ಮಂಗಳವಾರ, ಏಪ್ರಿಲ್ 29, 2025
HomeNationalGp Capt Varun Singh : ಸೇನಾ ಹೆಲಿಕಾಪ್ಟರ್​ ದುರಂತದಲ್ಲಿ ಬಚಾವಾದ ಏಕೈಕ ಸೇನಾಧಿಕಾರಿ ಯಾರು...

Gp Capt Varun Singh : ಸೇನಾ ಹೆಲಿಕಾಪ್ಟರ್​ ದುರಂತದಲ್ಲಿ ಬಚಾವಾದ ಏಕೈಕ ಸೇನಾಧಿಕಾರಿ ಯಾರು ಗೊತ್ತೇ..?

- Advertisement -

(Gp Capt Varun Singh) ಸೇನಾಪಡೆಗಳ ಮುಖ್ಯಸ್ಥ ಬಿಪಿನ್​ ರಾವತ್​ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್​ ದುರಂತಕ್ಕೀಡಾಗಿದ್ದು ಈ ಅಪಘಾತದಲ್ಲಿ ಜನರಲ್​ ಬಿಪಿನ್​ ರಾವತ್​ ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದಾರೆ ಎಂಬ ಅಧಿಕೃತ ಮಾಹಿತಿ ಹೊರಬಿದ್ದಿದೆ. ಬಿಪಿನ್​ ರಾವತ್​ ಜೊತೆ ಪ್ರಯಾಣ ಮಾಡುತ್ತಿದ್ದ ಪತ್ನಿ ಮಧುಲಿಕಾ ರಾವತ್​ ಕೂಡ ಈ ಅಪಘಾತದಲ್ಲಿ ನಿಧನರಾಗಿದ್ದಾರೆ,

ವೆಲ್ಲಿಂಗ್ಟನ್​​ನ ಡಿಫೆನ್ಸ್​ ಸರ್ವೀಸ್​ ಸ್ಟಾಫ್​ ಕಾಲೇಜಿಗೆ ಭೇಟಿ ನೀಡಲೆಂದು ಎಂಐ 15 ವಿ5 ಹೆಲಿಕಾಪ್ಟರ್​​ನಲ್ಲಿ ಒಟ್ಟು 14 ಮಂದಿ ಪ್ರಯಾಣಿಸುತ್ತಿದ್ದರು.ತಮಿಳುನಾಡಿನ ನೀಲಗಿರಿ ಅರಣ್ಯ ವ್ಯಾಪ್ತಿಯ ಕುನೂರು ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ. ದುರಂತ ಸ್ಥಳದಲ್ಲಿಯೇ ಸಾಕಷ್ಟು ಮೃತ ದೇಹಗಳು ಪತ್ತೆಯಾಗಿದ್ದವು. ಡಿಎನ್​ಎ ಪರೀಕ್ಷೆ ಮೂಲಕ ಮೃತ ದೇಹಗಳ ಗುರುತು ಪತ್ತೆ ಹಚ್ಚಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಿಪಿನ್​ ರಾವತ್​​ರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ವಿಧಿವಶರಾಗಿದ್ದಾರೆ.

14 ಮಂದಿ ಪ್ರಯಾಣಿಸುತ್ತಿದ್ದ ಈ ಹೆಲಿಕಾಪ್ಟರ್​​ನಲ್ಲಿದ್ದ ಏಕೈಕ ಸೇನಾಧಿಕಾರಿ ಮಾತ್ರ ಬದುಕುಳಿದಿದ್ದಾರೆ. ಭಾರತೀಯ ವಾಯುಪಡೆ ನೀಡಿರುವ ಮಾಹಿತಿಯ ಪ್ರಕಾರ ಗ್ರೂಪ್​ ಕ್ಯಾಪ್ಟನ್​​ ವರುಣ್​​​ ಸಿಂಗ್​​ ಎಸ್​ಸಿ ಎಂಬವರು ಮಾತ್ರ ಈ ದುರ್ಘಟನೆಯಿಂದ ಬಚಾವಾಗಿದ್ದಾರೆ. ವರುಣ್​ ಸಿಂಗ್​​ ಗಾಯಗಳಾಗಿದ್ದು ವೆಲ್ಲಿಂಗ್ಟನ್​ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
2020ರಲ್ಲಿ ವೈಮಾನಿಕ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ತನ್ನ ಎಲ್​ಸಿಎ ತೇಜಸ್​ ಯುದ್ಧ ವಿಮಾನವನ್ನು ಉಳಿಸಿದ್ದಕ್ಕಾಗಿ ಗ್ರೂಪ್​ ಕ್ಯಾಪ್ಟನ್​ ವರುಣ್​ ಸಿಂಗ್​​ರಿಗೆ ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯಂದು ಕೇಂದ್ರ ಸರ್ಕಾರ ಶೌರ್ಯ ಚಕ್ರ ನೀಡಿ ಗೌರವಿಸಿದೆ.

ಬಿಪಿನ್‌ ರಾವತ್‌, ಮಧುಲಿಕಾ ರಾವತ್‌ ಸೇರಿ 13 ಮಂದಿ ದುರ್ಮರಣ

ಭಾರತ ಸೇನೆಯ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಬಿಪಿನ್ ರಾವತ್ (Bipin Rawat No More) ದುರ್ಮರಣ ಹೊಂದಿದ್ದಾರೆ. ಸೇನಾ ಹೆಲಿಕಾಫ್ಟರ್‌ನಲ್ಲಿ ( IAF Helicopter Crash ) ಪ್ರಯಾಣಿಸುತ್ತಿದ್ದ ಬಿಪಿಎನ್‌ ರಾವತ್‌, ಅವರ ಪತ್ನಿ ಮಧುಲಿಕಾ ರಾವತ್‌ ಸೇರಿದಂತೆ ಒಟ್ಟು 13 ಮಂದಿ ಸಾವನ್ನಪ್ಪಿದ್ದಾರೆ. ಸಿಡಿಎಸ್‌ ಬಿಪಿನ್‌ ರಾವತ್‌ ಸೇರಿದಂತೆ ಒಟ್ಟು 14 ಮಂದಿ ಸೇನಾ ಹೆಲಿಕಾಫ್ಟರ್‌ನಲ್ಲಿ ಸೇನಾ ಕಾಲೇಜಿನಲ್ಲಿ ನಡೆಯುತ್ತಿದ್ದ ಸೆಮಿನಾರ್‌ನಲ್ಲಿ ಭಾಗಿಯಾಗಲು ತೆರಳುತ್ತಿದ್ದರು. ಈ ವೇಳೆಯಲ್ಲಿ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರಿನಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡಿದೆ. ಈ ಸೇನಾ ಹೆಲಿಕಾಪ್ಟರ್ ಸೇನೆಯ ಐವರು ಹಿರಿಯ ಅಧಿಕಾರಿಗಳ ಸಹಿತ ಸೇನಾ ರಕ್ಷಣಾ ಪಡೆ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಅವ್ರ ಪತ್ನಿ ಸೇರಿ ಒಟ್ಟು 14 ಮಂದಿ ಪ್ರಯಾಣಿಸುತ್ತಿದ್ರು.

ಹೆಲಿಕಾಫ್ಟರ್‌ ದುರಂತರ ಬೆನ್ನಲ್ಲೇ ಬಿಪಿನ್‌ ರಾವತ್‌ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿತ್ತು.ಬಿಪಿನ್‌ ರಾವತ್‌ ಅವರ ಚೇತರಿಕೆಗಾಗಿ ಇಡೀ ದೇಶವೇ ಪ್ರಾರ್ಥಿಸಿತ್ತು. ಆದರೆ ರಾವತ್‌ ಬದುಕಿ ಬಾರಲೇ ಇಲ್ಲ. ಇನ್ನು ಬಿಪಿನ್ ರಾವತ್ ಲೆಫ್ಟಿನೆಂಟ್ ಜನರಲ್ ಆಗಿದ್ದ ವೇಳೆಯಲ್ಲಿ 2015ರಲ್ಲಿ ಗಾಲ್ಯಾಂಡ್‍ನ ದೀಮಾಪುರ್ ಬಳಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದರು. ಆದರೆ ಇಂದು ನಡೆದ ದುರಂತದಲ್ಲಿ ಬಿಪಿನ್‌ ರಾವತ್‌ ದುರ್ಮರಣ ಹೊಂದಿದ್ದಾರೆ.

ಇನ್ನು ಹೆಲಿಕಾಫ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಬಿಪಿನ್ ರಾವತ್, ಸಿಡಿಎಸ್, ಮಧುಲಿಕಾ ರಾವತ್, ಬಿಪಿನ್ ರಾವತ್ ಪತ್ನಿ, ಬ್ರಿಗೇಡಿಯರ್ ಎಲ್‍ಎಸ್ ಲಿದ್ದರ್ ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ನಾಯಕ್ ಗುರುಸೇವಕ್ ಸಿಂಗ್, ನಾಯಕ್ ಜಿತೇಂದರ್ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್, ಲ್ಯಾನ್ಸ್ ನಾಯಕ್ ಬಿ ಸಾಯಿತೇಜಾ, ಹವಾಲ್ದಾರ್ ಸತ್ಪಾಲ್ ಸಿಂಗ್, ಐವರು ಸೂಳೂರಿನವರು ಹುತಾತ್ಮರಾಗಿದ್ದಾರೆ.

ಇದನ್ನು ಓದಿ : Bipin Rawat Biography: ಭಾರತದ ಹೆಮ್ಮೆಯ ಬಿಪಿನ್ ರಾವತ್ ಕಾಂಗೋ ಗಣರಾಜ್ಯ ಸೈನ್ಯದ ನಾಯಕತ್ವವನ್ನೂ ವಹಿಸಿದ್ದರು!

ಇದನ್ನೂ ಓದಿ : CDS Bipin Rawat chopper crash:‘ನೋಡನೋಡುತ್ತಿದ್ದಂತೆಯೇ ಹೆಲಿಕಾಪ್ಟರ್​ ಮರಕ್ಕೆ ಡಿಕ್ಕಿ ಹೊಡೆದಿತ್ತು’: ಸೇನಾ ಹೆಲಿಕಾಪ್ಟರ್​ ದುರಂತದ ಕ್ಷಣಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ

Who is Gp Capt Varun Singh? The lone survivor in CDS chopper crash

RELATED ARTICLES

Most Popular