ಹೊಸದಿಲ್ಲಿ : (Two Finger Test)ಅತ್ಯಾಚಾರ ಸಂತ್ರಸ್ತರಿಗೆ ನಡೆಸಲಾಗುವ ಎರಡು ಬೆರಳಿನ ಪರೀಕ್ಷೆಯನ್ನು (Two Finger Test) ಅವೈಜ್ಞಾನಿಕ ಮತ್ತು ಪಿತೃಪ್ರಭುತ್ವದ ಸಂಕೇತ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಲ್ಲದೇ ಟೂ ಫಿಂಗರ್ ಟೆಸ್ಟ್ ಗೆ ಸುಪ್ರೀಂ ಕೋರ್ಟ್ ನಿಷೇಧ ಹೇರಿದೆ.
ಅತ್ಯಾಚಾರ ಸಂತ್ರಸ್ತರು ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರನ್ನು ಎರಡು ಬೆರಳು ಪರೀಕ್ಷೆ(Two Finger Test)ಗೆ ಒಳಪಡಿಸದಂತೆ ತಡೆಯಬೇಕು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ತಾಕೀತು ಮಾಡಿದೆ . ಸಮಾಜದಲ್ಲಿ ಇನ್ನೂ ಇಂತಹ ಪದ್ಧತಿ ಇರುವುದು ಅತ್ಯಂತ ದುರದೃಷ್ಟಕರ ಎಂದು ಹೇಳಿದ ಸುಪ್ರೀಂ ಕೋರ್ಟ್, ಈ ಕುರಿತಾದ ಅಧ್ಯಯನವನ್ನು ಸರಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳ ಪಠ್ಯಕ್ರಮದಿಂದ ತೆಗೆದುಹಾಕುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಇದನ್ನೂ ಓದಿ : Twitter Blue Tick : ಟ್ವೀಟರ್ ಉಚಿತವಲ್ಲ ; ಬ್ಲೂ ಟಿಕ್‌ಗೆ ಇನ್ಮುಂದೆ ಮಾಸಿಕ ಶುಲ್ಕ
“ಎರಡು ಬೆರಳು ಪರೀಕ್ಷೆ” ಮಹಿಳೆಯ ಘನತೆ ಮತ್ತು ಗೌಪ್ಯತೆಯ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಅತ್ಯಾಚಾರಗಳಂತಹ ಮಾನಸಿಕ ಆಘಾತಕಾರಿ ಸನ್ನಿವೇಶಗಳಿಂದ ಹೊರಬರಲು ಪ್ರಯತ್ನಿಸುವ ಸಂತ್ರಸ್ತರನ್ನು ಈ ರೀತಿಯಾಗಿ ಎರಡು ಬೆರಳು ಪರೀಕ್ಷೆಗೆ ಒಳಪಡಿಸುವುದರಿಂದ ಮತ್ತಷ್ಟು ಆಘಾತವನ್ನು ನೀಡುತ್ತದೆ. ಆದ್ದರಿಂದ ಎರಡು ಬೆರಳು ಪರೀಕ್ಷೆಯನ್ನು ನಡೆಸಬಾರದು , ಅಲ್ಲದೆ ಮುಂದಿನ ದಿನಗಳಲ್ಲಿ ಯಾವುದೇ ವೈದ್ಯರು ಅತ್ಯಾಚಾರ ಸಂತ್ರಸ್ತರನ್ನು ಪರೀಕ್ಷೆಗೆ ಒಳಪಡಿಸಿದಲ್ಲಿ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ತೀರ್ಪನ್ನು ನೀಡಿದೆ.
ಇದನ್ನೂ ಓದಿ : Seat belt is mandatory : ವಾಹನ ಸವಾರರ ಗಮನಕ್ಕೆ : ಇನ್ಮುಂದೆ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ಕಡ್ಡಾಯ, ನಾಳೆಯಿಂದಲೇ ಹೊಸ ರೂಲ್ಸ್
ಸುಪ್ರೀಂ ಕೋರ್ಟ್ ನಲ್ಲಿ ಅತ್ಯಾಚಾರ ಪ್ರಕರಣವೊಂದರ ವಿಚಾರಣೆ ನಡೆಯುವ ವೇಳೆಯಲ್ಲಿ “ಕೇವಲ ಲೈಂಗಿಕವಾಗಿ ಸಕ್ರಿಯವಾಗಿರುವ ಕಾರಣ ತನ್ನ ಮೇಲೆ ಅತ್ಯಾಚಾರವೆಸಗಲಾಗಿದೆ ಎಂದು ಮಹಿಳೆ ಹೇಳಿದಾಗ ಅದನ್ನು ನಂಬಲು ಸಾಧ್ಯವಿಲ್ಲ ಎಂದು ಹೇಳುವುದು ಪಿತೃಪ್ರಭುತ್ವ ಮತ್ತು ಅವೈಜ್ಞಾನಿಕವಾಗಿದೆ .” ಎಂದು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ಹಿಮಾ ಕೊಹ್ಲಿ ಇದ್ದ ದ್ವಿಸದಸ್ಯ ಪೀಠವು ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಇದನ್ನೂ ಓದಿ : Gujarat Bridge Incident:ಗುಜರಾತ್ ಸೇತುವೆ ಕುಸಿತ ಪ್ರಕರಣ : ಬಿಜೆಪಿ ಸಂಸದರ ಕುಟುಂಬದ 12 ಮಂದಿ ಸಾವು
ನ್ಯಾಯಾಲಯವು ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯವನ್ನು ಆಪಾದಿಸುವ ಪ್ರಕರಣಗಳಲ್ಲಿ ಎರಡು ಬೆರಳು ಪರೀಕ್ಷೆಯ ಬಳಕೆಯನ್ನು ನಿರಾಕರಿಸಿದೆ. ಅತ್ಯಾಚಾರ ಸಂತ್ರಸ್ತರಿಗೆಪರೀಕ್ಷೆ ಎಂದು ಕರೆಯಲ್ಪಡುವ ಎರಡು ಬೆರಳು ಪರೀಕ್ಷೆಯು ಯಾವುದೇ ವೈಜ್ಞಾನಿಕ ಆಧಾರವನ್ನು ಹೊಂದಿಲ್ಲ ಮತ್ತು ಅತ್ಯಾಚಾರದಿಂದ ಬದುಕುಳಿದವರನ್ನು ಪರೀಕ್ಷಿಸುವ ಆಕ್ರಮಣಕಾರಿ ವಿಧಾನವಾಗಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
(Two Finger Test) The Supreme Court has said that the Two Finger Test (Two Finger Test) conducted for rape victims is unscientific and a symbol of patriarchy. Also, the Supreme Court has banned the two finger test.