ಭಾನುವಾರ, ಏಪ್ರಿಲ್ 27, 2025
HomeNationalYashwant Sinha : ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಯಾಗಿ ಯಶವಂತ್​ ಸಿನ್ಹಾ ಅಧಿಕೃತ ಘೋಷಣೆ

Yashwant Sinha : ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಯಾಗಿ ಯಶವಂತ್​ ಸಿನ್ಹಾ ಅಧಿಕೃತ ಘೋಷಣೆ

- Advertisement -

Yashwant Sinha : ದೇಶದಲ್ಲಿ ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಯಾರ್ಯಾರು ಕಣಕ್ಕೆ ಇಳಿಯಲಿದ್ದಾರೆ ಎಂಬ ಪ್ರಶ್ನೆ ಕಳೆದ ಅನೇಕ ದಿನಗಳಿಂದ ರಾಜಕೀಯ ವಲಯದಲ್ಲಿ ಹರಿದಾಡುತ್ತಲೇ ಇದೆ. ವಿರೋಧ ಪಕ್ಷವು ಜಂಟಿಯಾಗಿ ಯಾವ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿದೆ ಎಂಬ ಪ್ರಶ್ನೆಗೆ ದಿನಕ್ಕೊಂದು ಉತ್ತರ ಸಿಗುತ್ತಿತ್ತು. ಆದರೆ ಇಂದು ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಕೇಂದ್ರದ ಮಾಜಿ ಸಚಿವ ಯಶವಂತ್​ ಸಿನ್ಹಾರ ಹೆಸರು ಅಧಿಕೃತವಾಗಿ ಘೋಷಣೆಯಾಗಿದೆ,ಯಶವಂತ್​ ಸಿನ್ಹಾ ದಿವಂಗತ ಅಟಲ್​ ಬಿಹಾರಿ ವಾಜಪೇಯಿ ನೇತೃತ್ವದ ಎನ್​ಡಿಎ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಬಿಜೆಪಿಯು ತನ್ನ ರಾಷ್ಟ್ರಪತಿ ಅಭ್ಯರ್ಥಿಯನ್ನು ಇನ್ನಷ್ಟೇ ಆಯ್ಕೆ ಮಾಡಬೇಕಿದೆ.


ಎನ್​​ಸಿಪಿ ಮುಖ್ಯಸ್ಥ ಶರದ್​ ಪವಾರ್​ ಕರೆದಿದ್ದ ಸಭೆಯಲ್ಲಿ ವಿರೋಧ ಪಕ್ಷದ ನಾಯಕರು ಯಶವಂತ್​ ಸಿನ್ಹಾರ ಹೆಸರನ್ನು ಅಧಿಕೃತವಾಗಿ ಆಯ್ಕೆ ಮಾಡಿದ್ದಾರೆ. ವಿರೋಧ ಪಕ್ಷದಿಂದ ರಾಷ್ಟ್ರಪತಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಪಟ್ಟಿಯಲ್ಲಿ ಶರದ್​ ಪವಾರ್, ಜಮ್ಮು & ಕಾಶ್ಮೀರದ ಮಾಜಿ ಸಿಎಂ ಫಾರೂಕ್​ ಅಬ್ದುಲ್ಲಾ ಹಾಗೂ ಮಹಾತ್ಮ ಗಾಂಧಿ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಹೆಸರು ಕೇಳಿ ಬಂದಿತ್ತು.


“ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ನಾವು ಸಾಮಾನ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಲು ನಿರ್ಧರಿಸಿದ್ದೇವೆ ಮತ್ತು ಮೋದಿ ಸರ್ಕಾರವು ಮತ್ತಷ್ಟು ಹಾನಿ ಮಾಡದಂತೆ ತಡೆಯಲು ನಿರ್ಧರಿಸಿದ್ದೇವೆ. ಇಂದು ನಡೆದ ಸಭೆಯಲ್ಲಿ ನಾವು ಯಶವಂತ್ ಸಿನ್ಹಾರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದೇವೆ. ನಾವು ಎಲ್ಲಾ ರಾಜಕೀಯ ಪಕ್ಷಗಳಿಗೆ ಮತ ನೀಡುವಂತೆ ಮನವಿ ಮಾಡುತ್ತೇವೆ ಎಂದು ಪ್ರತಿ ಪಕ್ಷಗಳು ಜಂಟಿ ಹೇಳಿಕೆಯನ್ನು ಹೊರಡಿಸಿವೆ.
ಈ ಜಂಟಿ ಹೇಳಿಕೆಯಲ್ಲಿ ಬಿಜೆಪಿ ಹಾಗೂ ಅದರ ಮೈತ್ರಿಕೂಟಗಳಿಗೆ ಸಿನ್ಹಾರ ಉಮೇದುವಾರಿಕೆಯನ್ನು ಬೆಂಬಲಿಸುವಂತೆ ಮನವಿ ಕೂಡ ಮಾಡಲಾಗಿದೆ. ಬಿಜೆಪಿಯು ಈ ರೀತಿ ಮಾಡಿದಲ್ಲಿ ಯಶವಂತ್​ ಸಿನ್ಹಾ ರಾಷ್ಟ್ರಪತಿಯಾಗಿ ಅವಿರೋಧವಾಗಿ ಆಯ್ಕೆಯಾಗಬಹುದಾಗಿದೆ. ಯಶವಂತ್ ಸಿನ್ಹಾ ಅವರ ಪ್ರಚಾರಕ್ಕೆ ಸಮಿತಿ ರಚಿಸಲಾಗಿದೆ.


ನಿನ್ನೆ ತೃಣಮೂಲ ಕಾಂಗ್ರೆಸ್​ ನಾಯಕ ಯಶವಂತ್​ ಸಿನ್ಹಾ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾಗುತ್ತಿರುವುದರ ಬಗ್ಗೆ ದೊಡ್ಡ ಸುಳಿವೊಂದನ್ನು ಬಿಟ್ಟುಕೊಟ್ಟಿದ್ದಾರೆ. ವಿರೋಧ ಪಕ್ಷಗಳು ಪಕ್ಷದ ಮಿತಿಯನ್ನು ಮೀರಿ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಹೇಳಿದ್ದರು.

ಇದನ್ನು ಓದಿ : ನಟ ದಿಗಂತ್​ ಕತ್ತಿಗೆ ಏಟು ಬೀಳಲು ಕಾರಣವಾಯ್ತು ಸಮ್ಮರ್​ ಶಾಟ್​ : ಇಲ್ಲಿದೆ ಘಟನೆ ಬಗೆಗಿನ ಪಿನ್​ ಟು ಪಿನ್​ ಡಿಟೇಲ್ಸ್​​

ಇದನ್ನೂ ಓದಿ : Ayodhya Ram Mandir : ರಾಮಮಂದಿರ ನಿರ್ಮಾಣ ಸಮಿತಿಗೆ ಶಾಕ್ : ದೇಣಿಗೆ ಮೊತ್ತದ 22 ಕೋಟಿ ರೂ. ಚೆಕ್ ತಿರಸ್ಕೃತ

Yashwant Sinha Is Opposition Choice For President

RELATED ARTICLES

Most Popular