Whatsapp ಬಳಕೆಯ ವೇಳೆ ಇರಲಿ ಎಚ್ಚರ ! ಬ್ಯಾನ್‌ ಆಯ್ತು 30 ಲಕ್ಷ ವಾಟ್ಸಾಪ್‌ ಅಕೌಂಟ್

ನವದೆಹಲಿ : ವಾಟ್ಸಾಪ್‌ ಭಾರತದಲ್ಲಿರುವ ತನ್ನ ಬಳಕೆದಾರರ ಪೈಕಿ 30 ಲಕ್ಕಕ್ಕೂ ಹೆಚ್ಚು ಮಂದಿಯ ಖಾತೆಗಳನ್ನು ರದ್ದು ಮಾಡಿರುವುದಾಗಿ ತಿಳಿಸಿದೆ. ಜೂನ್ 16 ರಿಂದ ಜುಲೈ 31ರ ನಡುವಿನ 45 ದಿನಗಳ ಅವಧಿಯಲ್ಲಿ ಇಷ್ಟು ಮಂದಿಯ ಖಾತೆಗಳು ಬ್ಯಾನ್ ಆಗಿವೆ. ಇದೇ ವೇಳೆ ಖಾತೆ ಸಪೋರ್ಟ್‌ಗೆ 137 ಮನವಿಗಳು ಬಂದಿದ್ದು, ಖಾತೆಗಳನ್ನು ಬ್ಯಾನ್ ಮಾಡಲು 316 ಮನವಿಗಳನ್ನು ವಾಟ್ಸಾಪ್ ಸ್ವಿಕರಿಸಿದೆ.

ಭಾರತದ ಕಾನೂನುಗಳು ಹಾಗೂ ವಾಟ್ಸಾಪ್‌ ನ ಸೇವಾ ಷರತ್ತುಗಳ ಉಲ್ಲಂಘನೆ ಮತ್ತು ನಾವು ಸ್ವೀಕರಿಸಿದ ಬಳಕೆದಾರರ ವರದಿಗಳು ಹಾಗೂ ದೂರುಗಳನ್ನು ಆಧರಿಸಿ, ನಮ್ಮ ಪತ್ತೆ ಮತ್ತು ಕಡಿವಾಣದ ಕ್ರಮಗಳ ಮೂಲಕ ಇಷ್ಟು ಖಾತೆಗಳ ವಿರುದ್ಧ ಕ್ರಮ ತೆಗೆದುಕೊಂಡಿದ್ದೇವೆ” ಎಂದು ಕಂಪನಿ ತನ್ನ ಅಧಿಕೃತ ಪ್ರಕಟಣೆಯೊಂದರಲ್ಲಿ ತಿಳಿಸಿದೆ.

ಇದನ್ನೂ ಓದಿ: WhatsApp ಪರಿಚಯಿಸಿದೆ ಹೊಸ ಫೀಚರ್ಸ್‌ : ಹಣದ ಜೊತೆಗೆ ತಿಳಿಸಿ Payments Background

ಬ್ಯಾನ್ ಆದ 95 ಪ್ರತಿಶತ ಖಾತೆಗಳಿಂದ ಸ್ಪಾಮ್ ಸಂದೇಶಗಳು ರವಾನೆಯಾಗುತ್ತಿದ್ದವೆಂದು ಕಂಪನಿ ತಿಳಿಸಿದೆ. ಮೇ 15-ಜೂನ್ 15ರ ನಡುವಿನ ಅವಧಿಯಲ್ಲಿ ಇಂಥದ್ದೇ ಕಾರಣಗಳಿಂದ 20 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ರದ್ದು ಮಾಡಿದ್ದಾಗಿ ವಾಟ್ಸಾಪ್ ತನ್ನ ವರದಿಯಲ್ಲಿ ತಿಳಿಸಿತ್ತು.

ಇದನ್ನೂ ಓದಿ: Google ಸಂಸ್ಥೆಗೆ 1948 ಕೋಟಿ ದಂಡ ವಿಧಿಸಿದ ಫ್ರಾನ್ಸ್

( 30 Lack whatsApp accounts banned in India)

Comments are closed.