ಮಂಗಳವಾರ, ಏಪ್ರಿಲ್ 29, 2025
HomeNationalMishra cleans toilet : ಬರಿಗೈನಲ್ಲಿ ಶಾಲಾ ಶೌಚಾಲಯದ ಕೊಳಕನ್ನು ಸ್ವಚ್ಛಗೊಳಿಸಿದ ಬಿಜೆಪಿ ಸಂಸದ :...

Mishra cleans toilet : ಬರಿಗೈನಲ್ಲಿ ಶಾಲಾ ಶೌಚಾಲಯದ ಕೊಳಕನ್ನು ಸ್ವಚ್ಛಗೊಳಿಸಿದ ಬಿಜೆಪಿ ಸಂಸದ : ವಿಡಿಯೋ ವೈರಲ್

- Advertisement -

ಮಧ್ಯ ಪ್ರದೇಶ : Mishra cleans toilet : ಬಿಜೆಪಿ ಸಂಸದ ಜನಾರ್ದನ್​ ಮಿಶ್ರಾ ಮಧ್ಯ ಪ್ರದೇಶದ ಖಟ್ಖಾರಿಯ ಬಾಲಕಿಯರ ಪ್ರೌಢಶಾಲೆಯಲ್ಲಿರುವ ಶೌಚಾಲಯವನ್ನು ತಮ್ಮ ಕೈಗಳಿಂದ ಸ್ವಚ್ಛಗೊಳಿಸಿದ್ದಾರೆ.ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ರೇವಾ ಸಂಸದರಾಗಿರುವ ಜನಾರ್ಧನ್​ ಮಿಶ್ರಾ ಮಧ್ಯಪ್ರದೇಶದ ಖಟ್ಖಾರಿಯ ಬಾಲಕಿಯರ ಪ್ರೌಢಶಾಲೆಯಲ್ಲಿ ಶೌಚಾಲಯವನ್ನು ತಮ್ಮ ಬರಿಗೈನಿಂದ ಸ್ವಚ್ಛಗೊಳಿಸಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಸಂಸದ ಜನಾರ್ದನ್​ ಮಿಶ್ರಾ ಯಾವುದೇ ಉಪಕರಣಗಳನ್ನು ಬಳಸದೇ ಕೇವಲ ತನ್ನ ಬರಿಗೈನಿಂದ ಶೌಚಾಲಯವನ್ನು ಸ್ವಚ್ಛಗೊಳಿಸುತ್ತಿರುವುದನ್ನು ಕಾಣಬಹುದಾಗಿದೆ.


ಜನಾರ್ಧನ್​ ಮಿಶ್ರಾ ತಮ್ಮ ಟ್ವಿಟರ್​ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಪಕ್ಷದಿಂದ ನಡೆಸಲಾಗುತ್ತಿರುವ ಸೇವೆಯ ಅಡಿಯಲ್ಲಿ ಫಖ್ವಾಡದ ಅಡಿಯಲ್ಲಿ ಯುವ ಮೋರ್ಛಾ ಖತ್ಖಾರಿಯ ಬಾಲಕಿಯರ ಶಾಲೆಯಲ್ಲಿ ಮರ ನೆಡುವ ಕಾರ್ಯಕ್ರಮದ ಬಳಿಕ ಶೌಚಾಲಯವನ್ನು ಸ್ವಚ್ಛಗೊಳಿಸಿದ್ದೇನೆ ಎಂದು ಶೀರ್ಷಿಕೆ ನೀಡಿದ್ದಾರೆ. ಈ ಟ್ವೀಟ್​​ಗೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ, ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​ ಸೇರಿದಂತೆ ಅನೇಕ ಬಿಜೆಪಿ ನಾಯಕರನ್ನು ಟ್ಯಾಗ್​ ಮಾಡಲಾಗಿದೆ.

ಪಕ್ಷದ ವತಿಯಿಂದ ನಡೆಯುತ್ತಿರುವ ಸೇವಾ ಪಖವಾಡದ ಅಡಿಯಲ್ಲಿ ಯುವ ಮೋರ್ಚಾ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂಸದರು ಶಾಲೆಗೆ ತೆರಳಿದ್ದರು. ಮರ ನೆಟ್ಟ ನಂತರ ಶಾಲೆಯಲ್ಲಿ ಶೌಚಾಲಯ ತುಂಬಾ ಕೊಳಕಾಗಿದ್ದು, ಅದನ್ನು ಬಳಸಲು ತುಂಬಾ ಕಷ್ಟವಾಗಿದೆ ಎಂದು ತಿಳಿದಾಗ ಬಕೆಟ್​ನಿಂದ ನೀರು ತೆಗೆದುಕೊಂಡು ತಮ್ಮ ಬರಿಗೈನಲ್ಲಿಯೇ ಶೌಚಾಲಯದ ಕಮೋಡ್​ನಲ್ಲಿದ್ದ ಕೊಳೆಯನ್ನು ತೊಳೆದಿದ್ದಾರೆ.

ಇದನ್ನು ಓದಿ : DK= ‘D’eath Over ‘K’iller : ಟೀಮ್ ಇಂಡಿಯಾ ಫಿನಿಷರ್ ದಿನೇಶ್ ಕಾರ್ತಿಕ್‌ಗೆ ಹೊಸ ಬಿರುದು

ಇದನ್ನೂ ಓದಿ : Roger Federer’s final match :ರೋಜರ್​ ಫೆಡರರ್​​ ಅಂತಿಮ ಪಂದ್ಯದ ಬಳಿಕ ಕಣ್ಣೀರಿಟ್ಟ ನಡಾಲ್​ : ವೈರಲ್​ ಆಯ್ತು ವಿಡಿಯೋ

ಇದನ್ನೂ ಓದಿ : Man’s Dead Body :ಪತಿ ಮೃತದೇಹಕ್ಕೆ ಗಂಗಾಜಲ ಸಿಂಪಡಿಸಿ 18 ತಿಂಗಳುಗಳ ಕಾಲ ಮನೆಯಲ್ಲೇ ಇಟ್ಟುಕೊಂಡ ಪತ್ನಿ

ಇದನ್ನೂ ಓದಿ : Dasara School Holidays : ಮಂಗಳೂರು ದಸರಾ : ಶಾಲೆಗಳಿಗೆ ಹೆಚ್ಚುವರಿ 4 ದಿನ ರಜೆ : ಆದೇಶ ಪ್ರಕಟ

WATCH: BJP MP Janardan Mishra cleans toilet with bare hands at girls’ school in Rewa

RELATED ARTICLES

Most Popular