ದುಬೈ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಅರಬ್ ರಾಷ್ಟ್ರಗಳು ಭಾರತದಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಕೋವಿಡ್ ಲಸಿಕೆ ಪ್ರಮಾಣ ಪತ್ರ ಕಡ್ಡಾಯಗೊಳಿಸಿತ್ತು. ಇನ್ಮುಂದೆ ಭಾರತ ಸೇರಿದಂತೆ ಐದು ದೇಶದ ಪ್ರಯಾಣಿಕರಿಗೆ ಕೋವಿಡ್ -19 ಲಸಿಕೆ ಪ್ರಮಾಣಪತ್ರ ಅಗತ್ಯವಿಲ್ಲ ಎಂದು ಫ್ಲ್ಯಾಗ್ ಕ್ಯಾರಿಯರ್ ಎಮಿರೇಟ್ಸ್ ಘೋಷಿಸಿದೆ.
ಯುಎಇ ನಿವಾಸ ವೀಸಾ ಹೊಂದಿರುವ ಎಲ್ಲಾ ಪ್ರಯಾಣಿಕರಿಗೆ ಭಾರತ, ನೇಪಾಳ, ನೈಜೀರಿಯಾ, ಪಾಕಿಸ್ತಾನ, ಶ್ರೀಲಂಕಾ ಮತ್ತು ಉಗಾಂಡಾದಿಂದ ದುಬೈಗೆ ಪ್ರಯಾಣಿಸಲು ಅವಕಾಶ ವಿದೆ, ಅವರು ಮಾದರಿ ಸಂಗ್ರಹಣೆಯ ಸಮಯದಲ್ಲಿ 48 ಗಂಟೆಗಳಲ್ಲಿ ಮಾಡಿಸಿರುವ ಕೋವಿಡ್ -19 ಪರೀಕ್ಷಾ ಪ್ರಮಾಣಪತ್ರವನ್ನುಕಡ್ಡಾಯವಾಗಿ ನೀಡಬೇಕೆಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.
ದುಬೈ ವೀಸಾ ಹೊಂದಿರುವವರು ಜನರಲ್ ಡೈರೆಕ್ಟರೇಟ್ ಆಫ್ ರೆಸಿಡೆನ್ಸಿ ಮತ್ತು ಫಾರಿನರ್ಸ್ ಅಫೇರ್ಸ್ (GDRFA) ಮೂಲಕ ಪೂರ್ವ-ಪ್ರವೇಶ ಅನುಮೋದನೆಗೆ ಅರ್ಜಿ ಸಲ್ಲಿಸಬೇಕು. ಭಾರತ, ನೇಪಾಳ, ನೈಜೀರಿಯಾ, ಪಾಕಿಸ್ತಾನ, ಶ್ರೀಲಂಕಾ ಮತ್ತು ಉಗಾಂಡಾದಿಂದ ಪ್ರಯಾಣಿಸುವ ಯುಎಇ ನಿವಾಸಿಗಳಿಗೆ ಎಮಿರೇಟ್ಸ್ ಏರ್‌ಲೈನ್ ತನ್ನ ಪ್ರಯಾಣ ನಿಯಮಗಳಲ್ಲಿ ಬದಲಾವಣೆಯನ್ನು ಮಾಡಿದೆ. ಹೀಗಾಗಿ ಇನ್ಮುಂದೆ COVID-19 ವ್ಯಾಕ್ಸಿನೇಷನ್ ಪ್ರಮಾಣಪತ್ರ ಇಲ್ಲದೇ ಯುಎಇಗೆ ಪ್ರಯಾಣಿಸಬಹುದಾಗಿದೆ.
ಇದನ್ನೂ ಓದಿ : Wildfire Algeria : ಕಾಡ್ಗಿಚ್ಚು 25 ಸೈನಿಕರು ಸೇರಿ 42 ಮಂದಿ ಬಲಿ
ವಿಮಾನ ಹೊರಡುವ 4 ಗಂಟೆಗಳ ಮೊದಲು ಕೋವಿಡ್ -19 ಪಿಸಿಆರ್ ಪರೀಕ್ಷೆಯನ್ನು ಪೂರ್ಣಗೊಳಿಸಬೇಕು. ಪ್ರಯಾಣಿಕರು ದುಬೈಗೆ ಬಂದ ಮೇಲೆ ಕೋವಿಡ್ -19 ಪಿಸಿಆರ್ ಪರೀಕ್ಷೆ ಯನ್ನು ಮಾಡಿಸಬೇಕು. ಯುಎಇ ಪ್ರಜೆಗಳಿಗೆ ಈ ಅವಶ್ಯಕತೆಗಳಿಂದ ವಿನಾಯಿತಿ ನೀಡಲಾಗಿದೆ ಆದರೆ ದುಬೈಗೆ ಬಂದ ಮೇಲೆ ಕೋವಿಡ್ -19 ಪಿಸಿಆರ್ ಪರೀಕ್ಷೆಗೆ ಒಳಪಟ್ಟಿರುತ್ತದೆ ಎಂದು ಅದು ಹೇಳಿದೆ. ಯುಎಇ ನಿವಾಸಿಗಳಿಗೆ ದುಬೈಗೆ ಮರಳಲು ಅವಕಾಶ ನೀಡುವುದಕ್ಕಾಗಿ ಲಸಿಕೆ ಪ್ರಮಾಣಪತ್ರಗಳನ್ನು ಪರಿಶೀಲಿಸಲಾಗುತ್ತಿಲ್ಲ ಎಂದು ವಿಮಾನಯಾನ ಸಂಸ್ಥೆ ಗಳಿಂದ ತಮಗೆ ಮಾಹಿತಿ ನೀಡಲಾಗಿದೆ ಎಂದು ಟ್ರಾವೆಲ್ ಏಜೆಂಟರು ತಿಳಿಸಿದ್ದಾರೆ.
ಯುಎಇಯ ಎರಡನೇ ಫ್ಲ್ಯಾಗ್ ಕ್ಯಾರಿಯರ್ ಎತಿಹಾದ್‌ಗೆ ಸಂಬಂಧಿಸಿದಂತೆ, ಯುಎಇಯೊಳಗಿನಿಂದ ಎರಡು ಡೋಸ್‌ಗಳನ್ನು ಪಡೆಯುವ ಲಸಿಕೆ ಪ್ರಮಾಣಪತ್ರವು ಅವರ ಇತ್ತೀಚಿನ ಪ್ರಯಾಣ ಮಾರ್ಗಸೂಚಿಗಳ ಪ್ರಕಾರ ಇನ್ನೂ ಅಗತ್ಯವಾಗಿದೆ ಎಂದು ವರದಿ ಹೇಳಿದೆ.