ಭಾನುವಾರ, ಏಪ್ರಿಲ್ 27, 2025
HomeCrimeUnnao : ಬರ್ತಡೇ ಪಾರ್ಟಿಗೆ ಬಂದ ಡ್ಯಾನ್ಸರ್‌ ಮೇಲೆ 6 ಮಂದಿಯಿಂದ ಸಾಮೂಹಿಕ ಅತ್ಯಾಚಾರ

Unnao : ಬರ್ತಡೇ ಪಾರ್ಟಿಗೆ ಬಂದ ಡ್ಯಾನ್ಸರ್‌ ಮೇಲೆ 6 ಮಂದಿಯಿಂದ ಸಾಮೂಹಿಕ ಅತ್ಯಾಚಾರ

- Advertisement -

ಉತ್ತರಪ್ರದೇಶ (Unnao) : ಸ್ನೇಹಿತರೆಲ್ಲರೂ ಸೇರಿಕೊಂಡು ಹುಟ್ಟುಹಬ್ಬದ ಆಚರಣೆ ಮಾಡಿದ್ದಾರೆ. ಬರ್ತಡೇ ಪಾರ್ಟಿಗೆ ಡ್ಯಾನ್ಸರ್ ಒಬ್ಬಳನ್ನು ಆಹ್ವಾನಿಸಿದ್ದರು. ಪಾರ್ಟಿ ಮುಗಿಸಿ ಆಕೆ ಮನೆಗೆ ಹೊರಡುವ ವೇಳೆಯಲ್ಲಿ ಆರು ಮಂದಿ ಕಾಮುಕರನ್ನು ಆಕೆಯನ್ನು ಅಪಹರಿಸಿದ್ದಾರೆ. ನಂತರ ಸಮೀಪದ ಕಾಡಿನಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಪರಾರಿಯಾಗಿದ್ದಾರೆ.

ಉತ್ತರಪ್ರದೇಶದ ಉನ್ನಾವೋದ ದೀಪಕ್ ನಗರದಲ್ಲಿ ಈ ಘಟನೆ ನಡೆದಿದೆ. ಬರ್ತಡೇ ಪಾರ್ಟಿಗಾಗಿ ಒಟ್ಟು ಮೂವರು ನರ್ತಕಿಯರನ್ನು ಆಹ್ವಾನಿಸಲಾಗಿತ್ತು. ಮೂವರಿಗೆ ಒಟ್ಟು 6,000 ರೂಪಾಯಿ ನೀಡಲಾಗಿತ್ತು. ನರ್ತಕಿಯರು ಪಾರ್ಟಿಯಲ್ಲಿ ಡ್ಯಾನ್ಸ್ ಮಾಡಿ ತೆರಳಲು ಸಜ್ಜಾಗಿದ್ದಾರೆ. ಈ ವೇಳೆಯಲ್ಲಿ ಒಬ್ಬಾಕೆಯನ್ನು ಆರು ಮಂದಿ ಕಾರಿನಲ್ಲಿ ಅಪಹರಿಸಿದ್ದಾರೆ. ನಂತರ ಕಾಡಿಗೆ ಕರೆದೊಯ್ದು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಬದುಕುಳಿದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಅತ್ಯಾಚಾರವೆಸಗುವ ವೇಳೆಯಲ್ಲಿ ಅವರೆಲ್ಲರೂ ಕುಡಿದಿದ್ದರು ಎಂದು ಆರೋಪಿಸಿದ್ದಾಳೆ.

ಕಾಮುಕರಿಂದ ತಪ್ಪಿಸಿಕೊಂಡಿದ್ದ ಮಹಿಳೆ ಜಜ್ಮೌ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾಳೆ. ಆದರೆ ಪೊಲೀಸರು ಆರೋಪಿಗಳ ವಿರುದ್ದ ಯಾವುದೇ ಕ್ರಮವನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ಸಂತ್ರಸ್ತೆ ನಂತರ ಉನ್ನಾವೋ ಸದರ್‌ನಲ್ಲಿರುವ ಕೊತ್ವಾಲಿ ಪೊಲೀಸರನ್ನು ಸಂಪರ್ಕಿಸಿದ್ದರು. ಇದೀಗ ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ : Child fell into washing machine: ನೀರು ತುಂಬಿದ ವಾಷಿಂಗ್‌ ಮೆಷಿನ್‌ ಗೆ ಬಿದ್ದ ಒಂದೂವರೆ ವರ್ಷದ ಮಗು

ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ: 4 ಮಂದಿ ವಿರುದ್ಧ ಪ್ರಕರಣ

ಹೈದರಾಬಾದ್: ಒಡಿಶಾದ ಏಳು ಅಪ್ರಾಪ್ತ ಬಾಲಕಿಯರನ್ನು ಸಂಗಾರೆಡ್ಡಿ ಜಿಲ್ಲೆಯ ಇಟ್ಟಿಗೆ ಭಟ್ಟಿಯಲ್ಲಿ “ಕಾನೂನುಬಾಹಿರವಾಗಿ” ನೇಮಿಸಿಕೊಂಡು ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಐದು ತಿಂಗಳ ಹಿಂದೆ ಜಿಲ್ಲೆಯ ನಾರಾಯಣಖೇಡ್ ಮಂಡಲದ ಇಟ್ಟಿಗೆ ಭಟ್ಟಿಯಲ್ಲಿ ಅಪ್ರಾಪ್ತ ಬಾಲಕಿಯರು ಸೇರಿದಂತೆ 72 ಜನರ ಗುಂಪು ಕೆಲಸ ಮಾಡುತ್ತಿತ್ತು. ಕಾರ್ಮಿಕರು ಇತ್ತೀಚೆಗೆ ಒಡಿಶಾ ಮುಖ್ಯ ಕಾರ್ಯದರ್ಶಿಯನ್ನು ಸಂಪರ್ಕಿಸಿ ತಮ್ಮ ಮಾಲೀಕರಿಂದ ಶೋಷಣೆ ಒಳಗಾಗಿದ್ದಾರೆ ಎಂದು ಆರೋಪಿಸಿದ್ದರು. ಕಾರ್ಮಿಕರ ಆರೋಪದ ಮೇಲೆ ತೆಲಂಗಾಣ ಸರ್ಕಾರದ ಅಧಿಕಾರಿಗಳು ಈ ಬಗ್ಗೆ ಒಡಿಶಾ ಮುಖ್ಯ ಕಾರ್ಯದರ್ಶಿಯಿಂದ ಮಾಹಿತಿ ಪಡೆದು, ನಂತರ ರಾಜ್ಯ ಕಾರ್ಮಿಕ ಇಲಾಖೆ, ಮಹಿಳಾ ಅಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಒಟ್ಟಿಗೆ ಸೇರಿ ಇಟ್ಟಿಗೆ ಭಟ್ಟಿ ಮೇಲೆ ದಾಳಿ ನಡೆಸಿದರು.

ಅಪ್ರಾಪ್ತ ಬಾಲಕಿಯರ ಬಳಿ ಮಾಲೀಕರಿಂದ ಲೈಂಗಿಕ ಕಿರುಕುಳದ ಬಗ್ಗೆ ಮಾಹಿತಿ ಪಡೆಯಲಾಯಿತು. ರಾಜ್ಯ ಕಾರ್ಮಿಕ ಇಲಾಖೆ, ಮಹಿಳಾ ಅಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದು, ಅದರ ಆಧಾರದ ಮೇಲೆ ಬುಧವಾರ ಇಟ್ಟಿಗೆ ಭಟ್ಟಿಯ ನಾಲ್ವರು ಮಾಲೀಕರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದರು.

ಇದನ್ನೂ ಓದಿ : Mumbai crime news: ಪ್ರೇಯಸಿಯನ್ನು ಕೊಂದು ಹಾಸಿಗೆಯ ಪೆಟ್ಟಿಗೆಯಲ್ಲಿ ಶವವನ್ನು ಬಚ್ಚಿಟ್ಟು ಪರಾರಿ

Uttar Pradesh Call to Birthday Party dancer Abducted Gang Raped by 6 man in Unnao

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular