Roger Federer final match :ರೋಜರ್​ ಫೆಡರರ್​​ ಅಂತಿಮ ಪಂದ್ಯದ ಬಳಿಕ ಕಣ್ಣೀರಿಟ್ಟ ನಡಾಲ್​ : ವೈರಲ್​ ಆಯ್ತು ವಿಡಿಯೋ

Roger Federer final match : ರೋಜರ್​ ಫೆಡರರ್​ ಹಾಗೂ ರಫಾಲ್​ ನಡಾಲ್​ ಟೆನ್ನಿಸ್​ ಲೋಕದ ದಿಗ್ಗಜರು ಎಂಬುದರಲ್ಲಿ ಎರಡು ಮಾತಿಲ್ಲ. ಅಲ್ಲದೇ ಇವರಿಬ್ಬರ ನಡುವಿನ ಪಂದ್ಯ ಎಷ್ಟರ ಮಟ್ಟಿಗೆ ರೋಚಕವಾಗಿರುತ್ತದೆ ಎಂದರೆ ಪ್ರೇಕ್ಷಕರು ಖುರ್ಚಿ ತುದಿಗೆ ಕುಳಿತುಕೊಳ್ಳಬೇಕು. ಸಾಂಪ್ರದಾಯಿಕ ಎದುರಾಳಿ ಎನಿಸಿಕೊಂಡಿರುವ ಈ ಇಬ್ಬರು ಆಟಗಾರರು ಟೆನ್ನಿಸ್​ ಲೋಕದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಟೆನ್ನಿಸ್​ ಅಂಗಳದಲ್ಲಿ ಇವರಿಬ್ಬರು ಎಂತಹ ಸ್ಪರ್ಧಿಗಳಾಗಿದ್ದರೂ ಸಹ ಕ್ರೀಡೆಯ ಹೊರತಾಗಿ ಫೆಡರರ್​ ಹಾಗೂ ನಡಾಲ್​ ಉತ್ತಮ ಸ್ನೇಹಿತರು. ಫೆಡರರ್​ ಟೆನ್ನಿಸ್​ ಲೋಕಕ್ಕೆ ವಿದಾಯ ಘೋಷಿಸುವ ನಿರ್ಧಾರವನ್ನು ಕೈಗೊಂಡ ಸಂದರ್ಭದಲ್ಲಿ ಲೇವರ್​ ಕಪ್​​ನ ಡಬಲ್ಸ್​ ಪಂದ್ಯದಲ್ಲಿ ಶ್ರೇಷ್ಠ ಪ್ರತಿಸ್ಪರ್ಧಿ ಹಾಗೂ ನನ್ನ ಸ್ನೇಹಿತನ ಜೊತೆಯಲ್ಲಿ ನಾನು ಆಡಲು ಬಯಸುತ್ತೇನೆ ಎಂದು ಫೆಡರರ್​ ಹೇಳಿದ್ದರು.

ಆಪ್ತ ಗೆಳೆಯ ನಡಾಲ್​ ಜೊತೆಯಲ್ಲಿ ಲೇವರ್​ ಕಪ್​ ಟೂರ್ನಿಯಲ್ಲಿ ಕಣಕ್ಕಿಳಿದಿದ್ದ ರೋಜರ್​ ಫೆಡರರ್​ ಫಾನ್ಸೆಸ್​ ಟಿಯಾಫೋ ಹಾಗೂ ಜ್ಯಾಜ್​ಸಾಕ್​ ಜೋಡಿ ಎದುರು ಮೊದಲ ಸುತ್ತಿನಲ್ಲಿ ಸೋಲು ಅನುಭವಿಸಿದ್ದಾರೆ. ಪಂದ್ಯ ಮುಗಿದ ಬಳಿಕ ನಡಾಲ್​​ ಫೆಡರರ್​​ಗೆ ಕಣ್ಣೀರಿನ ವಿದಾಯವನ್ನು ಹೇಳಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ .


ಅಂತಿಮ ಪಂದ್ಯದಲ್ಲಿ ರೋಜರ್​ ಫೆಡರರ್​​ ಗೆಲುವಿನ ಮೂಲಕ ಟೆನ್ನಿಸ್​ ಕೋರ್ಟ್​ಗೆ ವಿದಾಯ ಹೇಳುತ್ತಾರೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಆಘಾತಕಾರಿ ಬೆಳವಣಿಗೆ ಎಂಬಂತೆ ರೆಸ್ಟ್​ ಆಫ್​ ದಿ ವರ್ಲ್ಡರ್​ ತಂಡದ ಫಾನ್ಸೆನ್​ ಟಿಯಾಪೋ ಹಾಗೂ ಜ್ಯಾಕ್​ ಸಾಕ್​ ಜೋಡಿಯು 4-6, 7-6(7/2), 11-9 ಅಂತರದಲ್ಲಿ ಫೆಡರರ್​ ಹಾಗೂ ನಡಾಲ್​ ಜೋಡಿಯ ವಿರುದ್ಧ ಗೆಲುವನ್ನು ಸಾಧಿಸಿತು. ಪಂದ್ಯದ ಕೊನೆಯಲ್ಲಿ ರೋಜರ್​​ ಫೆಡರರ್​ ಕೊಂಚ ಭಾವುಕಾರಿದ್ದು ಕಂಡು ಬಂತು. ಆದರೆ ಅಲ್ಲೇ ಪಕ್ಕದಲ್ಲೇ ಕುಳಿತಿದ್ದ ರಾಫಲ್​ ನಡಾಲ್​​​ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಪಂದ್ಯದ ನಂತರ, ಫೆಡರರ್ ಕಣ್ಣೀರು ಹಾಕುವ ಮೊದಲು ನಡಾಲ್ ಮತ್ತು ಅವರ ಸಹ ಆಟಗಾರರನ್ನು ಅಪ್ಪಿಕೊಂಡರು. ಆಗ ನಡಾಲ್‌ ಕೂಡ ಕಣ್ಣೀರಿಡುತ್ತಿರುವುದನ್ನು ಕ್ಯಾಮರಾ ಕಣ್ಣಿಗೆ ಕಂಡಿತು.

ಇದನ್ನು ಓದಿ : Rohit Sharma World Record: ದಾಖಲೆಯ ಹೊಸ್ತಿಲ್ಲಿ ರೋಹಿತ್ ಶರ್ಮಾ.. ಇನ್ನೊಂದು ಸಿಕ್ಸರ್ ಬಾರಿಸಿದರೆ ಈ ವಿಶ್ವದಾಖಲೆ ನಂದೇ

ಇದನ್ನೂ ಓದಿ : DK= ‘D’eath Over ‘K’iller : ಟೀಮ್ ಇಂಡಿಯಾ ಫಿನಿಷರ್ ದಿನೇಶ್ ಕಾರ್ತಿಕ್‌ಗೆ ಹೊಸ ಬಿರುದು

Watch: Rafael Nadal could not hold back tears after Roger Federer’s final match

Comments are closed.