ತ್ರಿಶೂರ್ : ತಿಮಿಂಗಲ ವಾಂತಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಆರೋಪ ಹಿನ್ನೆಲೆಯಲ್ಲಿ ಕೇರಳದ ತ್ರಿಶೂರ್‌ನ ಚೆತುವಾದಲ್ಲಿ ಮೂವರನ್ನು ಬಂಧಿಸಲಾಗಿದೆ. ಬಂಧಿತರಿಂದ ಬೋರಬ್ಬರಿ 18 ಕೆಜಿ ಮೌಲ್ಯದ ತಿಮಿಂಗಿಲ ವಾಂತಿಯನ್ನು ವಶಕ್ಕೆ ಪಡೆಯಲಾಗಿದ್ದು, ಮಾರುಕಟ್ಟೆ ಮೌಲ್ಯ ಸುಮಾರು 30 ಕೋಟಿ ಎಂದು ಅಂದಾಜಿಸಲಾಗಿದೆ.
ವಟನ್‌ಪಲ್ಲಿ ಮೂಲದ ರಫೀಕ್, ಪಾಲೂರು ಮೂಲದ ಫೈಸಲ್ ಮತ್ತು ಎರ್ನಾಕುಲಂ ಮೂಲದ ಹಮ್ಸಾ ಬಂಧಿತ ಆರೋಪಿಗಳು. ಸುಗಂಧ ದ್ರವ್ಯ ಮಾರುಕಟ್ಟೆಗೆ ಸಾಗಿಸುವ ಸಲುವಾಗಿ ಇಷ್ಟೊಂದು ಮೌಲ್ಯದ ತಿಮಿಂಗಿಲ ವಾಂತಿಯನ್ನು ಸಂಗ್ರಹಿಸಿಟ್ಟಿದ್ದರು ಎಂದು ತಿಳಿದುಬಂದಿದೆ. ಕೇರಳದಲ್ಲಿ ತಿಮಿಂಗಿಲ ವಾಂತಿ ಸಂಗ್ರಹವಿಟ್ಟಿರುವ ಮೊದಲ ಪ್ರಕರಣ ಇದಾಗಿದೆ.
ವಿದೇಶಿ ಮಾರುಕಟ್ಟೆಯಲ್ಲಿ ತಿಮಿಂಗಿಲ ವಾಂತಿ ಅಥವಾ ಅಂಬರ್ ಗ್ರೀಸ್ ಗೆ ಉತ್ತಮ ಬೇಡಿಕೆಯಿದೆ. ಆದರೆ ಭಾರತದಲ್ಲಿ ತಿಮಿಂಗಿಲ ವಾಂತಿಯನ್ನು ಅಕ್ರಮವಾಗಿ ಸಂಗ್ರಹ ಮಾಡುವುದು ಶಿಕ್ಷಾರ್ಹ ಅಪರಾಧ ವಾಗಿದೆ. ಈ ಹಿನ್ನೆಲೆಯ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಮೂವರ ವಿರುದ್ದ ಪ್ರಕರಣ ದಾಖಲಾಗಿದೆ. ಇತ್ತೀಚಿಗಷ್ಟೇ ಬೆಂಗಳೂರು ಹಾಗೂ ಆಂಧ್ರಪ್ರದೇಶದಲ್ಲಿ ತಿಮಿಂಗಿಲ ವಾಂತಿ ಮಾರಾಟಕ್ಕೆ ಯತ್ನಿಸಿದವರನ್ನು ಬಂಧಿಸಲಾಗಿದೆ.