ಕುಂದಾಪುರಕ್ಕೆ ಬಂದ ಅಲ್ವಿನ್‌ ಪ್ರಕಾಶ್‌ ಕುಂದರ್‌ ಮೃತದೇಹ

ಅಲ್ವಿನ್‌ ಪ್ರಕಾಶ್‌ ಕುಂದರ್‌ ಅವರನ್ನು 9 ತುಂಡುಗಳನ್ನಾಗಿ ಕತ್ತರಿಸಿ ಅವರದೇ ಕಾರಿನ ಢಿಕ್ಕಿಯಲ್ಲಿ ಇರಿಸಲಾಗಿತ್ತು.

By ಅಶ್ವಥ್ ಆಚಾರ್ಯ | Ashwath Acharya

1 min read

WhatsAppPost
Kundapura Dubai Sharja Alvin Prakash Kunder Case Body Reach udupi
Kundapura Dubai Sharja Alvin Prakash Kunder Case Body Reach udupi

ಕುಂದಾಪುರ : ದುಬೈನ ಶಾರ್ಜಾದಲ್ಲಿ ಅಮಾನುಷ ರೀತಿಯಲ್ಲಿ ಕೊಲೆಗೀಡಾಗಿದ್ದ ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಅಲ್ವಿನ್‌ ಪ್ರಕಾಶ್‌ ಕುಂದರ್‌ ( Alvin Prakash Kunder) ಮೃತದೇಹ ಕೊನೆಗೂ ತವರು ತಲುಪಿದೆ. ಕುಂದಾಪುರದ ಶಾಸ್ತ್ರೀ ಸರ್ಕಲ್‌ ಬಳಿಯಲ್ಲಿರುವ ಚರ್ಚ್‌ನ ಆವರಣದಲ್ಲಿ ಅಂತ್ಯಕ್ರೀಯೆ ನೆರವೇರಲಿದೆ.

ಹಲವು ವರ್ಷಗಳಿಂದಲೂ ದುಬೈನಲ್ಲಿ ನೆಲೆಸಿದ್ದ ಅಲ್ವಿನ್‌ ಪ್ರಕಾಶ್‌ ಕುಂದರ್‌ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಶವವಾಗಿ ಪತ್ತೆಯಾಗಿದ್ದರು. ಅಲ್ವಿನ್‌ ಪ್ರಕಾಶ್‌ ಕುಂದರ್‌ ಅವರನ್ನು 9 ತುಂಡುಗಳನ್ನಾಗಿ ಕತ್ತರಿಸಿ ಅವರದೇ ಕಾರಿನ ಢಿಕ್ಕಿಯಲ್ಲಿ ಇರಿಸಲಾಗಿತ್ತು. ಸುಮಾರು 2 ತಿಂಗಳ ಹಿಂದೆಯೇ ಅವರನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಪ್ರಕಾಶ್‌ ಕುಂದರ್‌ ಅವರ ಮೃತದೇಹ ಪತ್ತೆಯಾಗೋಕೆ ಮೊದಲೇ ಅವರ ಪತ್ನಿ ಟೀನಾ ಹಾಗೂ ಆಕೆಯ ಮಗ ನಾಪತ್ತೆಯಾಗಿದ್ದರು. ಅಲ್ವಿನ್‌ ಪ್ರಕಾಶ್‌ ಕುಂದರ್‌ ಅವರನ್ನು ಅವರ ಪತ್ನಿ ಟೀನಾ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಇದೀಗ ಅಲ್ವಿನ್‌ ಪ್ರಕಾಶ್‌ ಕುಂದರ್‌ ಅವರ ಮೃತದೇಹವನ್ನು ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ವಿಮಾನದ ಮೂಲಕ ಕರೆತರಲಾಗಿದೆ. ಮಂಗಳೂರಿನಿಂದ ಕುಂದಾಪುರದ ಹೊನ್ನನ ಕೇರಿಯಲ್ಲಿರುವ ಅವರ ನಿವಾಸಕ್ಕೆ ತರಲಾಗಿದೆ.

9 ತುಂಡುಗಳನ್ನಾಗಿ ಕತ್ತರಿಸಿ ಕಾರಿನಲ್ಲಿ ಬಚ್ಚಿಟ್ಟ ಪತ್ನಿ

ಕುಂದಾಪುರ ಮೂಲದ ಅಲ್ವಿನ್‌ ಪ್ರಕಾಶ್‌ ಕುಂದರ್‌ ಅವರು ಕಳೆದ ಹಲವು ವರ್ಷಗಳಿಂದಲೂ ದುಬೈನ ಶಾರ್ಜಾದಲ್ಲಿ ನೆಲೆಸಿದ್ದರು. ಅವರ ಓರ್ವ ಮಗ ಮೃತಪಟ್ಟಿದ್ದು, ಮತ್ತೋರ್ವ ಮಗ ಹಾಗೂ ಪತ್ನಿಯ ಜೊತೆಗೆ ನೆಲೆಸಿದ್ದರು. ಕಳೆದ ಎರಡು ತಿಂಗಳ ಹಿಂದೆಯೇ ಅಲ್ವಿನ್‌ ಪ್ರಕಾಶ್‌ ಕುಂದರ್‌ ಅವರ ಪತ್ನಿ ತನ್ನ ಗಂಡನನ್ನು ಕೊಲೆಗೈದು ಮೃತದೇಹಗಳನ್ನು 9 ತುಂಡುಗಳನ್ನಾಗಿ ಕತ್ತರಿಸಿ ಕಾರಿನ ಢಿಕ್ಕಿಯಲ್ಲಿ ಇರಿಸಿ ಎಸ್ಕೇಪ್‌ ಆಗಿದ್ದಳು ಎಂಬ ಆರೋಪವಿದೆ.

ಅಲ್ವಿನ್‌ ಪ್ರಕಾಶ್‌ ಕುಂದರ್‌ ಅವರ ಮೃತದೇಹ ತವರು ಸೇರುತ್ತಿದ್ದಂತೆಯೇ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ಮತ್ತೊಂದೆಡೆಯಲ್ಲಿ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದುಬೈ ಪೊಲೀಸರು ಪ್ರಕರಣ ಧಾಖಲಿಸಿಕೊಂಡಿದ್ದು ತನಿಖೆಯನ್ನು ಆರಂಭಿಸಿದ್ದಾರೆ. ಪೊಲೀಸರ ತನಿಖೆಯ ನಂತರವಷ್ಟೇ ಸತ್ಯಾಸತ್ಯತೆ ಹೊರ ಬರೋದಕ್ಕೆ ಸಾಧ್ಯ.

Topics

ಸಂಬಂಧಿತ ಸುದ್ದಿಗಳು