ಡೆಹರಾಡೂನ್ : ದೇವ ಭೂಮಿ ಉತ್ತರಾಖಂಡ್ ನಲ್ಲಿ 2013ರನ್ನ ನೆನಪಿಸುವಂಥ ಜಲಪ್ರಳಯ ಸೃಷ್ಟಿಯಾಗಿದೆ.( Uttarakhand Flood). ಪ್ರವಾಹದಿಂದಾಗಿ ಜನ ಜೀವನ ಅಯೋಮಯವಾಗಿದೆ.
ಉತ್ತರಾಖಂಡ್ ರಾಜಧಾನಿ ಡೆಹರಾಡೂನ್ ಸೇರಿದಂತೆ ಹಲವೆಡೆ ಮೇಘಸ್ಫೋಟದಂತೆ ಮಳೆ ಸುರಿದಿದೆ. ಇದ್ರಿಂದ ಪವರ್ತಗಳ ತಪ್ಪಲಿನ ಸಣ್ಣ ಸಣ್ಣ ನದಿಗಳು ಸಹ ಉಕ್ಕಿ ಹರಿಯುತ್ತಿವೆ. ಮಳೆ ನೀರಿನ ಜೊತೆಗೆ ಕೆಸರು ಮತ್ತು ಕಲ್ಲುಗಳನ್ನ ಹೊತ್ತು ತರುತ್ತಿರುವ ನದಿಗಳು, ನೆರೆ ನರಕವನ್ನೇ ಸೃಷ್ಟಿಸಿದೆ. ಪ್ರವಾಹದ ಭೀಕರತೆ ಯಾವ ರೀತಿ ಇದೆ ಅನ್ನೋದಕ್ಕೆ ಈ ದೃಶ್ಯವೇ ಸಾಕ್ಷಿಯಾಗಿದೆ.
ಡೆಹರಾಡೂನ್ ನಲ್ಲಿ ನಿನ್ನೆಯಿಂದ ಎಡೆಬಿಡದೇ ಧಾರಾಕಾರ ಮಳೆಆಗುತ್ತಿದೆ. ನಿರಂತರ ಮಳೆಯಿಂದಾಗಿ ಇಲ್ಲಿನ ತಾಮಸಾ ನದಿ ರಕ್ತನದಿಯಾಗಿ ಕೆಸರನ್ನೇ ಹೊತ್ತು ತಂದು ಪ್ರವಾಹ ಸೃಷ್ಟಿಸಿದೆ. ನದಿ ತೀರದ ತಾಪಕೇಶ್ವರ ಮಹದೇವ ದೇವಾಲಯದ ಬಳಿ ರೌದ್ರವಾಗಿ ಹರಿಯುತ್ತಿರೋ ದೃಶ್ಯ ಪ್ರವಾಹದ ಭೀಕರತೆಯನ್ನಹೇಳ್ತಿದೆ. ಸದ್ಯ ದೇವಸ್ಥಾನದಲ್ಲಿ ದರ್ಶನ ವನ್ನಸ್ಥಗಿತಗೊಳಿಸಲಾಗಿದ್ದು, ದೇವಸ್ಥಾನದ ಸುತ್ತಲಿನ ಅಂಗಡಿ ಮುಂಗಟ್ಟು ವ್ಯಾಪಾರಿಗಳನ್ನ ಬೇರೆಡೆ ಸ್ಥಳಾಂತರಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಆದ್ರೆ ಮಳೆ ಇದೇ ರೀತಿ ಮುಂದುವರಿದ್ರೆ ದೇವಸ್ಥಾನ ಸಂಪೂರ್ಣವಾಗಿ ಮುಳುಗಿಹೋಗುವ ಆತಂಕವಿದೆ.
2013ರಲ್ಲೂ ಉತ್ತರಾಖಂಡ್ ನಲ್ಲಿ ಮೇಘಸ್ಫೋಟದಿಂದ ಜಲಪ್ರಳಯವೇ ಆಗಿತ್ತು. ಈ ಜಲಪ್ರಳಯದಲ್ಲಿ ಆರು ಸಾವಿರಕ್ಕೂ ಹೆಚ್ಚು ಜನ ಪ್ರಾಣ ಬಿಟ್ಟಿದ್ರು.2004ರಲ್ಲಿ ಸಂಭವಿಸಿದ ಸುನಾಮಿ ದುರಂತದ ಬಳಿಕ ನಡೆದ ಅತಿದೊಡ್ಡ ಪಾಕೃತಿಕ ವಿಕೋಪ 2013ರಲ್ಲಿನಡೆದಿತ್ತು. ಈಗ ಡೆಹರಾಡೂನ್ ನಲ್ಲಿ ಸುರೀತಿರೋ ಮಳೆ ಮತ್ತೆ ಅಂತಹುದ್ದೇ ಅನಾಹುತ ಸೃಷ್ಟಿಸುತ್ತಾ ಅನ್ನೋ ಭೀತಿ ಅಲ್ಲಿನ ಜನರನ್ನ ಕಾಡ್ತಿದೆ.
ಇದನ್ನೂ ಓದಿ : Rajasthan : ಟ್ರ್ಯಾಕ್ಟರ್ – ಟ್ರಕ್ ಭೀಕರ ಅಪಘಾತ : 5 ಸಾವು, 25 ಮಂದಿ ಗಂಭೀರ
ಇದನ್ನೂ ಓದಿ : Gautam Gambhir : ಭಾರತ ಪರ ಮತ್ತೆ ಬ್ಯಾಟ್ ಹಿಡಿದು ಅಬ್ಬರಿಸಲಿದ್ದಾರೆ ವಿಶ್ವಕಪ್ ಹೀರೋ, ಸಂಸದ ಗೌತಮ್ ಗಂಭೀರ್
ಇದನ್ನೂ ಓದಿ : Shettar expressed anger : ಅಲ್ಪಸಂಖ್ಯಾತರ ಓಲೈಕೆಗಾಗಿ ಸಿದ್ದರಾಮಯ್ಯರಿಂದ ಸಾವರ್ಕರ್ ವಿರೋಧ : ಶೆಟ್ಟರ್ ಪ್ರತಿಕ್ರಿಯೆ
Uttarakhand flood-incessant torrential rainfall-Dehradun Tapkeshwar Mahadev temple