India Bans Wheat Exports : ವಿದೇಶಗಳಿಗೆ ಗೋಧಿ ರಫ್ತು ನಿಲ್ಲಿಸಿದ ಭಾರತ : ಇದರ ಹಿಂದಿದೆ ಈ ಕಾರಣ

India Bans Wheat Exports : ಭಾರತದಲ್ಲಿ ಬೆಲೆ ಏರಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ದೇಶದಲ್ಲಿ ಈ ಕ್ಷಣದಿಂದಲೇ ಜಾರಿಗೆ ಬರುವಂತೆ ಗೋಧಿಗಳನ್ನು ರಫ್ತು ಮಾಡಲು ನಿಷೇಧವನ್ನು ಹೇರಲಾಗಿದೆ. ನಿನ್ನೆಯ ಅಧಿಸೂಚನೆಗಳಿಗಿಂತ ಮೊದಲು ನೀಡಲಾದ ಕ್ರೆಡಿಟ್​ ಪತ್ರಗಳಿಗೆ ಮಾತ್ರ ರಫ್ತು ಸಾಗಣೆಗೆ ಅನುಮತಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.


ಇದನ್ನು ಹೊರತುಪಡಿಸಿ ಆಹಾರ ಕೊರತೆ ಎದುರಿಸುತ್ತಿರುವ ರಾಷ್ಟ್ರಗಳಿಗೆ ಕೋರಿಕೆಯ ಮೇರೆಗೆ ಸರ್ಕಾರವು ಗೋಧಿಯನ್ನು ರಫ್ತು ಮಾಡಲು ಅವಕಾಶ ನೀಡುತ್ತದೆ ಎಂದು ಡೈರಕ್ಟರೇಟ್​ ಜನರಲ್​ ಆಫ್​ ಫಾರೀನ್​ ಟ್ರೇಡ್​​ ಹೇಳಿದೆ .
ದೇಶದ ಒಟ್ಟಾರೆ ಆಹಾರದ ಭದ್ರತೆಯನ್ನು ನಿರ್ವಹಿಸಲು ಹಾಗೂ ನೆರೆಯ ಮತ್ತು ಇತರೆ ದುರ್ಬಲ ರಾಷ್ಟ್ರಗಳ ಅಗತ್ಯವನ್ನು ಬೆಂಬಲಿಸುವ ಸಲುವಾಗಿ ಸರ್ಕಾರವು ಈ ನಿರ್ಧಾರವನ್ನು ಕೈಗೊಂಡಿದೆ ಎಂದು ಡೈರಕ್ಟರೇಟ್​ ಜನರಲ್​ ಆಫ್​ ಫಾರೀನ್​ ಟ್ರೇಡ್​ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.


ಚೀನಾದ ಬಳಿಕ ವಿಶ್ವದಲ್ಲಿ ಎರಡನೇ ಅತೀ ದೊಡ್ಡ ಗೋಧಿ ಉತ್ಪಾದಕ ರಾಷ್ಟ್ರವೆಂದರೆ ಅದು ಭಾರತ. ಫೆಬ್ರವರಿ ಅಂತ್ಯದಲ್ಲಿ ರಷ್ಯಾ ಹಾಗೂ ಉಕ್ರೇನ್​​ ಯುದ್ಧ ಆರಂಭವಾದಾಗಿನಿಂದ ಜಾಗತಿಕ ಮಟ್ಟದಲ್ಲಿ ಆಹಾರ ಸರಪಳಿಯಲ್ಲಿ ಏರು ಪೇರು ಕಂಡು ಬರುತ್ತಿದೆ. ಮಾರ್ಚ್‌ನಲ್ಲಿ ಶಾಖದ ಅಲೆಯಿಂದಾಗಿ ಭಾರಿ ಬೆಳೆ ನಷ್ಟದ ನಂತರ ಗೋಧಿ ರಫ್ತು ನಿಷೇಧಿಸುವ ಕ್ರಮವು ಬಂದಿದೆ. ಏಪ್ರಿಲ್‌ನಲ್ಲಿ ಶೇಕಡಾ 7.79 ಕ್ಕೆ ಏರಿದ ಹಣದುಬ್ಬರವನ್ನು ನಿಯಂತ್ರಿಸಲು ಸರ್ಕಾರವು ಒತ್ತಡದಲ್ಲಿದೆ.


ಭಾರತದಿಂದ ಗೋಧಿ ರಫ್ತು ಹೆಚ್ಚಿಸುವ ಸಾಧ್ಯತೆಗಳನ್ನು ಅನ್ವೇಷಿಸಲು ಕೇಂದ್ರವು ಮೊರಾಕೊ, ಟುನೀಶಿಯಾ, ಇಂಡೋನೇಷ್ಯಾ, ಫಿಲಿಪೈನ್ಸ್, ಥೈಲ್ಯಾಂಡ್, ವಿಯೆಟ್ನಾಂ, ಟರ್ಕಿ, ಅಲ್ಜೀರಿಯಾ ಮತ್ತು ಲೆಬನಾನ್‌ಗೆ ವ್ಯಾಪಾರ ನಿಯೋಗಗಳನ್ನು ಕಳುಹಿಸುತ್ತದೆ. ಭಾರತವು ದಾಖಲೆಯ 10 ಮಿಲಿಯನ್ ಟನ್ ಗೋಧಿಯ ಗುರಿಯನ್ನು ಹೊಂದಿದೆ. 2022-23 ಜಾಗತಿಕವಾಗಿ ಧಾನ್ಯಕ್ಕೆ ಜಾಗತಿಕ ಬೇಡಿಕೆ ಹೆಚ್ಚುತ್ತಿರುವ ನಡುವೆ,ಸರ್ಕಾರದ ಈ ಹೇಳಿಕೆಯು ಬಂದಿದೆ.

ಇದನ್ನು ಓದಿ : Kavitha Gowda : ಸದ್ದು ಮಾಡ್ತಿದೆ ‘ಮೆಟಡೋರ್’ ಸಿನಿಮಾದ ’ಗಾಂಧಾರಿ’ ಹಾಡು : ಬೆಳ್ಳಿತೆರೆಯಲ್ಲಿ ಕವಿತಾ ಗೌಡ ಮಿಂಚು

ಇದನ್ನೂ ಓದಿ : Sunny Leone Birthday : ‘ಬೇಕರಿ ಕೆಲಸದಿಂದ ಬಾಲಿವುಡ್​ ನಟಿಯವರೆಗೆ…’ : ಇಲ್ಲಿದೆ ನೋಡಿ ನಟಿ ಸನ್ನಿ ಲಿಯೋನ್ ನಡೆದು ಬಂದ ಹಾದಿ

India Bans Wheat Exports 2 Days After Setting Massive Target

Comments are closed.