worldಪ್ರಮುಖ ಸುದ್ದಿಗಳು

Fly Dubai Smit Machhar : 180 ಜೀವ ಉಳಿಸಿದ 'ಫ್ಲೈದುಬೈ'ಹೀರೋ : ಯಾರು ಈ ಭಾರತೀಯ ಪೈಲಟ್ ಕ್ಯಾಪ್ಟನ್ ಸಾಹಸಿ ಸ್ಮಿತ್ ಮಚ್ಛಾರ್

ಭಾರತೀಯ ಮೂಲದ ಹಿರಿಯ ಪೈಲೆಟ್‌ ಕ್ಯಾಪ್ಟನ್ ಸ್ಮಿತ್ ಮಚ್ಛಾರ್ (Captain Smit Machhar) ಗಾಯದ ನೋವಿನ ನಡುವಲ್ಲೇ ವಿಮಾನವನ್ನು ರಕ್ಷಿಸಿ 180 ಜನರ ಪ್ರಾಣ ರಕ್ಷಿಸುವ ಮೂಲಕ ನಿಜವಾದ 'ಹೀರೋ'

By Arun Gundmi | ಅರುಣ್‌ ಗುಂಡ್ಮಿ · Editor-in-Chief

1 min read

WhatsAppPost
indian pilot captain smit machhar saves flydubai flight israel
indian pilot captain smit machhar saves flydubai flight israel

ದುಬೈ/ಟೆಲ್ ಅವಿವ್: ದುಬೈನಿಂದ ಹೊರಟು ಇಸ್ರೇಲ್‌ನ ಬೆನ್ ಗುರಿಯನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಾಗುತ್ತಿದ್ದ 'ಫ್ಲೈದುಬೈ' (flydubai) FZ 1073 ವಿಮಾನ ಪತನಕ್ಕೆ ಯತ್ನ ನಡೆದಿತ್ತು. ಆದರೆ ಭಾರತೀಯ ಮೂಲದ ಹಿರಿಯ ಪೈಲೆಟ್‌ ಕ್ಯಾಪ್ಟನ್ ಸ್ಮಿತ್ ಮಚ್ಛಾರ್ (Captain Smit Machhar) ಚಾಕು ಇರಿತದ ಗಾಯದ ನೋವಿನ ನಡುವಲ್ಲೇ ವಿಮಾನವನ್ನು ರಕ್ಷಿಸಿ 180 ಜನರ ಪ್ರಾಣ ರಕ್ಷಿಸುವ ಮೂಲಕ ನಿಜವಾದ 'ಹೀರೋ' ಎನಿಸಿಕೊಂಡಿದ್ದಾರೆ.

ಕಾಕ್‌ಪಿಟ್‌ನಲ್ಲಿ ನಡೆದಿದ್ದೇನು ?

ಫ್ಲೈದುಬೈ ವಿಮಾನ ಆಕಾಶದಲ್ಲಿ ಹಾರಾಟ ನಡೆಸುತ್ತಿತ್ತು. ಈ ವೇಳೆಯಲ್ಲಿ ಕಾಕ್‌ಪಿಟ್‌ನಲ್ಲಿ (ಪೈಲಟ್ ಕೊಠಡಿಯಲ್ಲಿ) ವಾಗ್ವಾದ ನಡೆದಿದೆ. ಇಡೀ ವಿಮಾನದ ವ್ಯವಸ್ಥೆಯನ್ನೇ ಹಾಳು ಮಾಡಿ ವಿಮಾನವನ್ನು ಪತನಗೊಳಿಸಲು ಸಹ ಪೈಲೆಟ್‌ ಯತ್ನಿಸಿದ್ದಾನೆ. ಅಷ್ಟೇ ಅಲ್ಲದೇ ಪೈಲೆಟ್‌ ಆಗಿದ್ದ ಕ್ಯಾಪ್ಟನ್‌ ಸ್ಮಿತ್‌ ಮಚ್ಚಾರ್‌ ಮೇಲೆ ಚಾಕುವಿನಿಂದ ಇರಿದಿದ್ದಾನೆ.

ಗಾಯಗೊಂಡರೂ ಕೂಡ ಎದೆಗುಂದದ ಪೈಲೆಟ್‌ ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ಇತರ ಸಿಬ್ಬಂದಿ ಹಾಗೂ ಪ್ರಯಾಣಿಕರ ಸಹಾಯದಿಂದ ದುಷ್ಕರ್ಮಿಯನ್ನು ತಡೆದು ವಿಮಾನವನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಪೈಲೆಟ್‌ ಹಾಗೂ ಸಹ ಪೈಲೆಟ್‌ ನಡುವಿನ ಸಂಘರ್ಷದ ಸಮಯದಲ್ಲಿ ವಿಮಾನ ಕೇವಲ 2 ನಿಮಿಷಗಳ ಅವಧಿಯಲ್ಲಿ ಬರೋಬ್ಬರಿ 17,400 ಅಡಿಗಳಷ್ಟು ಕೆಳಕ್ಕೆ ಧುಮುಕಿತ್ತು.

ಈ ವೇಳೆಯಲ್ಲಿ ಪೈಲೆಟ್‌ ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ವಿಮಾನವನ್ನು ಮತ್ತೆ ಸಹಜ ಸ್ಥಿತಿಗೆ ತಂದಿದ್ದಾರೆ. ನಂತರ ವಿಮಾನದ ಮಾರ್ಗವನ್ನು ಬದಲಿಸಿ ಸೌದಿ ಅರೇಬಿಯಾದ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿಸಿದ್ದಾರೆ.

ಯಾರು ಈ ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ?

180 ಮಂದಿಯ ಪ್ರಾಣ ಕಾಪಾಡುವ ಮೂಲಕ ವಿಶ್ವದ ಕಣ್ಣಿಗೆ ಹೀರೋ ಎನಿಸಿರುವ ಈ ಕ್ಯಾಪ್ಟನ್‌ ಸ್ಮಿತ್‌ ಮಚ್ಚಾರ್‌ ಯಾರು ಅನ್ನೋ ಬಗ್ಗೆ ಚರ್ಚೆ ನಡೆಯುತ್ತಿದೆ. ಬೋಯಿಂಗ್ 737 ವಿಮಾನಗಳನ್ನು ಚಲಾಯಿಸುವಲ್ಲಿ ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ಅವರಿಗೆ 13 ವರ್ಷಗಳಿಗೂ ಹೆಚ್ಚು ಕಾಲದ ವಾಣಿಜ್ಯ ವಿಮಾನಯಾನ ಅನುಭವವಿದೆ. ಅಷ್ಟೇ ಅಲ್ಲ 'ಲೈನ್ ಟ್ರೈನಿಂಗ್ ಕ್ಯಾಪ್ಟನ್' ಆಗಿಯೂ ಸೇವೆ ಸಲ್ಲಿಸಿದ್ದಾರೆ. ಇನ್ನು 9,750 ಗಂಟೆಗಳಿಗೂ ಹೆಚ್ಚು ಕಾಲ ವಿಮಾನಯಾನ ನಡೆಸಿದ ಅನುಭವ ಹೊಂದಿರುವ ಹಿರಿಯ ಪೈಲೆಟ್‌ ಎನಿಸಿಕೊಂಡಿದ್ದಾರೆ.

ಲಿಂಕ್ಡ್‌ ಇನ್‌ ನೀಡಿರುವ ಮಾಹಿತಿಯ ಪ್ರಕಾರ, ಪೈಲೆಟ್‌ ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ಅವರು ಕಳೆದ ನಾಲ್ಕು ವರ್ಷಗಳಿಂದಲೂ ಫ್ಲೈದುಬೈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ 'ಸ್ಪೈಸ್‌‌ಜೆಟ್' (SpiceJet) ನಲ್ಲಿ 10 ವರ್ಷಗಳ ಕಾಲ ಹಿರಿಯ ಕಮಾಂಡರ್ ಮತ್ತು ಲೈನ್ ಟ್ರೈನಿಂಗ್ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದ್ದರು. 2022ರ ಜೂನ್ ನಲ್ಲಿ ಸ್ಪೈಸ್‌ಜೆಟ್‌ಗೆ ರಾಜೀನಾಮೆ ನೀಡಿ ಫ್ಲೈದುಬೈಗೆ ಸೇರ್ಪಡೆ ಆಗಿದ್ದರು.

ಫ್ಲೈ ದುಬೈ ವಿಮಾನ ಹೈಜಾಕ್‌ ಬಗ್ಗೆ ತನಿಖೆ

ಫ್ಲೈದುಬೈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರಲ್ಲರೂ ಕೂಡ ಭಾರತ, ಇಸ್ರೇಲ್‌ ಹಾಗೂ ಯುಎಇ (UAE) ದೇಶದ ನಾಗರೀಕರಾಗಿದ್ದಾರೆ. ಸದ್ಯ ಎಲ್ಲಾ 180 ಪ್ರಯಾಣಿಕರು ಕೂಡ ಸುರಕ್ಷಿತರಾಗಿದ್ದಾರೆ. ಆರೋಪಿಯನ್ನು ಸ್ಥಳದಲ್ಲಿಯೇ ಬಂಧಿಸಲಾಗಿದೆ. ಸೌದಿ ಅರೇಬಿಯಾದ ಅಧಿಕಾರಿಗಳು ಆರೋಪಿಯನ್ನು ತನಿಖೆಗೆ ಒಳಪಡಿಸಿದ್ದಾರೆ.

ಘಟನೆಯ ಬೆನ್ನಲ್ಲೇ ಇದೀಗ ಇಸ್ರೇಲ್‌ಗೆ ತೆರಳುವ ಎಲ್ಲಾ ವಿಮಾನ ಸೇವೆಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ಫ್ಲೈದುಬೈ ಘೋಷಿಸಿದೆ. ಈ ಘಟನೆ ಇದೀಗ ಇಡೀ ವಿಶ್ವವನ್ನೇ ಆತಂಕಕ್ಕೆ ದೂಡಿದೆ.

Topics

ಸಂಬಂಧಿತ ಸುದ್ದಿಗಳು