Tripura Chief Minister Biplab Deb : ತ್ರಿಪುರ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಬಿಪ್ಲಬ್​ ಕುಮಾರ್​ ದೇಬ್​

Tripura Chief Minister Biplab Deb : ಕರ್ನಾಟಕದಂತೆಯೇ ತ್ರಿಪುರ ವಿಧಾನಸಭಾ ಚುನಾವಣೆಗೂ ಕೇವಲ ಇನ್ನೊಂದು ವರ್ಷ ಬಾಕಿ ಉಳಿದಿದೆ. ಈ ನಡುವೆ ಪ್ರಮುಖ ರಾಜಕೀಯ ಬೆಳವಣಿಗೆ ಎಂಬಂತೆ ತ್ರಿಪುರ ಸಿಎಂ ಬಿಪ್ಲಬ್​ ಕುಮಾರ್​ ದೇಬ್​ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪತ್ರವನ್ನು ರಾಜಭವನಕ್ಕೆ ತೆರಳಿ ರಾಜ್ಯಪಾಲ ಎಸ್​.ಎನ್​ ಸೂರ್ಯರಿಗೆ ಹಸ್ತಾಂತರಿಸಿದ್ದಾರೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆಯನ್ನೇ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.


ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದ ಬಳಿಕ ಬಿಪ್ಲಬ್​ ಕುಮಾರ್​ ದೇಬ್​ ಈ ಮಾಹಿತಿಯನ್ನು ಅಧಿಕೃತವಾಗಿ ಘೋಷಿಸಿದರು. ನಾನು ಪಕ್ಷದ ಸಂಘಟನೆಯತ್ತ ಗಮನ ಹರಿಸಬೇಕು ಎಂದು ಪಕ್ಷ ಬಯಸುತ್ತಿದೆ ಎಂದು ಬಿಪ್ಲಬ್​ ಕುಮಾರ್​ ದೇಬ್​ ತಿಳಿಸಿದರು.


ತ್ರಿಪುರ ರಾಜ್ಯ ಬಿಜೆಪಿ ಘಟಕದಲ್ಲಿ ಆಂತರಿಕ ಕಚ್ಚಾಟಗಳ ವದಂತಿಗಳ ನಡುವೆಯೇ ಈ ರಾಜೀನಾಮೆ ನಿರ್ಧಾರ ಹೊರ ಬಿದ್ದಿದೆ ಎನ್ನಲಾಗಿದೆ. ಬಿಪ್ಲಬ್​ ಕುಮಾರ್​ ದೇಬ್​ ರಾಜೀನಾಮೆ ಬಳಿಕ ತ್ರಿಪುರದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು ಇನ್ನೇನು ಕೆಲವೇ ಗಂಟೆಗಳಲ್ಲಿ ತ್ರಿಪುರದ ನೂತನ ಮುಖ್ಯಮಂತ್ರಿಯ ಹೆಸರು ಘೋಷಣೆಯಾಗಲಿದೆ.

ಇದನ್ನು ಓದಿ : Kavitha Gowda : ಸದ್ದು ಮಾಡ್ತಿದೆ ‘ಮೆಟಡೋರ್’ ಸಿನಿಮಾದ ’ಗಾಂಧಾರಿ’ ಹಾಡು : ಬೆಳ್ಳಿತೆರೆಯಲ್ಲಿ ಕವಿತಾ ಗೌಡ ಮಿಂಚು

ಇದನ್ನೂ ಓದಿ : Sunny Leone Birthday : ‘ಬೇಕರಿ ಕೆಲಸದಿಂದ ಬಾಲಿವುಡ್​ ನಟಿಯವರೆಗೆ…’ : ಇಲ್ಲಿದೆ ನೋಡಿ ನಟಿ ಸನ್ನಿ ಲಿಯೋನ್ ನಡೆದು ಬಂದ ಹಾದಿ

Tripura Chief Minister Biplab Deb Resigns A Year Ahead Of Elections

Comments are closed.