ಪಾಕಿಸ್ತಾನ ಗಡಿ ಪ್ರವೇಶಿಸಿದ್ದಕ್ಕೆ 8 ವರ್ಷ ಜೈಲು ಶಿಕ್ಷೆ : ಕೊನೆಗೂ ಬಂಧಮುಕ್ತರಾದ ಇಬ್ಬರು ಭಾರತೀಯರು

ನವದೆಹಲಿ : ಭಾರತ ಪಾಕಿಸ್ತಾನ ನಡುವಿನ ವೈರತ್ವ ಇಂದಿಗೂ ಮುಂದುವರಿದಿದೆ. ಗಡಿಭಾಗದಲ್ಲಿ ಜನರು ಓಡಾಡೋದಕ್ಕೆ ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಅದ್ರಲ್ಲೂ ಪಾಕಿಸ್ತಾನ ಗಡಿ ಪ್ರವೇಶಿಸಿದ್ದ ಇಬ್ಬರು ಭಾರತೀಯರು ಬರೋಬ್ಬರಿ 8 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಇದೀಗ ಬಿಡುಗಡೆಯಾಗಿದ್ದಾರೆ.

ಅಕ್ರಮ ಗಡಿ ಪ್ರವೇಶಿಸಿದ ಹಿನ್ನೆಲೆಯಲ್ಲಿ 8 ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ್ದ ಇಬ್ಬರು ಭಾರತೀಯರನ್ನು ಸೋಮವಾರ ಪಾಕಿಸ್ತಾನ ಬಿಡುಗಡೆ ಮಾಡಿದ್ದು, ಅಠಾರಿ- ವಾಘಾಗಡಿ ಮೂಲಕ ಗಡಿ ಭದ್ರತಾ ಪಡೆಗಳಿಗೆ ಹಸ್ತಾಂತರಿಸಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Yogi adityanath: ಮಥುರಾದಲ್ಲಿ ಮಾಂಸ ಮತ್ತು ಮದ್ಯ ಮಾರಾಟ ನಿಷೇಧ: ವ್ಯಾಪಾರಿಗಳಿಗೆ ಶಾಕ್ ನೀಡಿದ ಸಿಎಂ

2013ರಲ್ಲಿ ಶರ್ಮಾ ರಜಪೂತ್ ಹಾಗೂ ರಾಮ್ ಬುಹದಾರ್ ಎಂಬುವವರು ಕಾಶ್ಮೀರದ ಮೂಲಕ ಪಾಕಿಸ್ತಾನ ಗಡಿ ಪ್ರದೇಶವನ್ನು ದಾಟಿದ್ದರು. ಈ ವೇಳೆ ಪಾಕಿಸ್ತಾನ ಸೇನಾ ಪಡೆಗಳು ಇಬ್ಬರನ್ನೂ ಬಂಧಸಿತ್ತು. ಈ ವೇಳೆ ಇಬ್ಬರೂ ಮಾನಸಿಕ ಅಸ್ವಸ್ಥರೆಂದು ತಿಳಿದುಬಂದಿತ್ತು. ವ್ಯಕ್ತಿಗಳ ಭಾವಚಿತ್ರ ಹಾಗೂ ಇತರೆ ಮಾಹಿತಿಗಳನ್ನು ಪಾಕಿಸ್ತಾನ ಹಂಚಿಕೊಂಡಿತ್ತು.

ಈ ಮಾಹಿತಿಯನ್ನು ಪರಿಶೀಲನೆ ನಡೆಸಲಾಗಿತ್ತು. ಬಳಿಕ ಇಬ್ಬರೂ ಭಾರತೀಯರೆಂಬುದು ಸಾಬೀತಾಗಿತ್ತು. ಇದರಂತೆ ಪಾಕಿಸ್ತಾನ ಇಬ್ಬರನ್ನೂ ಸೋಮವಾರ ಬಿಎಸ್‌ಎಫ್’ಗೆ ಹಸ್ತಾಂತರ ಮಾಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Modi Mann Ki Baat : ಇಂದು ಮೋದಿ ಮನ್‌ ಕೀ ಬಾತ್ 80ನೇ ಆವೃತ್ತಿ

ಅಕ್ರಮ ಗಡಿ ದಾಟಿದ ಹಿನ್ನೆಲೆಯಲ್ಲಿ ಈ ವರೆಗೂ ಪಾಕಿಸ್ತಾನದ ಪಡೆಗಳು 19 ಮಂದಿ ಭಾರತೀಯರನ್ನು ವಿವಿಧ ಭಾಗಗಳಲ್ಲಿ ಬಂಧನಕ್ಕೊಳಪಡಿಸಿದ್ದಾರೆ. ಎಲ್ಲರೂ ವಿವಿಧ ಜೈಲುಗಳಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ. ಸಂಪೂರ್ಣ ತನಿಖಾ ವರದಿ ಬಳಿಕ ಪ್ರಕರಣ ಕುರಿತು ಫೆಡರಲ್ ರಿವ್ಯೂ ಬೋರ್ಡ್ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

(Two Indians who have crossed the Pakistan border have been sentenced to eight years in prison.)

Comments are closed.