ವಿದೇಶಿ ಪ್ರಯಾಣ ಮಾಡಲು ಬಯಸುತ್ತಿದ್ದೀರಾ ? ಈಗ ಕೇವಲ 5 ದಿನಗಳಲ್ಲಿ ನಿಮ್ಮ ಪಾಸ್‌ಪೋರ್ಟ್‌ ಲಭ್ಯ

ನವದೆಹಲಿ : ದೇಶದಲ್ಲಿ ಹೆಚ್ಚಿನ ಜನರು ವಿದೇಶಗಳಲ್ಲಿ ಉದ್ಯೋಗ, ಟ್ರಿಪ್‌ಗಾಗಿ ಪಯಣ ಬೆಳೆಸುವುದು ಸಾಮಾನ್ಯವಾಗಿದೆ. ಆದರೆ ವಿದೇಶಗಳಿಗೆ ಪ್ರಯಾಣ ಬೆಳೆಸಬೇಕಾದರೆ ಪ್ರಯಾಣ ಬೆಳೆಸುವವರು ಪಾಸ್‌ಪೋರ್ಟ್ (Passport facility) ಹೊಂದಿರಲೇಬೇಕು. ಯಾವುದೇ ಸಂದರ್ಭದಲ್ಲೂ ಪಾಸ್ ಪೋರ್ಟ್ ಇಲ್ಲದೆ ವಿದೇಶಗಳಿಗೆ ತೆರಳುವುದು ಸಾಧ್ಯವಿಲ್ಲ. ಪಾಸ್ ಪೋರ್ಟ್ ಇಲ್ಲ ಎನ್ನುವುದೇ ವಿದೇಶ ಯಾನಕ್ಕೆ ಅಡ್ಡಿಯಾಗುತ್ತಿದ್ದರೆ ನಿರಾಸೆಯಾಗಬೇಕೆಂದಿಲ್ಲ ಪಾಸ್‌ಪೋರ್ಟ್‌ ಪಡೆಯಲು ಇಚ್ಛಿಸುವವರಿಗೆ ಗುಡ್‌ ನ್ಯೂಸ್‌ ಇದ್ದಾಗಿದೆ. ಇದೀಗ ವಿದೇಶಿ ಪ್ರಯಾಣ ಬೆಳೆಸುವವರಿಗೆ ಪಾಸ್‌ಪೋರ್ಟ್ ಪರಿಶೀಲನೆ ಸೌಲಭ್ಯ ಸಂಪೂರ್ಣ ಆಟೋಮ್ಯಾಟಿಕ್ ಆಗಿದೆ. ಹೀಗಾಗಿ ಇನ್ನು ಪಾಸ್ ಪೋರ್ಟ್ ಗಾಗಿ 15 ದಿನಗಳವರೆಗೆ ಕಾಯುವ ಅಗತ್ಯವಿಲ್ಲ. ಕೇವಲ 5 ದಿನಗಳಲ್ಲಿ ಪಾಸ್‌ಪೋರ್ಟ್ ನಿಮ್ಮ ಕೈ ಸೇರಲಿದೆ.

ಪಾಸ್‌ಪೋರ್ಟ್ ಮಾಡಿಸುವುದು‌ ವಿಧಾನ ಹೇಗೆ? :
ಪಾಸ್‌ಪೋರ್ಟ್‌ ಮಾಡಲು ಇಚ್ಛಿಸುವವರು ಭಾರತೀಯ ಪ್ರಜೆಯಾಗಿರಬೇಕು. ಪಾಸ್‌ಪೋರ್ಟ್‌ ಮಾಡುವವರು ಭಾರತದ ಪೌರತ್ವವನ್ನು ಪಡೆದಿರಬೇಕು. ಇದೀಗ ವ್ಯಕ್ತಿಯು ಪಾಸ್‌ಪೋರ್ಟ್ ಮಾಡಿಸಬೇಕಾದರೆ ಆನ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದು. ಪಾಸ್‌ಪೋರ್ಟ್ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಹೇಗೆ ಎನ್ನುವುದನ್ನು ಈ ಕೆಳಗೆ ತಿಳಿಸಲಾಗಿದೆ.

ಪಾಸ್‌ಪೋರ್ಟ್‌ ಮಾಡುವವರು ಈ ಕೆಳಗಿನ ಹಂತಗಳನ್ನು ಅನುಸರಿಸಿ :

  • ಮೊದಲು ಪಾಸ್‌ಪೋರ್ಟ್ ಸೇವಾ ಆನ್‌ಲೈನ್ ಪೋರ್ಟಲ್‌ನಲ್ಲಿ ನೋಂದಾಯಿಸಬೇಕು.
  • ನಂತರ Passport Seva Online Portalನಲ್ಲಿ ಲಾಗಿನ್ ಆಗಬೇಕು.
  • Apply for Background varification for GEP ಲಿಂಕ್‌ ಮೇಲೆ ಕ್ಲಿಕ್ ಮಾಡಬೇಕು.
  • ಇದರ ನಂತರ ಫಾರ್ಮ್‌ನಲ್ಲಿ ಕೇಳುವ ಮಾಹಿತಿಯನ್ನು ಭರ್ತಿ ಮಾಡಿ, ಸಬ್ಮಿಟ್ ಮಾಡಬೇಕು.
  • ಈಗ Pay And Schedule Appointment ಲಿಂಕ್ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು.
  • ಇಲ್ಲಿ ಯಾವ ಸ್ಥಳದ Appointment ಬೇಕೋ ಆ ಸ್ಥಳವನ್ನು ಆರಿಸಿಕೊಳ್ಳಬೇಕು.
  • ಅಪಾಯಿಂಟ್‌ಮೆಂಟ್ ಬುಕ್ ಮಾಡಲು ಆನ್‌ಲೈನ್ ಪೇಮೆಂಟ್ ಮಾಡಬೇಕು.
  • ಇದರ ನಂತರ, Print Application Receipt ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಈಗ ಪ್ರಿಂಟರ್‌ನಿಂದ ಅಪ್ಲಿಕೇಶನ್‌ನ ಪ್ರಿಂಟ್ ಹೊರಬರುತ್ತದೆ. ನಿಮ್ಮ ಮೊಬೈಲ್‌ನಲ್ಲಿ ಅಪಾಯಿಂಟ್‌ಮೆಂಟ್ ಸಂದೇಶವೂ ಬರುತ್ತದೆ. ಅದನ್ನು ಸೇವ್ ಮಾಡಿಕೊಳ್ಳಬೇಕು.
  • ಪಾಸ್‌ಪೋರ್ಟ್ ಪರಿಶೀಲನೆಯ ಸೌಲಭ್ಯವು ಸಂಪೂರ್ಣವಾಗಿ ಆನ್‌ಲೈನ್ ಆಗಿದ್ದರೆ, ನಂತರ ದೈಹಿಕವಾಗಿ ಪೊಲೀಸ್ ಪರಿಶೀಲನೆ ಮಾಡಿಸಿಕೊಳ್ಳುವ ಅಗತ್ಯವಿರುವುದಿಲ್ಲ.

ಇದನ್ನೂ ಓದಿ : LPG Cylinder Price : ಎಲ್‌ಪಿಜಿ ಗ್ರಾಹಕರಿಗೆ ಗುಡ್‌ನ್ಯೂಸ್‌ : ಸರಕಾರದ ಈ ಯೋಜನೆಯಡಿ ಅರ್ಧ ದರದಲ್ಲಿ 14.2 ಕೆಜಿ ಸಿಲಿಂಡರ್ ಲಭ್ಯ

ಇದನ್ನೂ ಓದಿ : Aadhaar Mitra : ಯುಐಡಿಎಐನಿಂದ ಆಧಾರ್ ಮಿತ್ರ ಪ್ರಾರಂಭ : ಆಧಾರ್ ಕಾರ್ಡ್ ಸ್ಥಿತಿ, ದೂರುಗಳನ್ನು ನೋಂದಾಯಿಸುವುದು ಹೇಗೆ ಗೊತ್ತಾ ?

ಇದನ್ನೂ ಓದಿ : Payrm LIC Premium : ಎಲ್‌ಐಸಿ ವಿಮಾ ಪ್ರೀಮಿಯಂನ್ನು ಪೇಟಿಎಂ ಮೂಲಕ ಪಾವತಿಸಲು ಬಯಸುವಿರಾ? ಇಲ್ಲಿದೆ ಹಂತ ಹಂತದ ಮಾರ್ಗದರ್ಶಿ

Passport facility: Want to travel abroad? Now your passport is available in just 5 days

Comments are closed.