ನವದೆಹಲಿ : ಪಾಕಿಸ್ತಾನವು ಭಾರತದ ವಿರುದ್ಧ ತಾಲಿಬಾನ್‌ಗಳನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದೆ ಮತ್ತು ಕಾಶ್ಮೀರದ ಮೇಲೆ ಸಂಚು ರೂಪಿಸಲು ಪ್ರಯತ್ನಿಸುತ್ತಿದೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಇದಕ್ಕೆ ತೆರೆ ಎಳೆದಿರುವ ತಾಲಿಬಾನ್ ಪಾಕಿಸ್ತಾನದ ನೀಚ ಭರವಸೆಗೆ ದೊಡ್ಡ ಹೊಡೆತ ನೀಡಿದ್ದು, ಕಾಶ್ಮೀರ ವಿಷಯದಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಖಾಸಗಿ ವಾಹಿನಿಯೊಂದರ ಜೊತೆ ಮಾತನಾಡಿರುವ ತಾಲಿಬಾನ್ ನಾಯಕ ಅನಸ್ ಹಕ್ಕಾನಿ ಕಾಶ್ಮೀರ ಸಮಸ್ಯೆಯು ಭಾರತ ಮತ್ತು ಪಾಕಿಸ್ತಾನದ ಆಂತರಿಕ ವಿಷಯ ಮತ್ತು ನಾವು ಕಾಶ್ಮೀರದ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದರು. ಅನಾಸ್ ಹಕ್ಕಾನಿ ಹಕ್ಕಾನಿ ನೆಟ್‌ವರ್ಕ್ ಸ್ಥಾಪಕ ಜಲಾಲುದ್ದೀನ್ ಹಕ್ಕಾನಿಯ ಕಿರಿಯ ಮಗ.
ಇದನ್ನೂ ಓದಿ: ಪಾಕಿಸ್ತಾನ ಗಡಿ ಪ್ರವೇಶಿಸಿದ್ದಕ್ಕೆ 8 ವರ್ಷ ಜೈಲು ಶಿಕ್ಷೆ : ಕೊನೆಗೂ ಬಂಧಮುಕ್ತರಾದ ಇಬ್ಬರು ಭಾರತೀಯರು
ಪಾಕಿಸ್ತಾನವನ್ನು ಬೆಂಬಲಿಸಲು ನೀವು ಕೂಡ ಕಾಶ್ಮೀರದಲ್ಲಿ ಮಧ್ಯಪ್ರವೇಶಿಸುವಿರಾ? ಎಂದು ಅನಸ್ ಹಕ್ಕಾನಿ ಅವರನ್ನು ಪ್ರಶ್ನಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ‘ಕಾಶ್ಮೀರವು ನಮ್ಮ ನ್ಯಾಯವ್ಯಾಪ್ತಿಯ ಒಂದು ಭಾಗವಲ್ಲ ಮತ್ತು ಹಸ್ತಕ್ಷೇಪವು ನೀತಿಗೆ ವಿರುದ್ಧವಾಗಿದೆ. ನಮ್ಮ ನೀತಿಯ ವಿರುದ್ಧ ನಾವು ಹೇಗೆ ಹೋಗಬಹುದು? ಹಾಗಾಗಿ ನಾವು ಕಾಶ್ಮೀರ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದರು.
ಕಾಶ್ಮೀರ ವಿಚಾರದಲ್ಲಿ ಹಕ್ಕಾನಿ ನೆಟ್‌ವರ್ಕ್ ಜೈಶ್-ಇ-ಮೊಹಮ್ಮದ್ ಮತ್ತು ಲಷ್ಕರ್-ಇ-ತೈಬಾವನ್ನು ಬೆಂಬಲಿಸುವುದಿಲ್ಲವೇ ? ಎಂಬ ಪ್ರಶ್ನೆಗೂ ಪ್ರತಿಕ್ರಿಯೆ ನೀಡಿರುವ ಅನಸ್ ಹಕ್ಕಾನಿ’ ನಾವು ಈ ಬಗ್ಗೆ ಹಲವು ಬಾರಿ ಸ್ಪಷ್ಟಪಡಿಸಿದ್ದೇವೆ ಮತ್ತು ಇದು ಕೇವಲ ಪ್ರಚಾರ ಎಂದು ಮತ್ತೊಮ್ಮೆ ಹೇಳುತ್ತಿದ್ದೇವೆ’ ಎಂದು ಹೇಳಿದರು.
ಇದನ್ನೂ ಓದಿ: ತಾಲಿಬಾನಿಗಳನ್ನು ಹೊಗಳಿ ಅಟ್ಟಕೇರಿಸಿದ ಪಾಕ್ ಕ್ರಿಕೆಟಿಗ ಅಫ್ರಿದಿ
ಭಾರತದೊಂದಿಗಿನ ಸಂಬಂಧದ ಕುರಿತು ಕೂಡ ಮಾತನಾಡಿರುವ ಅನಸ್ ಹಕ್ಕಾನಿ, ‘ನಾವು ಭಾರತದೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತೇವೆ. ಯಾರೂ ನಮ್ಮ ಬಗ್ಗೆ ತಪ್ಪು ಯೋಚಿಸುವುದನ್ನು ನಾವು ಬಯಸುವುದಿಲ್ಲ. ಭಾರತವು ನಮ್ಮ ಶತ್ರುಗಳಿಗೆ 20 ವರ್ಷಗಳ ಕಾಲ ಸಹಾಯ ಮಾಡಿತು. ಆದರೆ ನಾವು ಎಲ್ಲವನ್ನೂ ಮರೆತು ಸಂಬಂಧವನ್ನು ಮುಂದುವರಿಸಲು ಸಿದ್ಧರಿದ್ದೇವೆ ಎಂದಿದ್ದಾರೆ.
(Taliban Against Pakistan: What did the Taliban say about Kashmir?)