ : ಅಂಡರ್‌ವೇರ್‌ ಜೇಬಿನಲ್ಲಿತ್ತು 9 ಕೆಜಿ ಚಿನ್ನ ! ಸಿನಿಮೀಯ ರೀತಿಯಲ್ಲಿ ಸೆರೆ ಹಿಡಿದ ಪೊಲೀಸರು

ಇದನ್ನೂ ಓದಿ : ಮನೆ ಬಿಟ್ಟು ಓಡಿ ಹೋಗಿದ್ದ 14 ವರ್ಷದ ಬಾಲಕಿಯ ಮೇಲೆ 13 ಮಂದಿಯಿಂದ ಅತ್ಯಾಚಾರ

(condoms found on national highway at Kyathsandra Tukur)

Comments are closed.