ಉತ್ತರಾಖಂಡ : corbett tiger reserve : ವಿರೋಧಿಗಳು ಎಷ್ಟೇ ಇದ್ದರೂ ಸಹ ನರೇಂದ್ರ ಮೋದಿ ಓರ್ವ ಪ್ರಭಾವಿ ಪ್ರಧಾನಿ ಎಂಬ ಮಾತನ್ನು ತಳ್ಳಿ ಹಾಕುವಂತಿಲ್ಲ. ಈ ಹಿಂದೆ ಎಲ್ಲಾ ಪ್ರಧಾನಿಗಳಿಗಿಂತ ನರೇಂದ್ರ ಮೋದಿ ಭಿನ್ನ ಎಂಬ ಮಾತು ಅನೇಕ ರಾಜಕೀಯ ಪಂಡಿತರ ಬಾಯಿಯಲ್ಲಿಯೇ ಕೇಳಿದ್ದೇವೆ. 2019ರಲ್ಲಿ ಡಿಸ್ಕವರಿ ಚಾನೆಲ್ನಲ್ಲಿ ಪ್ರಸಾರವಾಗಿದ್ದ ಹೆಸರಾಂತ ಕಾರ್ಯಕ್ರಮ ಮ್ಯಾನ್ ವರ್ಸಸ್ ವೈಲ್ಡ್ನಲ್ಲಿ ಪ್ರಧಾನಿ ಮೋದಿ ಬೇರ್ ಗ್ರಿಲ್ಸ್ ಜೊತೆಯಲ್ಲಿ ಉತ್ತರಾಖಂಡ್ನ ಕಾರ್ಬೆಟ್ ಹುಲಿ ಸಂರಕ್ಷಣಾ ಪ್ರದೇಶಗಳಲ್ಲಿ ಶೂಟಿಂಗ್ ಮಾಡಿದ್ದರು. ಇದೀಗ ಈ ಸ್ಥಳವನ್ನು ಒಂದು ಪ್ರವಾಸಿ ಸ್ಥಳವನ್ನಾಗಿ ಮಾಡಲು ಉತ್ತರಾಖಂಡ್ ಸರ್ಕಾರ ಮುಂದಾಗಿದೆ. ಶೂಟಿಂಗ್ನ ಭಾಗವಾಗಿ ಪ್ರಧಾನಿ ಮೋದಿ ಓಡಾಡಿದ ಸ್ಥಳವನ್ನು ಮೋದಿ ಸರ್ಕ್ಯೂಟ್ನನ್ನಾಗಿ ಅಭಿವೃದ್ಧಿಪಡಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಮ್ಯಾನ್ ವರ್ಸಸ್ ವೈಲ್ಡ್ನಲ್ಲಿ ಅಕ್ಷಯ್ ಕುಮಾರ್, ರಣವೀರ್ ಸಿಂಗ್ ಸೇರಿದಂತೆ ಭಾರತದ ಅನೇಕ ಗಣ್ಯರು ಭಾಗಿಯಾಗಿದ್ದಾರೆ. ಇದೇ ಕಾರ್ಯಕ್ರಮದ ಎಪಿಸೋಡ್ ಒಂದರಲ್ಲಿ ಪ್ರಧಾನಿ ಮೋದಿ ಕೂಡ ಭಾಗವಹಿಸಿದ್ದರು. ಉತ್ತರಕಾಂಡ್ನ ಕಾರ್ಬೆಟ್ ಹುಲಿ ಸಂರಕ್ಷಣಾ ಪ್ರದೇಶದಲ್ಲಿ ಪ್ರಧಾನಿ ಮೋದಿ ಸಂಚರಿಸಿದ್ದರು ಮಾತ್ರವಲ್ಲದೇ ಕೋಸಿ ನದಿಯನ್ನು ತಾತ್ಕಾಲಿಕ ತೆಪ್ಪದಲ್ಲಿ ದಾಟುವ ಮೂಲಕ ಸಾಹಸ ಪ್ರದರ್ಶಿಸಿದ್ದರು. ಬೇರ್ ಗ್ರಿಲ್ಸ್ ಜೊತೆಯಲ್ಲಿ ಬೇವಿನ ಎಲೆಯ ಜ್ಯೂಸ್ ಕೂಡ ಕುಡಿದಿದ್ದರು.
ಪ್ರಧಾನಿ ಮೋದಿ ಓರ್ವ ಪ್ರಭಾವಿ ನಾಯಕ ಎಂಬ ವಿಚಾರವನ್ನು ಗಮನದಲ್ಲಿಟ್ಟುಕೊಂಡಿರುವ ಉತ್ತರಾಖಂಡ್ನ ಪ್ರವಾಸಿ ಅಭಿವೃದ್ಧಿ ಮಂಡಳಿಯು ಈ ಸ್ಥಳವನ್ನು ಒಂದು ಪ್ರವಾಸಿ ಸ್ಥಳವನ್ನಾಗಿ ಬದಲಾಯಿಸಲು ಮುಂದಾಗಿದೆ. ಕಾರ್ಬೆಟ್ ಹುಲಿ ಸಂರಕ್ಷಣಾ ಪ್ರದೇಶವು ಈಗಾಗಲೇ ಖ್ಯಾತಿಯನ್ನು ಪಡೆದಿದೆ. ಇದರ ಜೊತೆಯಲ್ಲಿ ಮೋದಿ ಸರ್ಕ್ಯೂಟ್ ಹೌಸ್ ಕೂಡ ನಿರ್ಮಾಣವಾದಲ್ಲಿ ಪ್ರವಾಸೋದ್ಯಮಕ್ಕೆ ಮತ್ತಷ್ಟು ಇಂಬು ಸಿಗಲಿದೆ ಎಂಬುದು ಉತ್ತರಾಖಂಡ್ ಸರ್ಕಾರದ ಪ್ಲಾನ್ ಆಗಿದೆ .
ಕೆಲವು ವರ್ಷಗಳ ಹಿಂದೆ ಪ್ರಧಾನಿ ಮೋದಿಯು ಕೇದಾರನಾಥದ ಗುಹೆಯಲ್ಲಿ ಒಬ್ಬರೇ ಕುಳಿತು ಧ್ಯಾನ ಮಾಡಿದ್ದರು. ಇದರ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದಾದ ಬಳಿಕ ಕೇದಾರನಾಥದ ಈ ಗುಹೆಗೆ ತೆರಳಲು ಪ್ರವಾಸಿಗರು ಮುಗಿಬಿದ್ದಿದ್ದರು. ಹೀಗಾಗಿ ಇದೇ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಇದೀಗ ಉತ್ತರಾಖಂಡ್ ಸರ್ಕಾರ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕ್ತಿದೆ .
ಇದನ್ನು ಓದಿ : karnataka ratna award to puneeth : ನವೆಂಬರ್ 1ರಂದು ಪುನೀತ್ಗೆ ಮರಣೋತ್ತರ ಕರ್ನಾಟಕ ರತ್ನ ಪ್ರದಾನ
ಇದನ್ನೂ ಓದಿ : ಮಿಯಾಮಿ ಬೀಚ್‌ನಲ್ಲಿ ಹಾರ್ದಿಕ್ ಪಾಂಡ್ಯ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ ಬಿಂದಾಸ್ ಎಂಜಾಯ್
uttarakhand tourism department to develop modi circuit at corbett tiger reserve