ಸೋಮವಾರ, ಏಪ್ರಿಲ್ 28, 2025
HomeNationalUthra Murder Case : ಹಾವಿನಿಂದ ಕಚ್ಚಿಸಿ ಪತ್ನಿಯ ಕೊಲೆ : ಸೂರಜ್‌ಗೆ ಜೀವಾವಧಿ ಶಿಕ್ಷೆ...

Uthra Murder Case : ಹಾವಿನಿಂದ ಕಚ್ಚಿಸಿ ಪತ್ನಿಯ ಕೊಲೆ : ಸೂರಜ್‌ಗೆ ಜೀವಾವಧಿ ಶಿಕ್ಷೆ ನೀಡಿದ ನ್ಯಾಯಾಲಯ

- Advertisement -

ಕೊಲ್ಲಂ : ವಿಷ ಸರ್ಪದಿಂದ ಕಚ್ಚಿಸಿ ಪತ್ನಿಯನ್ನು ಕೊಲೆ ಮಾಡಿದ್ದ ಉತ್ರಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ಹೊರಬಿದ್ದಿದೆ. ಉತ್ರಾಳನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದ ಪತಿ ಸೂರಜ್‌ನನ್ನೇ ಆರೋಪಿ ಎಂದಿರುವ ಕೊಲ್ಲಂನ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ಇದೀಗ ಸೂರಜ್‌ಗೆ ಎರಡು ಜೀವಾವಧಿ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ.

ದೇಶದಾದ್ಯಂತ ಸಂಚಲನ ಮೂಡಿಸಿದ್ದ ವಿಷಪೂರಿತ ಹಾವಿನಿಂದ ಕಚ್ಚಿಸಿ ಪತ್ನಿಯನ್ನು ಕೊಲೆಗೈದ ಕೇರಳದ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಪತಿ ಯನ್ನು ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿತ್ತು. ಅಲ್ಲದೇ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಇದೀಗ ಕೊಲ್ಲಂ ಆರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ. ದೇವರನಾಡಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಕೊಲೆ ಪ್ರಕರಣವನ್ನು ಸಾಂದರ್ಭಿಕ ಸಾಕ್ಷ್ಯದ ಆಧಾರದ ಮೇಲೆ ತನಿಖೆ ನಡೆಸಲಾಗಿದ್ದು, ಇದೊಂದು ಅಪರೂಪದ ಪ್ರಕರಣವಾಗಿದೆ.

ಉತ್ರಾ ಕೊಲೆ ಪ್ರಕರಣದಲ್ಲಿ ನ್ಯಾಯಾಲಯವು ಸೂರಜ್‌ಗೆ ಎರಡು ಜೀವಾವಧಿ ಶಿಕ್ಷೆ ವಿಧಿಸಿದೆ. ಕೊಲ್ಲಂ ಆರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಎಂ. ಮನೋಜ್ ಅವರು ಶಿಕ್ಷೆ ವಿಧಿಸಿದ್ದಾರೆ. ಹಾವು ಕಚ್ಚಿಸಿಕೊಂದ ಆರೋಪದ ಹಿನ್ನೆಲೆಯಲ್ಲಿ ಶಿಕ್ಷೆಗೆ ಒಳಗಾಗಿರುವ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ಪ್ರಥಮ ಪ್ರಕರಣವಾಗಿದೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಜಿ.ಎಸ್. ಮೋಹನರಾಜ್ ಉತ್ರಾ ಪರ ವಾದವನ್ನು ಮಂಡಿಸಿದ್ದಾರೆ.

ಆರೋಪಿ ಸೂರಜ್‌ಗೆ ಮರಣದಂಡನೆ ಶಿಕ್ಷೆ ನೀಡದಿರಲು ಪ್ರಮುಖವಾಗಿ ಎರಡು ಕಾರಣವಿದೆ. ಆರೋಪಿಯ ವಯಸ್ಸು ಇನ್ನೂ ಕಡಿಮೆ, ಜೊತೆಗೆ ಆತನಿಗೆ ಯಾವುದೇ ಕ್ರಿಮಿನಲ್‌ ಹಿನ್ನೆಲೆ ಇರಲಿಲ್ಲ. ಇದೇ ಹಿನ್ನೆಲೆಯಲ್ಲಿ ನ್ಯಾಯಾಲಯವು ಸೂರಜ್ ಗೆ ಮರಣದಂಡನೆ ವಿಧಿಸದಿರಲು ನಿರ್ಧರಿಸಿತ್ತು. ಉತ್ರಾ ಸಾವಿನ ಒಂದು ವರ್ಷದ ನಂತರ ಪ್ರಕರಣದ ತೀರ್ಪು ಪ್ರಕಟವಾಗಿದೆ. ಕೇರಳ ದಲ್ಲಿ ಬಾರಿ ನಿರೀಕ್ಷೆಯನ್ನು ಹುಟ್ಟು ಹಾಕಿಸಿದ್ದ ಉತ್ರಾ ಕೊಲೆ ಪ್ರಕರಣದ ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಆವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು.

uthra Murder case kerala

ಇನ್ನು ನ್ಯಾಯಾಲಯದ ತೀರ್ಪಿನ ಬಗ್ಗೆ ಉತ್ರಾ ಪೋಷಕರು ತಮಗೆ ಸಂತೋಷವಾಗಿಲ್ಲ ಎಂದಿದ್ದಾರೆ. ಇಂತಹ ಅಪರಾಧ ಮಾಡಿದ ತಪ್ಪಿತಸ್ಥನಿಗೆ ಸರಿಯಾಗಿ ಶಿಕ್ಷೆಯಾಗದಿದ್ದರೆ ಅಂತಹ ಅಪರಾಧಗಳು ಸಮಾಜದಲ್ಲಿ ಹೆಚ್ಚು ಅಪರಾಧಿಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ. ಅಲ್ಲದೇ ಮಗಳ ಸಾವಿನಲ್ಲಿ ನಮಗೆ ನ್ಯಾಯ ಸಿಕ್ಕಿಲ್ಲ. ಮರಣದಂಡನೆಯೇ ಗರಿಷ್ಠ ಶಿಕ್ಷೆ ಎಂದು ಉತ್ರಾ ತಾಯಿ ಮಣಿಮೇಖಲಾ ಹೇಳಿದ್ದಾರೆ.

ಏನಿದು ಕೊಲೆ ಪ್ರಕರಣ ?

ಕೇರಳದ ಅಂಚಲ ಮೂಲದ ಉಥ್ರಾ ( 23 ವರ್ಷ) ಎಂಬಾಕೆಯೇ ಹಾವು ಕಡಿತದಿಂದ ಸಾವನ್ನಪ್ಪಿದ್ದ ಮಹಿಳೆ. ಕಳೆದ ಮೇ ತಿಂಗಳಲ್ಲಿ ತನ್ನ ಕೋಣೆಯಲ್ಲಿ ಮಲಗಿದ್ದ ಉಥ್ರಾ ನಿಗೂಢವಾಗಿ ಸಾವನ್ನಪ್ಪಿದ್ದಳು. ಪೋಷಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಆಕೆಯ ಪತಿ ಸೂರಜ್‌ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆಯಲ್ಲಿ ಆತ ತಾನೇ ವಿಷ ಪೂರಿತ ಹಾವಿನಿಂದ ಕಚ್ಚಿಸಿ ಪತ್ನಿಯನ್ನು ಕೊಲೆಗೈದಿರುವುದಾಗಿ ತಪ್ಪೊಪ್ಪಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಪ್ರಕರಣ ಕೊಲ್ಲಂ ಆರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ಕಳೆದೊಂದು ವರ್ಷದಿಂದಲೂ ವಿಚಾರಣೆ ನಡೆಯುತ್ತಲೇ ಇತ್ತು. ಇದೀಗ ನ್ಯಾಯಾಲಯದ ನ್ಯಾಯಾಧೀಶರಾದ ಎಂ. ಮನೋಜ್ ಅವರು ಆರೋಪಿಗೆ ದೋಷಿ ಎಂದು ತೀರ್ಪು ನೀಡಿದ್ದಾರೆ. ಅಲ್ಲದೇ ಉಥ್ರಾ ಸಾವಿನಪ್ಪಿದ ಒಂದು ವರ್ಷ, 5 ತಿಂಗಳು ಮತ್ತು 4 ದಿನಗಳ ನಂತರ ಪ್ರಕರಣದ ತೀರ್ಪನ್ನು ಪ್ರಕಟಿಸಲಾಗುತ್ತದೆ.

ವರದಕ್ಷಿಣೆ, ಆಭರಣ, ಕಾರು, ಹಣ ಮತ್ತು ಆಸ್ತಿಯನ್ನು ಕಳೆದುಕೊಳ್ಳುವ ಭಯದಿಂದ ಸೂರಜ್ ಪತ್ನಿ ಉಥ್ರಾಳನ್ನು ಹಾವು ಇರಿದು ಕೊಂದಿದೆ. ದೋಷಾರೋಪ ಪಟ್ಟಿ ಸಲ್ಲಿಸಲಾ ಗಿದ್ದು, ಪ್ರಕರಣದ ದಾಖಲೆಯ ಸಮಯದಲ್ಲಿ ವಿಚಾರಣೆ ಪೂರ್ಣಗೊಂಡಿದೆ. ಉತ್ರಾ ಕಚ್ಚಿದ ಹಾವಿನ ಮರಣೋತ್ತರ ಪರೀಕ್ಷೆ ಮತ್ತು ನಾಗರ ಹಾವು ಬಳಸಿ ಡಮ್ಮಿ ಪರೀಕ್ಷೆ ನಡೆಸಲಾಯಿತು. ಏತನ್ಮಧ್ಯೆ, ಉತ್ರಾ ಅವರ ಪೋಷಕರು, ಆರೋಪಿಗಳು ಗರಿಷ್ಠ ಶಿಕ್ಷೆಯನ್ನು ಪಡೆಯುವ ನಿರೀಕ್ಷೆಯಿದೆ ಎಂದು ಹೇಳಿದರು.

ಇದನ್ನೂ ಓದಿ : ಅಪ್ರಾಪ್ತ ಶಾಲಾ ಬಾಲಕಿಯ ಕಿಡ್ನಾಪ್‌ : ಅತ್ಯಾಚಾರವೆಸಗಿದ ಕ್ಯಾಬ್‌ ಚಾಲಕ

ಇದನ್ನೂ ಓದಿ : ಹಾವಿನಿಂದ ಕಚ್ಚಿಸಿ ಪತ್ನಿಯ ಕೊಲೆ : ಆರೋಪಿ ದೋಷಿ ಎಂದ ಕೋರ್ಟ್‌

( Uthra Murder Case Kerala Court Announced Punishment Sooraj In Snake Bite Murder Case)

Arun Gundmi | ಅರುಣ್ ಗುಂಡ್ಮಿ
Arun Gundmi Editor In Chief News Next Kannada. Working in more than 20 Years in Kannada Media (Print, Digital and News Channels. Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular