stole mother jewellery for lover : ಪ್ರಿಯತಮನಿ​ಗಾಗಿ ತಾಯಿಯ ಚಿನ್ನಾಭರಣಗಳನ್ನೇ ಕದ್ದ ಪುತ್ರಿ ಬಂಧನ

ಬೆಂಗಳೂರು : stole mother jewellery for lover : ಪ್ರೀತಿಯಲ್ಲಿ ಬಿದ್ದರೆ ಜಗತ್ತು ಕಾಣೋದಿಲ್ಲ ಎಂಬ ಮಾತಿದೆ. ಪ್ರೀತಿಗಾಗಿ ಯಾರು ಯಾವ ರಿಸ್ಕ್​ ಬೇಕಿದ್ದರೂ ತೆಗೆದುಕೊಳ್ಳೋಕೆ ರೆಡಿ ಇರ್ತಾರೆ. ಆದರೆ ಇಲ್ಲೊಬ್ಬ ಮಹಿಳೆಯು ತನ್ನ ಪ್ರಿಯಕರನನ್ನು ಖುಷಿಯಾಗಿರಿಸಲು ತನ್ನ ತಾಯಿಯ ಚಿನ್ನಾಭರಣಗಳನ್ನೇ ಕದ್ದು ಇದೀಗ ಪೊಲೀಸ್​ ಠಾಣೆ ಅತಿಥಿಯಾಗಿದ್ದಾಳೆ. ಮಗಳು ಹಾಗೂ ಆಕೆಯ ಪ್ರಿಯಕರನ ವಿರುದ್ಧ ಸ್ವತಃ ತಾಯಿಯೇ ಪೊಲೀಸ್​ ಠಾಣೆಗೆ ದೂರು ನೀಡಿದ್ದು ಆರೋಪಿಗಳಿಬ್ಬರನ್ನು ಬೆಂಗಳೂರು ಅಮೃತಹಳ್ಳಿ​ ಠಾಣೆಯ ಪೊಲೀಸರು ಬಂಧಿಸಿದ್ದಾರೆ.


ಜಕ್ಕೂರು ಲೇಔಟ್​ನ ನಿವಾಸಿಯಾಗಿದ್ದ ದೀಪ್ತಿ ತನ್ನ ಮೊದಲ ವಿವಾಹದಿಂದ ವಿಚ್ಚೇದನ ಪಡೆದುಕೊಂಡು ತಾಯಿಯೊಂದಿಗೆ ವಾಸವಿದ್ದಳು. ತಾಯಿ ರತ್ನಮ್ಮ ಟೇಲರಿಂಗ್​ ಕೆಲಸ ಮಾಡಿಕೊಂಡಿದ್ದರೆ ದೀಪ್ತಿ ಕೂಡ ಚಿಕ್ಕ ಪುಟ್ಟ ಕೆಲಸ ಮಾಡಿಕೊಂಡಿದ್ದಳು. ಡ್ರೈವಿಂಗ್​ ಕಲಿಯಬೇಕೆಂದು ಕ್ಲಾಸಿಗೆ ಸೇರಿದ್ದ ದೀಪ್ತಿಗೆ ಡ್ರೈವಿಂಗ್​ ಸ್ಕೂಲ್​ ಮಾಲೀಕ ಮದನ್​ ಜೊತೆ ಸ್ನೇಹವಾಗಿತ್ತು. ಈ ಸ್ನೇಹ ಪ್ರೀತಿಗೂ ತಿರುಗಿತ್ತು. ಅಂದಹಾಗೆ ಈ ಮದನ್​ ವಿವಾಹಿತ. ಎರಡು ಮಕ್ಕಳ ಅಪ್ಪನಾಗಿದ್ದರೂ ಸಹ ಈತ ದೀಪ್ತಿಯೊಂದಿಗೆ ಲವ್ವಿ ಡವ್ವಿ ಶುರು ಮಾಡಿಕೊಂಡಿದ್ದ.


ಮದನ್​ ದೀಪ್ತಿ ಬಳಿಯಲ್ಲಿ ನಿನ್ನ ತಾಯಿಯ ಆಭರಣಗಳನ್ನು ಕದ್ದುಕೊಂಡು ಬರುವಂತೆ ಹೇಳುತ್ತಿದ್ದ ಎನ್ನಲಾಗಿದೆ. ಈತನ ಮಾತಿಗೆ ಸಮ್ಮತಿ ನೀಡಿದ್ದ ದೀಪ್ತಿ ಹಂತ ಹಂತವಾಗಿ ಮನೆಯ ಬೀರುವಿನಲ್ಲಿದ್ದ ಆಭರಣಗಳನ್ನು ಕದಿಯುತ್ತಾ ಬಂದಿದ್ದಾಳೆ. ಇದರಿಂದ ತಾಯಿಗೆ ಅನುಮಾನ ಬಾರದಿರಲೆಂದು ನಕಲಿ ಆಭರಣಗಳನ್ನು ಅಲ್ಲಿ ಇಟ್ಟಿದ್ದಳು. ಹೆಚ್ಚು ಕಡಿಮೆ 1 ಕೆಜಿ ಚಿನ್ನ ಕಳ್ಳತನವಾದ ಬಳಿಕ ಅನುಮಾನಗೊಂಡ ತಾಯಿ ರತ್ನಮ್ಮ ಮಗಳನ್ನು ಪ್ರಶ್ನೆ ಮಾಡಿದ್ದಾರೆ. ಆದರೆ ದೀಪ್ತಿ ನನಗು ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂಬಂತೆ ವರ್ತಿಸಿದ್ದಾಳೆ.


ಆದರೂ ಮಗಳ ಮೇಲೆಯೇ ಅನುಮಾನ ಹೊಂದಿದ್ದ ರತ್ನಮ್ಮ ಸೀದಾ ಅಮೃತಹಳ್ಳಿ ಪೊಲೀಸ್​ ಠಾಣೆಗೆ ತೆರಳಿ ಮಗಳು ಹಾಗೂ ಆಕೆಯ ಲವ್ವರ್​ ವಿರುದ್ಧ ದೂರು ನೀಡಿದ್ದಾರೆ. ಕೂಡಲೇ ಪೊಲೀಸರು ಇಬ್ಬರನ್ನು ಎಳೆ ತಂದು ವಿಚಾರಣೆಗೊಳಪಡಿಸಿದ್ದಾರೆ. ಪೊಲೀಸರ ತನಿಖೆಯ ವೇಳೆ ಇಬ್ಬರೂ ಚಿನ್ನಭರಣ ಕದ್ದಿದ್ದನ್ನು ಒಪ್ಪಿಕೊಂಡಿದ್ದಾರೆ. ಈ ಎಲ್ಲಾ ಚಿನ್ನವನ್ನು ಅಡವಿಟ್ಟಿದಾಗಿ ಹೇಳಿದ್ದಾರೆ.

ಇದನ್ನು ಓದಿ : KL Rahul, Rohit Sharma :ಕೆಎಲ್ ರಾಹುಲ್, ರೋಹಿತ್ ಶರ್ಮಾ ವಿಶ್ರಾಂತಿ; ದಕ್ಷಿಣ ಆಫ್ರಿಕಾ ಟಿ20ಗೆ ಟೀಂ ಇಂಡಿಯಕ್ಕೆ ನೂತನ ನಾಯಕ

ಇದನ್ನೂ ಓದಿ : actor dileeps friend arrested : ಖ್ಯಾತ ನಟಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ದಿಲೀಪ್​ ಸ್ನೇಹಿತನ ಬಂಧನ

bengaluru woman arrested who stole mother jewellery for lover

Comments are closed.