Robosoft : ರೋಬೋಸಾಫ್ಟ್‌ 805 ಕೋಟಿಗೆ ಸೇಲ್‌ : ಜಪಾನ್‌ನ ಟೆಕ್ನೋಪ್ರೋ ಪಾಲಾಯ್ತು ಉಡುಪಿಯ ಕಂಪೆನಿ

ಉಡುಪಿ : ಕರಾವಳಿ ಭಾಗದಲ್ಲಿ ಸಾಫ್ಟ್‌ವೇರ್‌ ಕಂಪೆನಿಯೊಂದನ್ನು ಆರಂಭಿಸಿ ಸಾವಿರಾರು ಜನರಿಗೆ ಉದ್ಯೋಗವನ್ನು ದೊರಕಿಸಿದ್ದ ಉಡುಪಿ ಮೂಲದ ರೋಬೋಸಾಫ್ಟ್‌ ಕಂಪೆನಿ ಬರೋಬ್ಬರಿ 805 ಕೋಟಿ ರೂಪಾಯಿಗೆ ಸೇಲ್‌ ಆಗಿದೆ.

ಜಪಾನ್‌ ಮೂಲದ ಟೆಕ್ನೋಪ್ರೋ ಹೋಲ್ಡಿಂಗ್‌ ಕಂಪೆನಿ ಉಡುಪಿಯ ಡಿಜಿಟಲ್‌ ಟ್ರಾನ್ಸ್‌ಫಾರ್ಮೇಶನ್‌ ಸೆಲ್ಯೂಷನ್ಸ್‌ ಸಂಸ್ಥೆಯಾಗಿರುವ ರೋಬೋಸಾಫ್ಟ್‌ನ್ನು ತನ್ನ ತೆಗೆದುಕೊಂಡಿದೆ. ಭಾರತ ಪ್ರಮುಖ ಮಾಧ್ಯಮ ಲೋಕದಲ್ಲಿ ಮೊಬೈಲ್‌ ಆಪ್‌ಗಳನ್ನು ಅಭಿವೃದ್ದಿ ಪಡಿಸಿದ ಹೆಗ್ಗಳಿಕೆ ರೋಬೋಸಾಫ್ಟ್‌ಗೆ ಸಲ್ಲುತ್ತದೆ. ಕೇವಲ ಭಾರತ ಮಾತ್ರವಲ್ಲದೇ ಅಮೇರಿಕಾ, ಜಪಾನ್‌ ಸೇರಿದಂತೆ ವಿಶ್ವದ ಹಲವು ಕಡೆಗಳಲ್ಲಿಯೂ ತನ್ನ ವ್ಯವಹಾರವನ್ನು ವಿಸ್ತರಣೆ ಮಾಡಿದೆ.

1996ರಲ್ಲಿ ಉಡುಪಿಯ ರೋಹಿತ್‌ ಭಟ್‌ ಆರಂಭಿಸಿದ್ದ ರೋಬೋ ಸಾಫ್ಟ್‌ ಉಡುಪಿ ಜಿಲ್ಲೆಯ ಪಾಲಿನ ಮೊಲದ ಸಾಫ್ಟ್‌ವೇರ್‌ ಕಂಪೆನಿ. ಸಣ್ಣ ಮಟ್ಟದಲ್ಲಿ ಆರಂಭಗೊಂಡ ಕಂಪೆನಿ ಯಲ್ಲಿ ಇಂದು ಬರೋಬ್ಬರಿ ಸಾವಿರಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ. ಪ್ರತಿಷ್ಠಿತ ಮೊಬೈಲ್‌ ಕಂಪೆನಿಗಳಲ್ಲೊಂದಾಗಿರುವ ಆಪಲ್‌ ಜೊತೆಗೂ ವ್ಯವಹಾರಿಕ ಸಂಬಂಧವನ್ನು ಹೊಂದಿದೆ.

ಜಪಾನ್‌ ಮೂಲದ ಟೆಕ್ನೋಪ್ರೋ ಸಂಸ್ಥೆಗೆ ರೋಬೋಸಾಫ್ಟ್‌ನ ಶೇಕಡಾ 100 ರಷ್ಟು ಶೇರುಗಳನ್ನು ಮಾರಾಟ ಮಾಡುವ ಕುರಿತು ಖುದ್ದು ರೋಬೋಸಾಫ್ಟ್‌ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ರೋಹಿತ್‌ ಭಟ್‌ ಟ್ವೀಟ್‌ ಮಾಡಿದ್ದಾರೆ. ಕಳೆದ ಎರಡು ದಶಕಗಳಿಂದಲೂ ರೋಬೋಸಾಫ್ಟ್‌ ಜಾಗತಿಕ ಮಟ್ಟದಲ್ಲಿ ಬೆಳೆದು ನಿಂತಿದೆ. ಇದೀಗ ಟೆಕ್ನೋಪ್ರೋ ನಂತಹ ಜಾಗತಿಕ ಸಾಫ್ಟ್‌ವೇರ್‌ ದೈತ್ಯ ಕಂಪೆನಿ ರೊಬೋಸಾಫ್ಟ್‌ ಖರೀದಿ ಮಾಡುತ್ತಿರುವುದು ಸಂತಸ ತಂದಿದೆ ಎಂದಿದ್ದಾರೆ.

ರೋಬೋಸಾಫ್ಟ್‌ ಕಂಪೆನಿ ಪ್ರಸ್ತುತ ಹಣಕಾಸಿನ ವರ್ಷದಲ್ಲಿ ಭರ್ಜರಿ 184 ಕೋಟಿ ರೂಪಾಯಿ ಲಾಭವನ್ನು ಗಳಿಸಿದೆ. ಕಳೆದ ಸಾಲಿನಲ್ಲಿ97.4ಕೋಟಿ ಲಾಭ ಗಳಿಸಿತ್ತು. ಆದರೆ ಈ ಬಾರಿ ತನ್ನ ಲಾಭದ ಪ್ರಮಾಣವನ್ನು ಶೇ.೮೯ರಷ್ಟು ಹೆಚ್ಚಳ ಮಾಡಿಕೊಂಡಿತ್ತು. ಇದೀಗ ಉಡುಪಿ ಮೂಲದ ಕಂಪೆನಿಯೊಂದು ಪ್ರಖ್ಯಾತ ಕಂಪೆನಿಯ ಪಾಲಾಗಿದೆ.

Comments are closed.