ನವದೆಹಲಿ: ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಖಾತೆ ಯನ್ನು ಪರಿಶೀಲಿಸದೆ ಟ್ವಿಟ್ವರ್ ಬ್ಲೂ ಟಿಕ್ ತೆಗೆದು ಹಾಕಿದೆ. ಟ್ವಟ್ಟರ್ ಕ್ರಮಕ್ಕೆ ಇದೀಗ ಆಕ್ರೋಶ ವ್ಯಕ್ತವಾಗು ತ್ತಿದೆ.
ಬಿಜೆಪಿ ಮುಖಂಡ ಸುರೇಶ್ ನಖ್ವಾ ಅವರು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಖಾತೆಯ ಬ್ಲೂ ಟಿಕ್ ತೆಗೆದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪರಿಶೀಲನೆ ನಡೆಸದೇ ಉಪ ರಾಷ್ಟ್ರಪತಿಗಳ ಟ್ವಿಟರ್ ಹ್ಯಾಂಡಲ್ ನಿಂದ ಏಕೆ ನೀಲಿ ಟಿಕ್ ತೆಗೆದಿದೆ ಎಂದು ಪ್ರಶ್ನಿಸಿದ್ದಾರೆ.
ಸಾಮಾನ್ಯವಾಗಿ ಸೇವಾ ನಿಯಮ ಪಾಲನೆ ಮಾಡದಿದ್ರೆ ಅಂತಹ ಖಾತೆಗಳ ಬ್ಲೂ ಟಿಕ್ ನ್ನು ಟ್ವಿಟ್ಟರ್ ತೆಗೆದು ಹಾಕುತ್ತದೆ. ಆದರೆ ಯಾವ ಕಾರಣಕ್ಕೆ ಟ್ವಿಟ್ಟರ್ ಹೀಗೆ ಮಾಡಿದೆ ಅನ್ನುವ ಕುರಿತು ಅಧಿಕೃತ ಹೇಳಿಕೆ ಕೊಟ್ಟಿಲ್ಲ. ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ ಹಿನ್ನೆಲೆ ಟ್ವಿಟರ್ ಮತ್ತು ಸರ್ಕಾರದ ನಡುವೆ ವಿವಾದ ಉಂಟಾಗಿದೆ. ಹೊಸ ಮಾರ್ಗ ಸೂಚಿಗೆ ಟ್ವಿಟರ್ ಇನ್ನೂ ಅನುಮೋದನೆ ನೀಡಿಲ್ಲ. ಅಲ್ಲದೇ ದೆಹಲಿ ಪೊಲೀಸರು ಪರಿಶೀಲನೆಗಾಗಿ ಟ್ವಿಟರ್ ನ ದೆಹಲಿ ಮತ್ತು ಗುರುಗ್ರಾಮ ದಲ್ಲಿರುವ ಕಚೇರಿಗಳ ಮೇಲೆ ದಾಳಿ ನಡೆಸಿದ್ದರು.