US Visa in short time: ಭಾರತೀಯರಿಗೆ ಗುಡ್ ನ್ಯೂಸ್ : ಕಡಿಮೆ ಅವಧಿಯಲ್ಲಿ ಸಿಗಲಿದೆ ಯುಎಸ್ ವೀಸಾ

ನವದೆಹಲಿ: (US Visa in short time) ಯುಎಸ್‌ ಗೆ ಹೋಗಲು ವೀಸಾ ಪಡೆಯಲು ಹೆಣಗಾಡುತ್ತಿರುವ ಭಾರತೀಯರಿಗೆ ಬಿಡನ್‌ ಸರಕಾರ ಸಿಹಿ ಸುದ್ದಿ ನೀಡಿದ್ದು, ಭಾರತದಲ್ಲಿ ವೀಸಾಕ್ಕಾಗಿ ಕಾಯುವ ಸಮಯವನ್ನು ಕಡಿಮೆ ಮಾಡಲು ಅಮೇರಿಕಾ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಅಲ್ಲದೇ ಇದೀಗ ಮೊದಲ ಬಾರಿಗೆ ಅರ್ಜಿ ಸಲ್ಲಿಸುವವರಿಗೆ ವಿಶೇಷ ಸಂದರ್ಶನಗಳನ್ನು ನಿಗದಿಪಡಿಸುವುದು ಮತ್ತು ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸುವಂತಹ ಉಪಕ್ರಮಗಳನ್ನು ಜಾರಿಗೊಳಿಸುವುದಾಗಿ ಬಿಡೆನ್‌ ಸರಕಾರ ತಿಳಿಸಿದೆ.

ದೆಹಲಿಯ ಯುಎಸ್‌ ರಾಯಭಾರ ಕಚೇರಿ ಮತ್ತು ಮುಂಬೈ, ಚೆನ್ನೈ, ಕೋಲ್ಕತ್ತಾ ಮತ್ತು ಹೈದರಾಬಾದ್‌ ನಲ್ಲಿರುವ ಕಾನ್ಸುಲೇಟ್‌ ಗಳು ವೀಸಾ ಕಾಯುವ ಸಮಯವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಜ. 21 ರಂದು ವಿಶೇಷ ಶನಿವಾರ ಸಂದರ್ಶನ ದಿನಗಳನ್ನು ಆಯೋಜಿಸಿದೆ.

“ಜ. ೨೧ ರಂದು ಭಾರತದಲ್ಲಿನ ಯುಎಸ್‌ ಮಿಷನ್‌ ಮೊದಲ ಬಾರಿಗೆ ವೀಸಾ ಅರ್ಜಿದಾರರಿಗೆ ಕಾಯುವ ಸಮಯವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ವಿಶೇಷ ಶನಿವಾರ ಸಂದರ್ಶನ ದಿನಗಳು ಸರಣಿಯಲ್ಲಿ ಮೊದಲ ವಿಶೇಷ ಸಂದರ್ಶನವನ್ನು ನಡೆಸಿತು” ಎಂದು ಯುಎಸ್‌ ರಾಐಭಾರ ಕಚೇರಿಯು ಭಾನುವಾರ ಹೇಳಿದೆ.

ಅಲ್ಲದೇ ವಿವಿಧ ಪ್ರದೇಶದಲ್ಲಿರುವ ಕಾನ್ಸುಲೇಟ್‌ ಗಳು ವೀಸಾ ಸಂದರ್ಶನಗಳ ಅಗತ್ಯವಿರುವ ಅರ್ಜಿದಾರರಿಗೆ ಅವಕಾಶ ಕಲ್ಪಿಸಲು ಶನಿವಾರದಂದು ಕಾನ್ಸುಲರ್‌ ಕಾರ್ಯಾಚರಣೆಯನ್ನು ಪುನರಾರಂಭಿಸಿರುವುದಾಗಿ ರಾಯಭಾರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ : Crane collapsed-4 death: ತಮಿಳುನಾಡಿನಲ್ಲಿ ಕ್ರೇನ್‌ ಕುಸಿದು ನಾಲ್ವರು ದುರ್ಮರಣ : 9 ಮಂದಿಗೆ ಗಾಯ

ಇದನ್ನೂ ಓದಿ : ನಕಲಿ ಮದ್ಯ ಸೇವನೆ : 3 ಸಾವು, 6 ಮಂದಿ ಆಸ್ಪತ್ರೆಗೆ ದಾಖಲು

ಇದನ್ನೂ ಓದಿ : Intranasal covid vaccine: ಗಣರಾಜ್ಯೋತ್ಸವದಂದು ವಿಶ್ವದ ಮೊದಲ ಕೋವಿಡ್‌ ಮೂಗಿನ ಲಸಿಕೆ ಪ್ರಾರಂಭ

US Visa in short time: Good news for Indians: US visa will be available in short time

Comments are closed.