Ramayana quiz : ರಾಮಾಯಣ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಗಮನಾರ್ಹ ಟಾಪರ್​ಗಳಾಗಿ ಹೊರ ಹೊಮ್ಮಿದ ಮುಸ್ಲಿಂ ವಿದ್ಯಾರ್ಥಿಗಳು

ಕೇರಳ : Ramayana quiz : ದೇಶದಲ್ಲಿ ಕೋಮುವಾದದ ಕಚ್ಚಾಟಗಳೇ ಹೆಚ್ಚಾಗಿರುವ ನಡುವೆಯೇ ಕೇರಳದಲ್ಲಿ ನಡೆದ ರಾಜ್ಯ ಮಟ್ಟದ ರಾಮಾಯಣ ರಸಪ್ರಶ್ನೆ ಸ್ಪರ್ಧೆಯಲ್ಲಿ ಇಸ್ಲಾಂ ಧರ್ಮಕ್ಕೆ ಸೇರಿದ ಇಬ್ಬರು ವಿದ್ಯಾರ್ಥಿಗಳು ಟಾಪ್​ 5 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು ದೇಶಾದ್ಯಂತ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದ್ದಾರೆ. 20 ವರ್ಷದ ಮೊಹಮ್ಮದ್​ ಬಾಸಿತ್​ ಹಾಗೂ 23 ವರ್ಷದ ಮುಹಮ್ಮದ್​ ಜಾಬಿರ್​ ಪಿ.ಕೆ ಎಂಬವರು ಈ ಸಾಧನೆಯನ್ನು ಮಾಡಿದ್ದಾರೆ. ಕೇರಳದ ಮರ್ಕಝ್​​ ವಲಾಂಚೇರಿಯ ಕೆಕೆಹೆಚ್​ಎಂ ಇಸ್ಲಾಮಿಕ್​ ಮತ್ತು ಆರ್ಟ್ಸ್​ ಕಾಲೇಜಿನಲ್ಲಿ ಈ ಇಬ್ಬರು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ.


ರಾಮಾಯಣದ ಕುರಿತಾದ ಆಳವಾದ ಅಧ್ಯಯನದ ಆಧಾರದ ಮೇಲೆ ಜುಲೈ 23ರಿಂದ 25ರ ನಡುವೆ ಕೇರಳದ ಪ್ರಕಾಶನ ಸಂಸ್ಥೆಯಾದ ಡಿಸಿ ಬುಕ್ಸ್​ ಆನ್​ಲೈನ್​ ಕ್ವಿಜ್​ ಸ್ಫರ್ಧೆಯನ್ನು ಆಯೋಜಿಸಿತ್ತು. ಈ ಸ್ಪರ್ಧೆಯಲ್ಲಿ ಜಬಿರ್​ ಹಾಗೂ ಬಸಿತ್​ ಭಾಗಿಯಾಗಿದ್ದರು. ರಾಮಾಯಣವನ್ನು ಓದಿ ಅದನ್ನು ಅರ್ಥ ಮಾಡಿಕೊಂಡ ಈ ಇಬ್ಬರು ಮುಸ್ಲಿಂ ವಿದ್ಯಾರ್ಥಿಗಳು ಟಾಪರ್​ 5 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅಂದಹಾಗೆ ಈ ಸ್ಪರ್ಧೆಯ ಇತರೆ ವಿಜೇತರನ್ನು ನವನೀತ್​ ಗೋಪನ್​ , ಅಭಿರಾಮ್​ ಎಂಪಿ ಹಾಗೂ ಗೀತು ಕೃಷ್ಣನ್​ ಎಂದು ಗುರುತಿಸಲಾಗಿದೆ.


ಧರ್ಮಶಾಸ್ತ್ರದ ವಿದ್ಯಾರ್ಥಿಯಾಗಿರುವ ಜಬಿರ್​, ಎಲ್ಲಾ ಧರ್ಮವು ಮಾನವೀಯತೆಯ ಶಾಂತಿಯುತ ಜೀವಕ್ಕೆಂದೇ ಮಾಡಲ್ಪಟ್ಟಿದೆ. ಧರ್ಮದ ಹೆಸರಲ್ಲಿ ಉಂಟಾಗುತ್ತಿರುವ ಉದ್ವಿಗ್ನತೆಗಳು ಮಾನವ ನಿರ್ಮಿತ. ಒಂದು ನಾಡಿನಲ್ಲಿ ಉತ್ತಮ ಆಡಳಿತ ಹಾಗೂ ನ್ಯಾಯವನ್ನು ಹೇಗೆ ಜಾರಿಗೆ ತರಬೇಕು ಎಂಬುದನ್ನು ರಾಮಾಯಣವು ವಿವರಿಸುತ್ತದೆ. ರಾಮಾಯಣದಲ್ಲಿ ರಾಮನನ್ನು ಆದರ್ಶ ರಾಜನಾಗಿ ತೋರಿಸಲಾಗಿದೆ. ದೇಶದಲ್ಲಿ ಉತ್ತಮ ಆಡಳಿತ, ನ್ಯಾಯ, ಸದ್ಗುಣ ಹಾಗೂ ಕರ್ತವ್ಯಗಳನ್ನು ಹೇಗೆ ಪಾಲಿಸಬೇಕು ಎಂಬುದನ್ನು ತೋರಿಸಲಾಗಿದೆ . ಯಾವುದೇ ಧರ್ಮವು ದ್ವೇಷವನ್ನು ಉತ್ತೇಜಿಸುವುದಿಲ್ಲ ಎಂದು ಹೇಳಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿದ ಮತ್ತೊಬ್ಬ ಸ್ಪರ್ಧಿ ಬಸಿತ್​ ನಾನು ಬಾಲ್ಯದಲ್ಲಿ ಕಾರ್ಟೂನ್​ಗಳ ಮೂಲಕ ಸಣ್ಣ ಕತೆಗಳ ರೀತಿಯಲ್ಲಿ ಮಕ್ಕಳ ನಿಯತಕಾಲಿಕೆಗಳಲ್ಲಿ ಪ್ರಕಟವಾಗುತ್ತಿದ್ದ ರಾಮಾಯಣವನ್ನು ಓದಿಯೇ ಹಿಂದೂ ಪವಿತ್ರ ಗ್ರಂಥದ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಂಡಿದ್ದೆ. ನಾನು ಇಲ್ಲಿಗೆ ಬಂದಾಗ ನನಗೆ ಎಲ್ಲಾ ಧಾರ್ಮಿಕ ಗ್ರಂಥಗಳನ್ನು ಓದುವ ಅವಕಾಶ ಸಿಕ್ಕಿತು. ರಾಮಾಯಣವು ಹಿಂದೂ ಧಾರ್ಮಿಕ ಜ್ಞಾನೋದಯವಾಗಿದೆ ಎಂದು ಹೇಳಿದ್ದಾರೆ .

ಇದನ್ನು ಓದಿ : corbett tiger reserve : ಮ್ಯಾನ್​ ವರ್ಸಸ್​ ವೈಲ್ಡ್​​ನಲ್ಲಿ ಪ್ರಧಾನಿ ಮೋದಿ ಶೂಟಿಂಗ್​ ನಡೆಸಿದ್ದ ಜಾಗವಿನ್ನು ‘ಮೋದಿ ಸರ್ಕ್ಯೂಟ್​’.

ಇದನ್ನೂ ಓದಿ : Heavy rains : ಸುಳ್ಯ ತಾಲೂಕಿನಲ್ಲಿ ವರುಣನ ರೌದ್ರ ನರ್ತನ : ಮಳೆಯ ಅಬ್ಬರಕ್ಕೆ ಕೊಚ್ಚಿ ಹೋದ ಸೇತುವೆ, ಹಲವು ಗ್ರಾಮಗಳ ಸಂಪರ್ಕ ಕಡಿತ

Two Kerala Islamic studies students among winners of Ramayana quiz

Comments are closed.