ನವದದಲಿ : ಪ್ರಧಾನಿಯಾಗಿ ದೇಶವನ್ನು ಮುನ್ನಡೆಸುವ ಬದಲು, ಸರ್ಕಾರದ ಆಡಳಿತ ವ್ಯವಸ್ಥೆ ನಡೆಸುವುದೇ ಅವರಿಗೆ ದೊಡ್ಡ ಸವಾಲಾಗಿದೆ. ಅದಕ್ಕಾಗಿ ಬೇರೆ ದಾರಿಯೇ ಕಾಣದೇ ಸಾಲದ ಕೂಪಕ್ಕೆ ಪಾಕಿಸ್ತಾನವನ್ನು ದೂಡುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಇಮ್ರಾನ್ ಖಾನ್ ಆಡಳಿತದ ಪಾಕ್ ಮೇಲೆ ಹೊರಿಸಿರುವ ಸಾಲದ ಮೊತ್ತ ಬರೋಬ್ಬರು 149 ಲಕ್ಷ ಕೋಟಿ ರೂ.!
ಹಿಂದಿನ ಸರ್ಕಾರಗಳ ದುರಾಡಳಿತ, ಆರ್ಥಿಕ ಮುಗ್ಗಟ್ಟು, ಉಗ್ರರ ಪೋಷಣೆಗೆ ವಿದೇಶಿ ರಾಷ್ಟ್ರಗಳಿಂದ ಕೋಟಿಗಟ್ಟಲೆ ಸಾಲ ಪಡೆಯುವ ಚಾಳಿಗಳಿಂದ ಹೊರಬರದ ಪಾಕಿಸ್ತಾನ ಕೆಲವೇ ವರ್ಷಗಳಲ್ಲಿ ‘ದಿವಾಳಿ ರಾಷ್ಟ್ರ’ ಆಗಲಿದೆ ಎಂಬ ಆತಂಕವನ್ನು ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ವ್ಯಕ್ತಪಡಿಸಿದೆ.
ಇದನ್ನೂ ಓದಿ: ತಾಲಿಬಾನಿಗಳಿಗೆ ಎದುರಾಯ್ತು ದೊಡ್ಡ ಸವಾಲು : ಆಫ್ಘಾನ್‍ನಲ್ಲಿ ಆಹಾರದ ಕೊರತೆ
ಪಾಕಿಸ್ತಾನವು ಅಧಿಕೃತವಾಗಿ ತನ್ನ ಮೇಲೆ ಹೇರಿಕೊಂಡು ದಾಖಲೆಗಳಲ್ಲಿ ತೋರಿಸಿರುವ ಸಾಲದ ಮೊತ್ತ ಸುಮಾರು 400 ಲಕ್ಷ ಕೋಟಿ ರೂಪಾಯಿ. ಹೌದು, ಆ ಪೈಕಿ ಶೇ. 80 ರಷ್ಟು ಸಾಲವನ್ನು ಕಳೆದ 10 ವರ್ಷಗಳಲ್ಲಿ ನವಾಜ್ ಷರೀಫ್ ಮತ್ತು ಇಮ್ರಾನ್ ಖಾನ್ ಆಡಳಿತದಲ್ಲಿ ಮಾಡಲಾಗಿದೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸ್ಥಿತಿ ಯಾವರಿತಿ ಯಾಗಿದೆ ಎಂದರೆ ಅಧ್ಯಕ್ಷರ ಕಚೇರಿಯ ದಿನನಿತ್ಯದ ಖರ್ಚುವೆಚ್ಚಕ್ಕಾಗಿ ಎಮ್ಮೆಗಳು, ಕಾರುಗಳನ್ನು ಮಾರಿಕೊಳ್ಳುತ್ತಿರುವ ದುಃಸ್ಥಿತಿ ಎದುರಾಗಿದೆ.
ಇದನ್ನೂ ಓದಿ: ತಾಲಿಬಾನ್ ಆಡಳಿತವನ್ನು ಮಾನ್ಯ ಮಾಡುವುದಕ್ಕೆ ಆತುರವೇನು ಇಲ್ಲ : ಅಮೇರಿಕ
(State Bank of Pakistan said Pakistan will become a bankrupt nation)