Children- Covaxin : 2 -18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ : ಕೊವಾಕ್ಸಿನ್‌ ತುರ್ತು ಬಳಕೆಗೆ ಗ್ರೀನ್‌ ಸಿಗ್ನಲ್‌

ನವದೆಹಲಿ : ಇನ್ಮುಂದೆ ಮಕ್ಕಳಿಗೂ ದೇಶದಲ್ಲಿ ಕೊರೊನಾ ಲಸಿಕೆ ಲಭ್ಯವಾಗಲಿದೆ. ಕೇಂದ್ರ ಸರಕಾರ ಈ ಕುರಿತು ಸಿಹಿಸುದ್ದಿಯೊಂದನ್ನು ನೀಡಿದೆ. ಕೇಂದ್ರ ಔಷಧ ಪ್ರಾಧಿಕಾರದ ತಜ್ಞರ ಸಮಿತಿಯು ಕೆಲವು ಷರತ್ತುಗಳೊಂದಿಗೆ 2 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಭಾರತ್ ಬಯೋಟೆಕ್‌ನ ಕೊವಾಕ್ಸಿನ್‌ಗೆ ತುರ್ತು ಬಳಕೆಯ ಅಧಿಕಾರವನ್ನು ನೀಡುವಂತೆ ಶಿಫಾರಸು ಮಾಡಿದೆ.

ಕೋವಾಕ್ಸಿನ್ ಭಾರತದಲ್ಲಿ ಮಕ್ಕಳಿಗೆ ನೀಡಬಹುದಾದ ಮೊದಲ COVID-19 ಲಸಿಕೆಯಾಗಿದೆ. ಹೈದರಾಬಾದ್ ಮೂಲದ ಭಾರತ್ ಬಯೋಟೆಕ್, ಕೋವಿಡ್ ಲಸಿಕೆ ಕೋವಾಕ್ಸಿನ್‌ನ 2/3 ಹಂತದ ಪ್ರಯೋಗಗಳನ್ನು 2 ರಿಂದ 18 ವರ್ಷದೊಳಗಿನ ಮಕ್ಕಳಲ್ಲಿ ಬಳಕೆಗಾಗಿ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ. ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಗೆ ಲಸಿಕೆಯ ಪರಿಶೀಲನೆ ಹಾಗೂ ತುರ್ತು ಬಳಕೆಗೆ ಅನುಮೋದನೆ ನೀಡುವಂತೆ ಡೇಟಾ ಸಲ್ಲಿಕೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ತುರ್ತು ಬಳಕೆಯ ದೃಢೀಕರಣಕ್ಕೆ (EUA) ಅನುಮೋದನೆಗಾಗಿ ಡೇಟಾವನ್ನು ಸಲ್ಲಿಸಿದೆ. ಕೋವಿಡ್ -19 ಕುರಿತು ವಿಷಯ ತಜ್ಞರ ಸಮಿತಿ (ಎಸ್‌ಇಸಿ) ಡೇಟಾವನ್ನು ಪರಿಶೀಲಿಸಿದೆ ಮತ್ತು ಇಯುಎ ಅರ್ಜಿಯ ಕುರಿತು ಚರ್ಚೆಯನ್ನು ನಡೆಸಿದೆ.

ಸಮಿತಿಯು ಹಲವು ಷರತ್ತುಗಳಿಗೆ ಒಳಪಟ್ಟು ತುರ್ತು ಸಂದರ್ಭಗಳಲ್ಲಿ ನಿರ್ಬಂಧಿತ ಬಳಕೆಗಾಗಿ 2 ರಿಂದ 18 ವರ್ಷ ವಯಸ್ಸಿನವರಿಗೆ ಲಸಿಕೆಯ ಮಾರುಕಟ್ಟೆ ಅನುಮೋದನೆಯನ್ನು ನೀಡಲು ಶಿಫಾರಸು ಮಾಡಿದೆ. ಆದರೆ ಅಂತಿಮ ಅನುಮೋದನೆಗಾಗಿ ಶಿಫಾರಸುಗಳನ್ನು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಗೆ ರವಾನಿಸಲಾಗಿದೆ.

ಭಾರತ್ ಬಯೋಟೆಕ್‌ನ ಕಂಪನಿಯು ತನ್ನ ಕರೋನವೈರಸ್ ಲಸಿಕೆ (BBV152) ಯನ್ನು 2 ರಿಂದ 18 ವರ್ಷ ವಯಸ್ಸಿನವರಲ್ಲಿ ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಗಾಗಿ 2/3 ಹಂತದ ಮಧ್ಯಂತರ ಸುರಕ್ಷತೆ ಮತ್ತು ಇಮ್ಯುನೊಜೆನಿಸಿಟಿ ಡೇಟಾದೊಂದಿಗೆ ಮಾರುಕಟ್ಟೆ ಅನುಮೋದನೆಗಾಗಿ ತನ್ನ ಪ್ರಸ್ತಾವನೆಯನ್ನು ಮಂಡಿಸಿತ್ತು. ಈಗಾಗಲೇ ಕ್ಲಿನಿಕಲ್ ಪ್ರಯೋಗವನ್ನು ನಡೆಸಲಾಯಿತು. ಹಂತ 2/3 ಕ್ಲಿನಿಕಲ್ ಪ್ರಯೋಗದ ಮಧ್ಯಂತರ ಸುರಕ್ಷತಾ ಡೇಟಾವನ್ನು ಆಗಸ್ಟ್ 26 ರಂದು ನಡೆದ ಸಭೆಯಲ್ಲಿ ಪರಿಶೀಲಿಸಲಾಗಿದೆ ಎಂದು ಸಮಿತಿ ಹೇಳಿದೆ. ಇನ್ನು ತುರ್ತು ಸಂದರ್ಭಗಳಲ್ಲಿ ನಿರ್ಬಂಧಿತ ಬಳಕೆಗಾಗಿ 2 ರಿಂದ 18 ವರ್ಷ ವಯಸ್ಸಿನವರಿಗೆ ಲಸಿಕೆಯ ಮಾರುಕಟ್ಟೆ ಅನುಮೋದನೆಯನ್ನು ನೀಡಲು ಸಮಿತಿಯು ಶಿಫಾರಸು ಮಾಡಿದೆ ಎಂದು ಅವರು ಹೇಳಿದ್ದಾರೆ.

(Covaxin gets emergency use nod for children aged 2-18 years in India )

Comments are closed.