ಸೋಮವಾರ, ಜೂನ್ 16, 2025
HomeNationalಮದುವೆಯಾಗುವುದಾಗಿ ನಂಬಿಸಿ ಮಾಡೆಲ್‌ ಮೇಲೆ ಅತ್ಯಾಚಾರ

ಮದುವೆಯಾಗುವುದಾಗಿ ನಂಬಿಸಿ ಮಾಡೆಲ್‌ ಮೇಲೆ ಅತ್ಯಾಚಾರ

- Advertisement -

ಕೋಲ್ಕತ್ತಾ : ಆತ ನೈಟ್‌ ಕ್ಲಬ್‌ ಮ್ಯಾನೇಜರ್‌, ಆಕೆ ಮಾಡೆಲ್‌. ಇಬ್ಬರಿಗೂ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿತ್ತು. ಪರಿಚಯ ನಂತರ ಪ್ರೇಮಕ್ಕೆ ತಿರುಗಿ ಇಬ್ಬರೂ ಮದುವೆಯಾಗೋದಾಗಿ ನಿಶ್ಚಯಿಸಿದ್ದರು. ವಧುವನ್ನು ತನ್ನ ಮನೆಗೆ ಮಾತುಕತೆಗೆ ಕರೆಯಿಸಿದ್ದ ವರ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ನಂತರ ಗರ್ಭಪಾತ ಮಾಡಿಸಲು ಮುಂದಾಗಿರುವ ಘಟನೆ ಪಶ್ಚಿಮ ಬಂಗಾಲದಲ್ಲಿ ನಡೆದಿದೆ.

ಪಶ್ಚಿಮ ಬಂಗಾಲದ ದಕ್ಷಿಣ ೨೪ ಪರಗಣ ಜಿಲ್ಲೆಯಲ್ಲಿನ ಯುವತಿ ಮಾಡೆಲ್‌ ಆಗಿ ಕೆಲಸ ಮಾಡುತ್ತಿದ್ದಳು. ನೈಟ್‌ ಕ್ಲಬ್ ಮ್ಯಾನೇಜರ್‌ ಜೊತೆ ಸ್ನೇಹ ಉಂಟಾಗಿತ್ತು. ಇಬ್ಬರೂ ಮದುವೆಗೆ ನಿಶ್ಚಯ ಮಾಡಿದ ನಂತರದಲ್ಲಿ ತನ್ನ ಪೋಷಕರು ನಿನ್ನನ್ನು ಭೇಟಿ ಮಾಡಲು ಇಚ್ಚಿಸಿದ್ದಾರೆ. ಹೀಗಾಗಿ ಮನೆಗೆ ಬಾ ಎಂದು ಕರೆಯಿಸಿಕೊಂಡಿದ್ದ. ಆತನ ಮಾತನ್ನು ನಂಬಿದ ಆಕೆ ಒಬ್ಬಂಟಿಯಾಗಿ ಮನೆಗೆ ಬಂದಿದ್ದಾಳೆ. ಈ ವೇಳೆಯಲ್ಲಿ ಪ್ರಿಯತಮ ತನ್ನ ಮೇಲೆ ಮೂರು ಬಾರಿ ಅತ್ಯಾಚಾರವೆಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾಳೆ.

ಮದುವೆ ನಿಶ್ಚಯವಾಗಿದ್ದ ವರ ತನ್ನ ಮೇಲೆ ಅತ್ಯಾಚಾರವೆಸಗಿದ್ದರೂ ಕೂಡ ಆಕೆ ಮಾತ್ರ ಈ ವಿಚಾರವನ್ನು ತನ್ನ ಮನೆಯವರಿಗೆ ತಿಳಿಸಿರಲಿಲ್ಲ. ಆದರೆ ಎರಡು ವಾರದ ನಂತರದಲ್ಲಿ ಆಕೆಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗರ್ಭಿಣಿ ಆಗಿರುವುದು ಪತ್ತೆಯಾಗಿತ್ತು. ಆದರೆ ವರನಾಗಿರುವ ನೈಟ್‌ ಕ್ಲಬ್‌ ಮ್ಯಾನೇಜರ್‌ ಗರ್ಭಪಾತ ಮಾಡಿಸುವಂತೆ ಒತ್ತಾಯಿಸಿದ್ದಾನೆ. ನಂತರ ಸಂತ್ರಸ್ತೆ ಸೋನಾಪುರ್‌ ಪೊಲೀಸರಿಗೆ ದೂರು ನೀಡಿದ್ದಾಳೆ.

ಅಂತಿಮವಾಗಿ ಪೊಲೀಸರು ಎರಡೂ ಕಡೆಯವರನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದ ವೇಳೆಯಲ್ಲಿ ಈ ಮಾಸಾಂತ್ಯಕ್ಕೆ ಮದುವೆಯಾಗುವುದಾಗಿ ಒಪ್ಪಿಗೆ ಸೂಚಿಸಿದ್ದಾನೆ ಎನ್ನಲಾಗುತ್ತಿದೆ.

( Model Raped forced to Under go abortion by night club manager in West Bengal )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular