woman in sudan : ಮನೆಯಲ್ಲಿನ ಹೆಣ್ಣು ಮಕ್ಕಳನ್ನು ಮದುವೆ ಮಾಡಿಸೋದು ಅಂದರೆ ಸುಮ್ಮನೇ ಮಾತಲ್ಲ. ವರಾನ್ವೇಷಣೆ ಮಾಡಿ ಆತನ ಕುಲ-ಗೋತ್ರಗಳನ್ನು ತಿಳಿದುಕೊಂಡು ಬಳಿಕ ಒಳ್ಳೆಯ ದಿನ ನೋಡಿ ಮದುವೆ ನೆರವೇರಿಸುವ ವೇಳೆಗೆ ಸುಸ್ತೋ ಸುಸ್ತು. ಆದರೆ ಸುಡಾನ್ನಲ್ಲಿ ಮಾತ್ರ ಯುವತಿಯೊಬ್ಬಳು ನನಗೊಂದು ವರ ಬೇಕಾಗಿದ್ದಾನೆ ಎಂಬ ಬೋರ್ಡ್ನ್ನು ಕುತ್ತಿಗೆಗೆ ನೇತು ಹಾಕಿಕೊಂಡು ಸುಡಾನ್ ರಾಜಧಾನಿ ಖಾರ್ಟೂಮ್ನಲ್ಲಿ ಬೀದಿ ಬೀದಿ ಅಲೆಯುತ್ತಿದ್ದಾಳೆ. ಯುವತಿಯು ಈ ರೀತಿ ಅಲೆಯುತ್ತಿರುವ ಫೋಟೋ ಹಾಗೂ ವಿಡಿಯೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ನನಗೆ ವರ ಬೇಕಾಗಿದ್ದಾನೆ. ನಾನು ಮದುವೆಯಾಗಬೇಕು. ನನಗೆ ಬಹುಪತ್ನಿತ್ವವಾದರೂ ಅಡ್ಡಿಲ್ಲ. ಆದರೆ ನನಗೊಬ್ಬ ವರ ಬೇಕೆಂದು ಖಾರ್ಟೂಮ್ನ ಟ್ರಾಫಿಕ್ ಸಿಗ್ನಲ್ಗಳ ಬಳಿಯಲ್ಲಿ ಈ ಯುವತಿ ಬೋರ್ಡ್ನ್ನು ಕುತ್ತಿಗೆಗೆ ನೇತು ಹಾಕಿಕೊಂಡು ಅಲೆಯುತ್ತಿದ್ದಾಳೆ. ಕುತ್ತಿಗೆಗೆ ನೇತು ಹಾಕಿಕೊಂಡಿರುವ ಬೋರ್ಡ್ನಲ್ಲಿ ಯುವತಿ ತನ್ನ ಮೊಬೈಲ್ ಸಂಖ್ಯೆಯನ್ನೂ ನಮೂದಿಸಿದ್ದಾಳೆ.
ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಂದಹಾಗೆ ಸುಡಾನ್ನಲ್ಲಿ 2020ರ ಬಳಿಕ ಮದುವೆಯ ದರವು ಗಣನೀಯವಾಗಿ ಇಳಿಕೆ ಕಂಡಿದೆ. 2018ಕ್ಕೆ ಹೋಲಿಕೆ ಮಾಡಿದರೆ 2020ರ ವೇಳೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟವರ ಸಂಖ್ಯೆಯು 21 ಪ್ರತಿಶತ ಇಳಿಕೆಯಾಗಿದೆ. ಸುಡಾನ್ನಲ್ಲಿ 2018ರಲ್ಲಿ 1,80563 ಮಂದಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರೆ 2020ರಲ್ಲಿ ಕೇವಲ 1,42,949 ವಿವಾಹಗಳು ನೋಂದಣಿಯಾಗಿವೆ. ಕೋವಿಡ್ ಸಾಂಕ್ರಾಮಿಕ ಹಾಗೂ ಸುಡಾನ್ನಲ್ಲಿ ಜನರ ಆರ್ಥಿಕ ವ್ಯವಸ್ಥೆ ಹದಗೆಟ್ಟಿರುವುದೇ ಇದಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮದುವೆ ಸಂಖ್ಯೆ ಕಡಿಮೆಯಾಗಿದ್ದು ಒಂದೆಡೆಯಾದರೆ ಸುಡಾನ್ನಲ್ಲಿ ವಿಚ್ಚೇದನದ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಒಂದು ಅಂಕಿ ಅಂಶದ ಪ್ರಕಾರ ಸುಡಾನ್ನಲ್ಲಿ ಪ್ರತಿ ಒಂದು ಗಂಟೆಗೆ 7 ದಂಪತಿ ತಮ್ಮ ವೈವಾಹಿಕ ಸಂಬಂಧವನ್ನು ಮುರಿದುಕೊಳ್ಳುತ್ತಿದ್ದಾರಂತೆ.
ಇದನ್ನು ಓದಿ : actor dileeps friend arrested : ಖ್ಯಾತ ನಟಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ದಿಲೀಪ್ ಸ್ನೇಹಿತನ ಬಂಧನ
ಇದನ್ನೂ ಓದಿ : Womens T20 Challenge 2022 : ಮಹಿಳಾ T20 ಚಾಲೆಂಜ್ 2022 ತಂಡಗಳನ್ನು ಪ್ರಕಟಿಸಿದ BCCI
woman in sudan takes to street in search for potential husband